For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ ತಾಯಿಯ ಆಸೆ ಈಡೇರಿಸಿದ ದಳಪತಿ ವಿಜಯ್

  By ಫಿಲ್ಮ್ ಡೆಸ್ಕ್
  |

  ದಕ್ಷಿಣ ಭಾರತದ ಸಿನಿಮಾರಂಗದ ಖ್ಯಾತ ನಟ ದಳಪತಿ ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಮಾಸ್ಟರ್ ಸಿನಿಮಾ ಇದೇ ತಿಂಗಳು 13ರಂದು ರಿಲೀಸ್ ಆಗುತ್ತಿದೆ. ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಮಗ ಹೇಗೆ ಕೆಲಸ ಮಾಡ್ತಾನೆ ಅಂತ Vijay ಬಳಿ ಕೇಳಿದ VijaySethupathi ತಾಯಿ | Filmibeat Kannada

  ವಿಶೇಷ ಎಂದರೆ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ದಳಪತಿ ವಿಜಯ್ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಮೊದಲ ಬಾರಿಗೆ ಇಬ್ಬರು ಕಲಾವಿದರೂ ಮುಖಾಮುಖಿಯಾಗಿದ್ದು, ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸದ್ಯ ಪ್ರಮೋಷನ್ ನಲ್ಲಿ ಸಿನಿಮಾತಂಡ ನಿರತವಾಗಿದೆ. ಈ ಸಮಯದಲ್ಲಿ ವಿಜಯ್ ಸೇತುಪತಿ ತಾಯಿ ದಳಪತಿ ವಿಜಯ್ ಭೇಟಿಯಾದ ಇಂಟರಸ್ಟಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

  ವಿಜಯ್ ಅಭಿಮಾನಿಗಳಿಗೆ 'ಮಾಸ್ಟರ್' ಸಿನಿಮಾದಿಂದ ಪ್ರತಿದಿನ ಕಾದಿದೆ ಸರ್ಪ್ರೈಸ್ವಿಜಯ್ ಅಭಿಮಾನಿಗಳಿಗೆ 'ಮಾಸ್ಟರ್' ಸಿನಿಮಾದಿಂದ ಪ್ರತಿದಿನ ಕಾದಿದೆ ಸರ್ಪ್ರೈಸ್

  ಸೇತುಪತಿಗೆ ತಾಯಿಗೆ ದಳಪತಿ ವಿಜಯ್ ಭೇಟಿಯಾಗುವ ಆಸೆ

  ಸೇತುಪತಿಗೆ ತಾಯಿಗೆ ದಳಪತಿ ವಿಜಯ್ ಭೇಟಿಯಾಗುವ ಆಸೆ

  ಸೇತುಪತಿ, ದಳಪತಿ ವಿಜಯ್ ಅವರ ಅಭಿಮಾನಿ. ವಿಜಯ್ ಗೋಸ್ಕರ ಈ ಸಿನಿಮಾ ಒಪ್ಪಿಕೊಂಡಿರುವುದಾಗಿ ಈ ಹಿಂದೆ ಹೇಳಿದ್ದರು. ಸೇತುಪತಿ ಮಾತ್ರವಲ್ಲ, ಅವರ ತಾಯಿ ಕೂಡ ದಳಪತಿ ವಿಜಯ್ ಅವರ ಅಭಿಮಾನಿಯಂತೆ. ಸೇತುಪತಿ ಅವರ ತಾಯಿಗೆ ಒಮ್ಮೆ ದಳಪತಿ ವಿಜಯ್ ಭೇಟಿಯಾಗಬೇಕು, ನೋಡಬೇಕು ಎನ್ನುವ ಆಸೆಯಂತೆ. ವಿಜಯ್ ಅವರನ್ನು ಭೇಟಿ ಮಾಡಿಸುವಂತೆ ಪುತ್ರನ ಬಳಿ ಹೇಳುತ್ತಿದ್ದರಂತೆ.

  ವಿಜಯ್ ಭೇಟಿಯಾಗಿ ತಾಯಿ ಹೇಳಿದ್ದೇನು?

  ವಿಜಯ್ ಭೇಟಿಯಾಗಿ ತಾಯಿ ಹೇಳಿದ್ದೇನು?

