For Quick Alerts
  ALLOW NOTIFICATIONS  
  For Daily Alerts

  ಪ್ರೀತಿ, ಯುದ್ಧ, ದ್ರೋಹ..'ಪೊನ್ನಿಯಿನ್‌ ಸೆಲ್ವನ್': ಮಣಿರತ್ನಂ ದೃಶ್ಯಕಾವ್ಯದ ಟ್ರೈಲರ್ ಸೂಪರ್

  |

  ಮಣಿರತ್ನಂ ನಿರ್ದೇಶನದ ಬಹುಕೋಟಿ ವೆಚ್ಚದ ಐತಿಹಾಸಿಕ ದೃಶ್ಯಕಾವ್ಯ 'ಪೊನ್ನಿಯಿನ್‌ ಸೆಲ್ವನ್'. ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ಈ ಸಿನಿಮಾ ತೆರೆಗೆ ಬರ್ತಿದ್ದು, ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಚಿತ್ರದ ಟ್ರೈಲರ್ ಲಾಂಚ್‌ ಈವೆಂಟ್ ನೀಡಿತು. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್‌ ಸೇರಿದಂತೆ ಕಾಲಿವುಡ್‌ನ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಷಾ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಭಾಗಗಳಾಗಿ ಮಣಿರತ್ನಂ ತಮ್ಮ ಡ್ರೀಮ್‌ ಪ್ರಾಜೆಕ್ಟ್‌ನ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ 'ಪೊನ್ನಿಯಿನ್‌ ಸೆಲ್ವನ್' ಎಂದು ಹೇಳಲಾಗುತ್ತಿದೆ. ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. 5 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

  ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್‌ ಸೆಲ್ವನ್' ಕಾದಂಬರಿ ಆಧರಿಸಿ ಮಣಿರತ್ನಂ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. 1000 ವರ್ಷಗಳ ಹಿಂದಿನ ಚೋಳ ರಾಜರ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ನಿಜವಾದ ಪಾತ್ರಗಳ ಜೊತೆಗೆ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಬಹಳ ರೋಚಕವಾಗಿ ಈ ಕಾಸ್ಟ್ಯೂಮ್‌ ಡ್ರಾಮಾ ಕಟ್ಟಿಕೊಡಲಾಗಿದೆ. ರಾಜ ಆದಿತ್ಯಾ ಕರಿಕಾಲನ್ ಪಾತ್ರದಲ್ಲಿ ವಿಕ್ರಮ್, ರಾಣಿ ನಂದಿನಿಯಾಗಿ ಐಶ್ವರ್ಯ ರೈ, ಅರುಲ್‌ಮುಳಿ ವರ್ಮನ್ ಪಾತ್ರದಲ್ಲಿ ಜಯಂ ರವಿ, ಯೋಧ ವಲ್ಲರಿಯನ್ ವಂದಿಯದೇವನ್ ಪಾತ್ರದಲ್ಲಿ ಕಾರ್ತಿ ಅಬ್ಬರಿಸಿದ್ದಾರೆ.

  ಚೋಳರ ಸುವರ್ಣಯುಗದ ವೈಭವ

  ಚೋಳರ ಸುವರ್ಣಯುಗದ ವೈಭವ

  ಚೋಳರ ಯುವರಾಣಿ ಕುಂದವೈ ಪಿರತ್ತಿಯಾರ್ ಆಗಿ ತ್ರಿಶಾ, ಪಳು ವೆಟ್ಟಿಯಾರೈ ಆಗಿ ಶರತ್ ಕುಮಾರ್, ಸುಂದರ ಚೋಳ ಆಗಿ ಪ್ರಕಾಶ್ ರಾಜ್, ರವಿ ದಾಸನ್ ಪಾತ್ರದಲ್ಲಿ ಕನ್ನಡ ನಟ ಕಿಶೋರ್ ನಟಿಸಿದ್ದಾರೆ. ಘಟಾನುಘಟಿ ಕಲಾವಿದರು 'ಪೊನ್ನಿಯಿನ್‌ ಸೆಲ್ವನ್' ಚಿತ್ರದ ಖಡಕ್ ರೋಲ್‌ಗಳ ಮೂಲಕ ರಂಜಿಸಿದ್ದಾರೆ. ಚೋಳರ ಕಾಲದ ಯುದ್ಧದ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಡಲಾಗಿದೆ. ಮುಖ್ಯವಾಗಿ ಅವತ್ತಿನ ಕಾಲಕ್ಕೆ ಚೋಳರ ನೌಕಾ ಸೇನೆ ಎಷ್ಟು ಬಲಿಷ್ಠವಾಗಿತ್ತು ಎನ್ನುವುದನ್ನು ತೋರಿಸುವ ಪ್ರಯತ್ನ ನಡೆದಿದೆ.

