Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯ್- ಲೋಕೇಶ್ ಕನಕರಾಜ್ ಚಿತ್ರದಲ್ಲಿ ನಟಿಸಲ್ಲ ಎಂದ ವಿಶಾಲ್: ಮುಂದೆ ನೋಡೋಣ ಎಂದ ನಟ
'ಖೈದಿ', 'ಮಾಸ್ಟರ್', 'ವಿಕ್ರಂ' ರೀತಿಯ ಸೂಪರ್ ಹಿಟ್ ಸಿನಿಮಾಗಳ ಸರದಾರ ಲೋಕೇಶ್ ಕನಕರಾಜ್. ಸದ್ಯ ದಳಪತಿ ವಿಜಯ್ ನಟನೆಯ ಮುಂದಿನ ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ನಟ ವಿಶಾಲ್ ವಿಲನ್ ಆಗಿ ನಟಿಸಬೇಕಿತ್ತು. ಆದರೆ ವಿಶಾಲ್ ಇದಕ್ಕೆ ಹಿಂದೇಟು ಹಾಕಿದ್ದಾರೆ.
ದಳಪತಿ ವಿಜಯ್‌ಗೆ ಕಾಲಿವುಡ್‌ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಒಂದೇ ಭಾಷೆಯಲ್ಲಿ ಇವರ ಚಿತ್ರಗಳು 200, 300 ಕೋಟಿ ಕಲೆಕ್ಷನ್ ಮಾಡುತ್ತದೆ. ತಮಿಳಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್. ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಜೊತೆ ಕೈ ಜೋಡಿಸಿದ್ದಾರೆ ಅಂದಮೇಲೆ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವುದು ಗ್ಯಾರೆಂಟಿ. ಇಂತಹ ಕ್ರೇಜಿ ಪ್ರಾಜೆಕ್ಟ್‌ನಲ್ಲಿ ನಟಿಸೋಕೆ ಸ್ಟಾರ್ ನಟರೇ ಕ್ಯೂ ನಿಲ್ಲುತ್ತಾರೆ. ಆದರೆ ವಿಶಾಲ್ ಮಾತ್ರ ನಟಿಸೋಕೆ ಸಾಧ್ಯವಿಲ್ಲ ಎಂದುಬಿಟ್ಟಿದ್ದಾರೆ.
ತನ್ನ
ಎರಡನೇ
ತಮಿಳು
ಚಿತ್ರ
ಘೋಷಿಸಿದ
ಶಿವಣ್ಣ;
'ಕ್ಯಾಪ್ಟನ್
ಮಿಲ್ಲರ್'
ಪ್ರಪಂಚಕ್ಕೆ
ಸ್ವಾಗತ
ಎಂದ
ಧನುಷ್
ಲೋಕೇಶ್- ವಿಜಯ್ ಕಾಂಬಿನೇಷನ್‌ನ 2ನೇ ಸಿನಿಮಾ ಶುರುವಾಗ್ತಿದೆ. ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಹೀರೊಗೆ ಮಾತ್ರವಲ್ಲ ವಿಲನ್‌ಗಳ ಪಾತ್ರವನ್ನು ಸಿಕ್ಕಾಪಟ್ಟೆ ಪವರ್‌ಫುಲ್ ಆಗಿ ಡಿಸೈನ್ ಮಾಡುತ್ತಾ ಬರ್ತಿದ್ದಾರೆ. 'ಮಾಸ್ಟರ್' ಚಿತ್ರದಲ್ಲಿ ವಿಜಯ್ ಸೇತುಪತಿ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

'ದಳಪತಿ 67'ಗೆ ನೋ ಎಂದ ವಿಶಾಲ್
ವಿಜಯ್ ನಟನೆಯ 67ನೇ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯ 'ದಳಪತಿ'67 ಅಂತಲೇ ಆ ಚಿತ್ರವನ್ನು ಕರೆಯಲಾಗುತ್ತಿದೆ. ಇದೇ ಚಿತ್ರದ ನೆಗೆಟಿವ್ ರೋಲ್‌ಗೆ ನಿರ್ದೇಶಕರು ವಿಶಾಲ್ ಅವರನ್ನು ಆಯ್ಕೆ ಮಾಡಿದ್ದರು. ಹೋಗಿ ಅವರಿಗೆ ಕಥೆ ಕೂಡ ಹೇಳಿದ್ದರಂತೆ. ಆದರೆ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಈಗ ಈ ಚಿತ್ರದಲ್ಲಿ ನಟಿಸೋಕೆ ಸಾಧ್ಯವಿಲ್ಲ ಎಂದು ವಿಶಾಲ್ ಹೇಳಿದ್ದಾರೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಸ್ವತಃ ವಿಜಯ್ ವಿವರಿಸಿದ್ದಾರೆ.

