twitter
    For Quick Alerts
    ALLOW NOTIFICATIONS  
    For Daily Alerts

    Vikram First Review : ಕಮಲ್ ಹಾಸನ್ 'ವಿಕ್ರಂ' ಸೂಪರ್ ಆ್ಯಕ್ಷನ್ ಥ್ರಿಲ್ಲರ್: ಇಲ್ಲಿದೆ ಮೊದಲ ವಿಮರ್ಶೆ!

    |

    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಕಮಲ್ ಹಾಸನ್ ಅವ್ರ 'ವಿಕ್ರಂ' ಸಿನಿಮಾ ಕೂಡ ಒಂದು. ಈ ಚಿತ್ರವನ್ನು ಕಮಲ್ ಹಾಸನ್ ಕಮ್‌ಬ್ಯಾಕ್ ಎಂದೇ ಹೇಳಲಾಗುತ್ತಿದೆ. ಕಮಲ್ ಹಾಸನ್ ಇತ್ತೀಚೆಗೆ ಯಾವುದೇ ದೊಡ್ಡ ಹಿಟ್ ಕೊಟ್ಟಿಲ್ಲ. ಈ ಸಿನಿಮಾ ಹಿಟ್ ಸೇರುವ ಸೂಚನೆಯಂತು ಕೊಟ್ಟಿದೆ.

    ಕಮಲ್ ಹಾಸನ್ ಈ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟೀಸರ್, ಟ್ರೈಲರ್‌ನಲ್ಲಿ ಕಮಲ್ ಹಾಸನ್ ಅಬ್ಬರ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದೆ. ಜೊತೆಗೆ ಈ ಸಿನಿಮಾ ತಮಿಳು ಸಿನಿಮಾರಂಗಕ್ಕೆ ಈ ಸಿನಿಮಾ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವ ಲೆಕ್ಕಾರಗಳು ಕೂಡ ಹೊರ ಬಿದ್ದಿವೆ.

    ಕಮಲ್ ಹಾಸನ್ 'ವಿಕ್ರಂ' ಪ್ರೀ-ರಿಲೀಸ್ 200 ಕೋಟಿ ಗಳಿಕೆ: ದೊಡ್ದದಾಗಿದೆ ಬಾಕ್ಸಾಫೀಸ್ ಲೆಕ್ಕಾಚಾರ!ಕಮಲ್ ಹಾಸನ್ 'ವಿಕ್ರಂ' ಪ್ರೀ-ರಿಲೀಸ್ 200 ಕೋಟಿ ಗಳಿಕೆ: ದೊಡ್ದದಾಗಿದೆ ಬಾಕ್ಸಾಫೀಸ್ ಲೆಕ್ಕಾಚಾರ!

    ವಿಕ್ರಂ ಇದೇ ಜೂನ್ 3 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಆದರೆ ಸಿನಿಮಾ ರಿಲೀಸ್‌ಗೂ ಮುನ್ನವೇ ಸಿನಿಮಾದ ಮೊದಲ ವಿಮರ್ಶೆ ಹೊರ ಬಂದಿದೆ. ಸಿನಿಮಾ ಹೇಗೆದೆ ಎನ್ನುವುದನ್ನು ಯುಎಇ ವಿರ್ಮಶಕ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

    ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್! ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

    'ವಿಕ್ರಂ' ಸೂಪರ್ ಆಗುದೆಯಂತೆ!

    'ವಿಕ್ರಂ' ಸೂಪರ್ ಆಗುದೆಯಂತೆ!

    'ವಿಕ್ರಂ' ಸಿನಿಮಾದ ಬಗ್ಗೆ ವಿದೇಶಿ ವಿಮರ್ಶಕ ಉಮೈರ್ ಸಂಧು ಮೊದಲ ವಿಮರ್ಶೆ ಮಾಡಿದ್ದಾರೆ. "ವಿಕ್ರಮ್, ಇದೊಂದು ಶ್ರದ್ಧೆ ಮತ್ತು ಪ್ರಾಮಾಣಿಕ ಪ್ರಯತ್ನವಾಗಿದೆ.. ಅದ್ಭುತವಾದ ಆಕ್ಷನ್ ಥ್ರಿಲ್ಲರ್, ಬೆರಗುಗೊಳಿಸುವಂತಹ ಹಲವಾರು ಸನ್ನಿವೇಶಗಳು ಸಿನಿಮಾದಲ್ಲಿ ಇವೆ. ನಿಮಗೆ ಉತ್ತಮ ಗುಣಮಟ್ಟದ, ಸಂವೇದನಾಶೀಲ ಸಿನಿಮಾ ನೋಡುವ ಮನಸ್ಸಿಲ್ಲಿದ್ದರೆ, ಈ ಸಿನಿಮಾ ನೋಡಿ." ಎಂದು ಬರೆದುಕೊಂಡಿದ್ದಾರೆ.

