For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ ಪ್ರಯುಕ್ತ ರಿಲೀಸ್ ಆದ 4 ಪರಭಾಷಾ ಚಿತ್ರಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಗಳಿಸಿ ಗೆದ್ದವರಾರು?

  |

  ಪ್ರತಿ ಬಾರಿಯ ಸಂಕ್ರಾಂತಿ ಹಬ್ಬದ ಹಾಗೆ ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತವೂ ಸಹ ತೆಲುಗು ಹಾಗೂ ತಮಿಳಿನ ಸಾಲು ಸಾಲು ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬಂದಿವೆ. ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಬಿಡುಗಡೆಗೊಂಡರೆ, ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆಗೊಂಡಿವೆ.

  ಮೊದಲಿಗೆ ಬಿಡುಗಡೆಗೊಂಡ ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳಿಗಿಂತ ತೆಲುಗಿನ ವೀರಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಒಳ್ಳೆಯ ಓಪನಿಂಗ್ ಪಡೆದುಕೊಂಡಿವೆ. ಇನ್ನು ಈ ನಾಲ್ಕೂ ಚಿತ್ರಗಳೂ ಸಹ ವಿಮರ್ಶೆಯ ವಿಷಯದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಕಥೆ ವಿಚಾರದಲ್ಲಿ ಸಂಕ್ರಾಂತಿ ವಿನ್ನರ್ ಯಾರು ಎಂದು ಹೇಳುವುದು ಕಷ್ಟಕರವಾಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ಆಧಾರದ ಮೇಲೆ ಈ ಬಾರಿಯ ಸಂಕ್ರಾಂತಿ ವಿನ್ನರ್ ಯಾರು ಎಂಬುದನ್ನು ನಿರ್ಧರಿಸಬೇಕಾಗಿದೆ.

  ಇನ್ನು ಈ ನಾಲ್ಕೂ ಚಿತ್ರಗಳ ಪೈಕಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಮೊದಲ ದಿನದ ವಿನ್ನರ್ ಎನಿಸಿಕೊಂಡರೆ, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಈ ಫಲಿತಾಂಶದಲ್ಲಿ ಭಾರೀ ವ್ಯತ್ಯಾಸವಿದೆ. ಹೌದು, ಎಲ್ಲಾ ಭಾಷೆಯ ಸಿನಿ ರಸಿಕರೂ ಸಹ ಇರುವ ಕರ್ನಾಟಕದಲ್ಲಿ ಈ ಚಿತ್ರಗಳ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದೆ. ಹಾಗಿದ್ದರೆ ಈ ನಾಲ್ಕು ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಯಾವುದು ಎಂಬ ಮಾಹಿತಿ ಈ ಕೆಳಕಂಡಂತಿದೆ.

  ರಾಜ್ಯದಲ್ಲಿ ಬಿಡುಗಡೆ ದಿನ ಯಾವ ಚಿತ್ರ ಎಷ್ಟು ಗಳಿಸಿತು?

  ರಾಜ್ಯದಲ್ಲಿ ಬಿಡುಗಡೆ ದಿನ ಯಾವ ಚಿತ್ರ ಎಷ್ಟು ಗಳಿಸಿತು?

  ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಈ ನಾಲ್ಕು ಚಿತ್ರಗಳ ಪೈಕಿ ಅವುಗಳ ಬಿಡುಗಡೆ ದಿನ ವಿಜಯ್ ನಟನೆಯ ವಾರಿಸು ಚಿತ್ರ 5.65 ಕೋಟಿ ರೂಪಾಯಿ ಗ್ರಾಸ್ ಗಳಿಸುವ ಮೂಲಕ ಮೊದಲ ದಿನ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿದೆ. ಇನ್ನುಳಿದಂತೆ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ಬಿಡುಗಡೆ ದಿನ 4.77 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಕರ್ನಾಟಕದಲ್ಲಿ ಮೊದಲ ದಿನ 2.87 ಕೋಟಿ ಗಳಿಸಿದರೆ, ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ 2.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಕರ್ನಾಟಕ ಮೊದಲ ದಿನದ ಕಲೆಕ್ಷನ್ ರೇಸ್‌ನಲ್ಲಿ ವಿಜಯ್ ನಟನೆಯ ವಾರಿಸು ಗೆದ್ದಿದೆ.

  ವಾರಿಸು vs ತುನಿವು

  ವಾರಿಸು vs ತುನಿವು

  ಇನ್ನು ರಾಜ್ಯದಲ್ಲಿ ತೆಲುಗು ಚಿತ್ರಗಳಿಗಿಂತ ತಮಿಳು ಚಿತ್ರಗಳು ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದು, ಮೊದಲ ಮೂರು ದಿನಗಳಲ್ಲಿ ಈ ಪೈಕಿ ಯಾವ ಚಿತ್ರ ಅತಿಹೆಚ್ಚು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮೊದಲ ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ವಿಜಯ್ ನಟನೆಯ ವಾರಿಸು ಚಿತ್ರ 7.4 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದರೆ, ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ರಾಜ್ಯದಲ್ಲಿ ಮೊದಲ ಮೂರು ದಿನಗಳಲ್ಲಿ 6.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

  ವಾರಿಸುಗೆ ಹೆಚ್ಚು ಪ್ರದರ್ಶನಗಳು

  ವಾರಿಸುಗೆ ಹೆಚ್ಚು ಪ್ರದರ್ಶನಗಳು

  ಇನ್ನು ಮೊದಲನೇ ದಿನ ಬೆಂಗಳೂರಿನಲ್ಲಿಯೇ ಬರೋಬ್ಬರಿ 700ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ವಾರಿಸು ಚಿತ್ರ ಉಳಿದ ದಿನಗಳಲ್ಲೂ ಸಹ ಇತರೆ ಚಿತ್ರಗಳಿಗಿಂತ ಹೆಚ್ಚಿನ ಪ್ರದರ್ಶನವನ್ನು ಪಡೆದುಕೊಂಡಿದೆ. ಆದರೆ ಚಿತ್ರ ಎರಡು ಹಾಗೂ ಮೂರನೇ ದಿನ ರಾಜ್ಯದಲ್ಲಿ ಒಂದು ಕೋಟಿಯನ್ನೂ ಸಹ ಗಳಿಸುವಲ್ಲಿ ಯಶಸ್ವಿಯಾಗದೇ ಹಿನ್ನಡೆ ಅನುಭವಿಸಿದ್ದು, ಶನಿವಾರ ಹಾಗೂ ಭಾನುವಾರ ಹೆಚ್ಚು ಗಳಿಸುವ ಸಾಧ್ಯತೆಗಳಿವೆ.

  English summary
  Vijay starrer Varisu did more collection than other Sankranti release films on day 1 in Karnataka. Take a look
  Saturday, January 14, 2023, 14:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X