  ಪ್ರೀತಿ, ಯುದ್ಧ ಹಾಗೂ ದ್ರೋಹದ ಸುತ್ತಾ ಕಥೆ

  ಪ್ರೀತಿ, ಯುದ್ಧ ಹಾಗೂ ದ್ರೋಹದ ಸುತ್ತಾ ಕಥೆ

  'ಪೊನ್ನಿಯಿನ್‌ ಸೆಲ್ವನ್' ಟೀಸರ್‌ ಅಷ್ಟಾಗಿ ಸಿನಿರಸಿಕರ ಗಮನ ಸೆಳೆದಿರಲಿಲ್ಲ. ಆದರೆ ಟ್ರೈಲರ್‌ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎ. ಆರ್ ರೆಹಮಾನ್ ಬಿಜಿಎಂ ಜೊತೆಗೆ ಮಣಿರತ್ನಂ ದೃಶ್ಯಕಾವ್ಯದ ಝಲಕ್‌ ಸಖತ್ ಕಿಕ್ ಕೊಡ್ತಿದೆ. 'ಪೊನ್ನಿಯಿನ್‌ ಸೆಲ್ವನ್' ಕೆಲವು ಕಡೆ ರಾಜಮೌಳಿ 'ಬಾಹುಬಲಿ' ಚಿತ್ರವನ್ನು ನೆನಪಿಸಿದರೂ ಮಣಿರತ್ನಂ ಮೇಕಿಂಗ್‌ ಬಹಳ ರೋಚಕವಾಗಿದೆ. ಪ್ರೀತಿ, ಯುದ್ಧ ಹಾಗೂ ದ್ರೋಹದ ಸುತ್ತಾ ಸಿನಿಮಾ ಕಥೆ ಸಾಗಲಿದೆ.

  2 ಭಾಗಳಾಗಿ ಸಿನಿಮಾ ರಿಲೀಸ್

  2 ಭಾಗಳಾಗಿ ಸಿನಿಮಾ ರಿಲೀಸ್

  ಸದ್ಯ ಭಾರತೀಯ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಮಣಿರತ್ನಂ 'ಪೊನ್ನಿಯಿನ್‌ ಸೆಲ್ವನ್' ಚಿತ್ರವನ್ನು ಎರಡು ಭಾಗಗಳಾಗಿ ಪ್ರೇಕ್ಷಕರು ಮುಂದೆ ತರುತ್ತಿದ್ದಾರೆ. ಎಲ್ಲಾ ಭಾಷೆಗಳಿಗೂ ಒಪ್ಪುವಂತೆ PS1 ಟೈಟಲ್‌ನಲ್ಲಿ ಚಿತ್ರದ ಪ್ರಚಾರ ಶುರುವಾಗಿದೆ. ಬಹಳ ದೊಡ್ಡ ಕಥೆ ಆಗಿರುವುದರಿಂದ 2 ಭಾಗ ಮಾಡಿ ಹೇಳುವ ಪ್ರಯತ್ನ ನಡೀತಿದೆ. ಮುಂದಿನ ವರ್ಷ ಚಿತ್ರದ ಸೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ.

  ರೋಚಕ ಅನುಭವ ನೀಡಲಿರುವ ಸಿನಿಮಾ

  ರೋಚಕ ಅನುಭವ ನೀಡಲಿರುವ ಸಿನಿಮಾ

  ಬಹುಕೋಟಿ ವೆಚ್ಚದಲ್ಲಿ ಬಹಳ ರೋಚಕವಾಗಿ 'ಪೊನ್ನಿಯಿನ್‌ ಸೆಲ್ವನ್' ಚಿತ್ರವನ್ನು ಕಟ್ಟಿಕೊಡಲಾಗಿದೆ. ಟಾಲಿವುಡ್‌ಗೆ ಬಾಹುಬಲಿ, ಸ್ಯಾಂಡಲ್‌ವುಡ್‌ಗೆ ಕೆಜಿಎಫ್ ಗೇಮ್‌ ಚೇಂಜರ್ ಆದ ರೀತಿಯಲ್ಲೇ 'ಪೊನ್ನಿಯಿನ್‌ ಸೆಲ್ವನ್' ಕಾಲಿವುಡ್‌ನಲ್ಲಿ ಗೇಮ್‌ ಚೇಂಜರ್ ಆಗುವ ಸುಳಿವು ಸಿಕ್ತಿದೆ. ಚಿತ್ರವನ್ನು ಐಮ್ಯಾಕ್ಸ್ ವರ್ಷನ್‌ನಲ್ಲೂ ತೆರೆಗೆ ತರ್ತಿದ್ದು, ಪ್ರೇಕ್ಷಕರಿಗೆ ಅದ್ಬುವ ಅನುಭವ ಸಿಗಲಿದೆ.

  English summary
  Vikram, Aishwarya Rai Bachchan, Jayam Ravi starrer Ponniyin Selvan trailer Relased. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X