    ವಿಕ್ರಂ ಚಿತ್ರಕ್ಕೆ ಸಿಕ್ಕಿತು 3.5 ಸ್ಟಾರ್ಸ್!

    ವಿಕ್ರಂ ಸಿನಿಮಾ ರಿಲೀಸ್‌ಗೂ ಮುನ್ನವೇ ಮೊದಲ ವಿಮರ್ಶೆ ಬಂದಿದೆ. ಸಿನಿಮಾದ ಬಗ್ಗೆ ಉತ್ತಮ ಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾ ನೋಡಿ ವಿಮರ್ಶೆ ಮಾಡಿದ ಉಮೈರ್ ಸಂಧು 5ಕ್ಕೆ ಒಟ್ಟು 3.5 ಅಂಕಗಳನ್ನು ಕೊಟ್ಟಿದ್ದಾರೆ. ಹಾಗಾಗಿ ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಗಿದೆ. ಇನ್ನೂ ಜೂನ್ 3ರ ತನಕ ಸಿನಿಮಾ ನೋಡುವ ತವಕವನ್ನು ತಡೆದುಕೊಳ್ಳಲೇ ಬೇಕು.

    ವಿಕ್ರಂ 4000 ಸ್ಕ್ರೀನ್‌ಗಳಲ್ಲಿ ರಿಲೀಸ್!

    ವಿಕ್ರಂ 4000 ಸ್ಕ್ರೀನ್‌ಗಳಲ್ಲಿ ರಿಲೀಸ್!

    ವಿಕ್ರಂ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಾ ಇದೆ. ದೇಶದಾದ್ಯಂತ ಸುಮಾರು 4000 ಪರದೆಗಳಲ್ಲಿ ವಿಕ್ರಂ ಸಿನಿಮಾ ತೆರೆಕಾಣುತ್ತಾ ಇದೆ. ಹಾಗಾಗಿ ಸಿನಿಮಾದ ಕಲೆಕ್ಷನ್ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಇನ್ನು ಬಾಲಿವುಡ್‌ನ ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿ ರಾಜ್' ಕೂಡ ದೇಶದಾದ್ಯಂತ 4000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಾ ಇದೆ.

    Recommended Video

    'ವಿಕ್ರಾಂತ್ ರೋಣ'ನ ಹಾದಿ ಹಿಡಿದ ಕಮಲ್ ಹಾಸನ್‌ರ 'ವಿಕ್ರಮ್' | #kamalhassan #sudeep
    'ವಿಕ್ರಂ' ಅಡ್ವಾನ್ಸ್ ಬುಕ್ಕಿಂಗ್ ಶುರು!

    'ವಿಕ್ರಂ' ಅಡ್ವಾನ್ಸ್ ಬುಕ್ಕಿಂಗ್ ಶುರು!

    ವಿಕ್ರಂ ಸಿನಿಮಾ ಮುಂಗಡ ಟಿಕೆಟ್ ಬುಕ್ಕಿಂಗ್ ತೆರೆಯಲಾಗಿದೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿಯಾಗಿ ಸಾಗುತ್ತಿದೆ. ಇನ್ನು ಸದ್ಯದ ಮಾಹಿತಿಯ ಪ್ರಕಾರ ವಿಕ್ರಂ ಸಿನಿಮಾ ಮುಂಗಡ ಬುಕ್ಕಿಂಗ್‌ನಿಂದ 3.40 ಕೋಟಿ ಗಳಿಕೆ ಕಂಡಿದೆ. ಇದರಲ್ಲಿ ಬಹುತೇಕ ಟಿಕೆಟ್‌ಗಳು ಚೆನ್ನೈನಲ್ಲೇ ಬುಕ್ ಆಗಿವೆ. ಇನ್ನು ಸಿನಿಮಾ ರಿಲೀಸ್‌ಗೆ 3 ದಿನಗಳು ಬಾಕಿ ಇರುವುದರಿಂದ ಅಷ್ಟರಲ್ಲಿ ಮತ್ತಷ್ಟು ಮುಂಗಡ ಬುಕ್ಕಿಂಗ್ ಹೆಚ್ಚಾಗ ಬಹುದು ಎಂದು ಅಂದಾಜಿಸಲಾಗಿದೆ.

    English summary
    Vikram first review out: Kamal Haasan starrer Vikram Is Terrific Action Thriller, Review By UAE based Critic, Know More.
    Thursday, June 2, 2022, 9:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X