  ಈ ವಿಚಾರವನ್ನು ಸೇತುಪತಿ ಇತ್ತೀಚಿಗೆ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಮಾಸ್ಟರ್ ಸಿನಿಮಾದ ಚಿತ್ರೀಕರಣ ವೇಳೆ ತಾಯಿಯನ್ನು ಕರೆದುಕೊಂಡು ಹೋಗಿ ದಳಪತಿ ವಿಜಯ್ ಅವರನ್ನು ಭೇಟಿ ಮಾಡಿಸಿದ್ದಾರೆ. ವಿಜಯ್ ಭೇಟಿಯಾದ ಖುಷಿಗೆ ಸೇತುಪತಿ ತಾಯಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ 'ನನ್ನ ಮಗ ಸರಿಯಾಗಿ ಕೆಲಸ ಮಾಡುತ್ತಾನೋ ಇಲ್ಲವೋ' ಎಂದು ದಳಪತಿಯನ್ನು ಕೇಳಿದ್ದಾರೆ.

  ಶೇ.100 ಆಸನ ಭರ್ತಿಗೆ ತಮಿಳುನಾಡು ಸರ್ಕಾರದ ಅನುಮತಿ; ವೈದ್ಯರಿಂದ ನಟ ವಿಜಯ್ ಗೆ ಬಹಿರಂಗ ಪತ್ರಶೇ.100 ಆಸನ ಭರ್ತಿಗೆ ತಮಿಳುನಾಡು ಸರ್ಕಾರದ ಅನುಮತಿ; ವೈದ್ಯರಿಂದ ನಟ ವಿಜಯ್ ಗೆ ಬಹಿರಂಗ ಪತ್ರ

  ಸೇತುಪತಿಯನ್ನು ಹೊಗಳಿದ ದಳಪತಿ ವಿಜಯ್

  ಸೇತುಪತಿಯನ್ನು ಹೊಗಳಿದ ದಳಪತಿ ವಿಜಯ್

  ಸೇತುಪತಿ ತಾಯಿಯ ಜೊತೆ ಮಾತನಾಡಿ ದಳಪತಿ ವಿಜಯ್ ಸಹ ಸಂತಸ ಪಟ್ಟಿದ್ದಾರೆ. ಸೇತುಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪುತ್ರನ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದನ್ನು ಕೇಳಿ ಸೇತುಪತಿ ತಾಯಿ ಫುಲ್ ಖುಷ್ ಆಗಿದ್ದಾರೆ. ತಾಯಿ ಆಸೆ ಈಡೇರಿಸಿದ ವಿಜಯ್ ಗೆ ಸೇತುಪತಿ ಧನ್ಯವಾದ ತಿಳಿಸಿದ್ದಾರೆ.

  ಭವಾನಿ ಪಾತ್ರದಲ್ಲಿ ಸೇತುಪತಿ ನಟನೆ

  ಭವಾನಿ ಪಾತ್ರದಲ್ಲಿ ಸೇತುಪತಿ ನಟನೆ

  ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಭವಾನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಇನ್ನು ಉಳಿದಂತೆ, ಶಾಂತನು ಭಾಗ್ಯರಾಜ್, ನಾಯಕಿಯಾಗಿ ಮಾಳವಿಕಾ ಮೋಹನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಅನೇಕ ಭಾಷೆಯಲ್ಲಿ ಬರ್ತಿದೆ ಮಾಸ್ಟರ್

  ಅನೇಕ ಭಾಷೆಯಲ್ಲಿ ಬರ್ತಿದೆ ಮಾಸ್ಟರ್

  ಸಿನಿಮಾ ತಮಿಳು ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಅಂದುಕೊಂಡಂತೆ ಆಗಿದ್ದಾರೆ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೀಗ ಕಾಲಕೂಡಿ ಬಂದಿದೆ. ಮಾಸ್ಟರ್ ಸಿನಿಮಾ ಹೇಗಿರಲಿದೆ, ಚಿತ್ರಪ್ರಿಯರು ಸಿನಿಮಾವನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲಕ್ಕೆ 13ರಂದು ತೆರೆ ಬೀಳಲಿದೆ.

  English summary
  Vijay Sethupathi reveals how his mother reacted meeting with Thalapathy Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X