ಏಳು ವರ್ಷಗಳ ನಂತರ ಸಂದರ್ಶನ ನೀಡಲಿದ್ದಾರೆ ವಿಜಯ್?
ನಟ ವಿಜಯ್ ಅವರ ಯಾವ ಸಿನಿಮಾ ಸಹ ಈ ವರ್ಷದಲ್ಲಿ ಬಿಡುಗಡೆ ಆಗಿಲ್ಲ. ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್' ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಮುಂದಿನ ವರ್ಷಾರಂಭದಲ್ಲಿಯೇ ಸಿನಿಮಾ ಬಿಡುಗಡೆ ಆಗುವ ಸಕಲ ಸಾಧ್ಯತೆ ಇದ್ದು. ಆ ಸಿನಿಮಾ ಮೂಲಕ ತಮಿಳುನಾಡಿನ ಚಿತ್ರಮಂದಿರಗಳಿಗೆ ಹಳೆಯ ಕಳೆ ಮರಳಿ ಬರಲಿದೆ ಎನ್ನಲಾಗುತ್ತಿದೆ.
ನಟ ವಿಜಯ್ ಸಹ, ಜನರನ್ನು ಚಿತ್ರಮಂದಿರಗಳತ್ತ ಪುನಃ ಸೆಳೆಯಲು ತಮ್ಮದೇ ಆದ ಕಾರ್ಯಕ್ರಮ ರೂಪಿಸಿಕೊಂಡಿದ್ದು, ಅದರ ಭಾಗವಾಗಿಯೇ ಏಳು ವರ್ಷಗಳ ನಂತರ ಟಿವಿ ಸಂದರ್ಶನದಲ್ಲಿ ಭಾಗವಹಿಸಲಿದ್ದಾರೆ. ಹೌದು, ನಟ ವಿಜಯ್ ಟಿವಿ ಸಂದರ್ಶನಗಳಲ್ಲಿ ಭಾಗವಹಿಸುವುದೇ ಇಲ್ಲ. ಅವರದ್ದೇನಿದ್ದರೂ ವೇದಿಕೆ ಭಾಷಣವಷ್ಟೆ. ಕಳೆದ ಬಾರಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು ಏಳು ವರ್ಷಗಳ ಹಿಂದೆ. ಈಗ ಮತ್ತೆ ವಿಜಯ್ ಟಿವಿ ಸಂದರ್ಶನಕ್ಕೆ ವಾಪಸ್ಸಾಗಲಿದ್ದಾರೆ.

ಟಿವಿ ವಾಹಿನಿಗೆ ಸಂದರ್ಶನ
ತಮಿಳುನಾಡಿನ ಸುದ್ದಿವಾಹಿನಿಗಳು ವರದಿ ಮಾಡಿರುವಂತೆ, ನಟ ವಿಜಯ್, ಸನ್ ಟಿವಿಗೆ ಎಕ್ಸ್ಲೂಸಿವ್ ಸಂದರ್ಶನ ನೀಡಲಿದ್ದು, ಕೊರೊನಾ, ಸಿನಿಮಾ, ಕುಟುಂಬ, ಅಭಿಮಾನಿಗಳು, ರಾಜಕೀಯ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ ವಿಜಯ್
ಅಷ್ಟೇ ಅಲ್ಲದೆ, ತಮ್ಮ ಮಾಸ್ಟರ್ ಸಿನಿಮಾ ಬಿಡುಗಡೆ ಆದಾಗ, ಖುದ್ದಾಗಿ ವಿಜಯ್ ಅವರೇ ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳೊಟ್ಟಿಗೆ ಬೆರೆಯಲಿದ್ದಾರೆ. ಚಿತ್ರಮಂದಿರಗಳಿಗೆ ಜನರನ್ನು ಸೆಳೆಯಲು ವಿಜಯ್ ಈ ಕಾರ್ಯ ಮಾಡಲಿದ್ದಾರೆ.

ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿತ್ತು
ಮಾಸ್ಟರ್ ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಅಷ್ಟರಲ್ಲಾಗಲೆ ಲಾಕ್‌ಡೌನ್ ಘೋಷಣೆಯಾದ ಕಾರಣ ಸಿನಿಮಾ ಬಿಡುಗಡೆ ಮಾಡಲಾಗಲಿಲ್ಲ. ಈಗ ಚಿತ್ರಮಂದಿರ ತೆರೆದಿದೆಯಾದರೂ, ಸಾಕಷ್ಟು ನಿಯಮಗಳು ಜಾರಿಯಲ್ಲಿವೆ. ಹಾಗಾಗಿ ಇನ್ನಷ್ಟು ದಿನ ಬಿಟ್ಟು ಜನವರಿ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಇರಾದೆಯಲ್ಲಿದೆ ಚಿತ್ರತಂಡ.
Recommended Video

ಲೋಕೇಶ್ ಕನಕರಾಜನ್ ನಿರ್ದೇಶನದ ಸಿನಿಮಾ
ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಕಾಲೇಜು ಉಪನ್ಯಾಸಕನ ಪಾತ್ರ ನಿರ್ವಹಿಸಿದ್ದಾರೆ. ವಿಜಯ್ ಗೆ ಎದುರಾಗಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಮಾಳವಿಕಾ ಮೋಹನನ್ ನಾಯಕಿಯಾಗಿರುವ ಈ ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ.


Click it and Unblock the Notifications