ಮುಂದಿನ ದಿನಗಳಲ್ಲಿ ನೋಡೋಣ
ಸದ್ಯ ವಿಶಾಲ್ ನಟನೆಯ 'ಲಾಠಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಮಾರ್ಕ್ ಆಂಟನಿ' ಸಿನಿಮಾ ಶೂಟಿಂಗ್ ಅರ್ಧ್ ಮುಗಿದಿದೆ. ಮುಂದೆ ತಮ್ಮದೇ ನಿರ್ದೇಶನದಲ್ಲಿ 'ತುಪ್ಪರಿವಾಲನ್' ಮಾಡಲು ಸಿದ್ಧತೆ ನಡೆಸಿದ್ದಾರೆ. ಅಭಿಮಾನಿಗಳು ಬಹಳ ದಿನಗಳಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರಂತೆ. ಇದೆಲ್ಲದರ ನಡುವೆ 'ದಳಪತಿ 67' ಚಿತ್ರಕ್ಕೆ ಕಾಲ್‌ಶೀಟ್ ಕೊಡಲು ಕಷ್ಟ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ವಿಜಯ್ ಜೊತೆ ನಟಿಸುತ್ತೇನೆ ಎಂದಿದ್ದಾರೆ.

ವಿಜಯ್‌ಗೆ ಆಕ್ಷನ್ ಕಟ್ ಹೇಳುವ ಬಯಕೆ
'ದಳಪತಿ 67' ನಟಿಸೋಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಜಯ್ ಜೊತೆ ನಟಿಸುವ ಬಗ್ಗೆ ಮಾತನಾಡಿರುವ ವಿಶಾಲ್ ತಮ್ಮ ಆಸೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ದಳಪತಿ ವಿಜಯ್ ನಟನೆಯ ಚಿತ್ರವನ್ನು ನಿರ್ದೇಶನ ಮಾಡುವ ಕನಸನ್ನು ಹೇಳಿಕೊಂಡಿದ್ದಾರೆ. ಬಹಳ ದಿನಗಳಿಂದ ಇಂತಾದೊಂದು ಆಸೆ ಇದೆ. ಒಂದೊಳ್ಳೆ ಕಥೆ ಸಿದ್ಧಪಡಿಸಿ ವಿಜಯ್ ಮುಂದೆ ಹೋಗಿ ನಿಲ್ಲುತ್ತೇನೆ ಎಂದಿದ್ದಾರೆ.

ಕುತೂಹಲ ಕೆರಳಿಸಿದ 'ದಳಪತಿ 67'
ನಿರ್ದೇಶಕ ಲೋಕೇಶ್ ಕನಕರಾಜ್ 'ಖೈದಿ' ಹಾಗೂ 'ವಿಕ್ರಂ' ಸಿನಿಮಾಗಳ ಕಥೆಗಳಿಕೆ ಲಿಂಕ್ ಕೊಟ್ಟಿದ್ದಾರೆ. ಆ ಮೂಲಕ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. 'ದಳಪತಿ 67' ಕಥೆಯನ್ನು ಕೂಡ ಈ 2 ಸಿನಿಮಾಗಳ ಕಥೆಗಳ ಜೊತೆಗೆ ಲಿಂಕ್ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ. ಮುಂದೆ ಕಾರ್ತಿ, ಕಮಲ್ ಹಾಸನ್, ವಿಜಯ್ ಮೂವರನ್ನು ಸೇರಿಸಿ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರಾ? ಎನ್ನುವ ಅನುಮಾನ ಮೂಡಿದೆ.