For Quick Alerts
  ALLOW NOTIFICATIONS  
  For Daily Alerts

  ವಿಜೆ ಚಿತ್ರ ಆತ್ಮಹತ್ಯೆ ಕೇಸ್: ವರದಕ್ಷಿಣೆ ಕಿರುಕುಳ ತಳ್ಳಿಹಾಕಿದ RDO ಅಧಿಕಾರಿಗಳು

  |

  ತಮಿಳಿನ ಕಿರುತೆರೆ ನಟಿ ವಿಜೆ ಚಿತ್ರ ಆತ್ಮಹತ್ಯೆ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ. ಈ ಕೇಸ್‌ನಲ್ಲಿ ಪತಿ ಹೇಮಂತ್ ಕುಮಾರ್ ಅವರ ಬಂಧನ ಸಹ ಆಗಿದೆ. ಗಂಡ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾನೆ, ಆದ್ದರಿಂದಲೇ ಈ ಸಾವು ಸಂಭವಿಸಿದೆ ಎಂದು ಚಿತ್ರಾ ಅವರ ತಾಯಿ ಆರೋಪಿಸಿದ್ದರು.

  ತಾಯಿಯ ಅನುಮಾನದ ಹಿನ್ನೆಲೆ ತನಿಖಾ ಅಧಿಕಾರಿಗಳು ಎಲ್ಲಾ ಆಯಾಮದಲ್ಲೂ ವಿಚಾರಣೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಮನೆಯವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದ್ರೆ, ಅಂತಿಮವಾಗಿ ಆರ್‌ಡಿಓ ಅಧಿಕಾರಿಗಳು ವರದಕ್ಷಿಣೆ ಕಿರುಕುಳವನ್ನು ತಳ್ಳಿಹಾಕಿದ್ದಾರೆ ಎಂದು ತಿಳಿದು ಬಂದಿದೆ. ಮುಂದೆ ಓದಿ....

  ವಿಜೆ ಚಿತ್ರಾ ಸಾವಿನಲ್ಲಿ ತೆಲುಗು ನಟನೊಬ್ಬನ ಕೈವಾಡ: ಗೆಳತಿಯ ಸ್ಪೋಟಕ ಹೇಳಿಕೆವಿಜೆ ಚಿತ್ರಾ ಸಾವಿನಲ್ಲಿ ತೆಲುಗು ನಟನೊಬ್ಬನ ಕೈವಾಡ: ಗೆಳತಿಯ ಸ್ಪೋಟಕ ಹೇಳಿಕೆ

  ವರದಕ್ಷಿಣೆ ಕಿರುಕುಳ ಆಗಿಲ್ಲ!

  ವರದಕ್ಷಿಣೆ ಕಿರುಕುಳ ಆಗಿಲ್ಲ!

  ವಿಜೆ ಚಿತ್ರ ಅವರ ಪ್ರಕರಣದಲ್ಲಿ ವರದಕ್ಷಿಣೆ ವಿಚಾರಕ್ಕೆ ಗಂಡನಿಂದ ಅಥವಾ ಗಂಡನ ಮನೆಯವರಿಂದ ಕಿರುಕುಳ ಆಗಿರಬಹುದು ಎಂಬ ಅನುಮಾನದಲ್ಲಿ ವಿಚಾರಣೆ ನಡೆದಿದೆ. ಹೇಮಂತ್ ಮತ್ತು ಮನೆಯವರು ವಿಚಾರಣೆ ವೇಳೆ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ, ಸಾಕ್ಷ್ಯಗಳು ಸಿಕ್ಕಿಲ್ಲ. ಹಾಗಾಗಿ, ಈ ಪ್ರಕರಣದಲ್ಲಿ ವರದಕ್ಷಿಣೆ ಆಯಾಮ ಇರುವುದಿಲ್ಲ ಎಂದು ಡಿಆರ್ಓ ತನಿಖಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  ಹೇಮಂತ್ ಮಾಡಿದ್ದ ಆರೋಪಗಳೇ ವಿಜೆ ಚಿತ್ರಾ ಸಾವಿಗೆ ಕಾರಣ!ಹೇಮಂತ್ ಮಾಡಿದ್ದ ಆರೋಪಗಳೇ ವಿಜೆ ಚಿತ್ರಾ ಸಾವಿಗೆ ಕಾರಣ!

  ಹೇಮಂತ್ 50 sovereigns ಚಿನ್ನ ನೀಡಲಾಗಿದೆ

  ಹೇಮಂತ್ 50 sovereigns ಚಿನ್ನ ನೀಡಲಾಗಿದೆ

  ಇನ್ನು ವಿಚಾರಣೆ ವೇಳೆ ಚಿತ್ರಾ ಅವರ ತಾಯಿ, ''ಮದುವೆ ಸಂದರ್ಭದಲ್ಲಿ ನನ್ನ ಮಗಳಿಗೆ 50 sovereigns, 20 sovereigns ಚಿನ್ನ ನೀಡಲಾಗಿದೆ'' ಎಂದು ಪೊಲೀಸರ ಮುಂದೆ ತಿಳಿಸಿದ್ದಾರೆ. ಈ ವಿಷಯ ಪ್ರಕರಣಕ್ಕೆ ಹೊಸ ಅಂಶವಾಗಿದ್ದು, ಈ ಹಿನ್ನೆಲೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

  ನ್ಯಾಯಾಲಯಕ್ಕೆ ವರದಿ ಸಲ್ಲಿಕೆ!

  ನ್ಯಾಯಾಲಯಕ್ಕೆ ವರದಿ ಸಲ್ಲಿಕೆ!

  ದಿವಂಗತ ನಟಿ ಚಿತ್ರ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಧಾರಾವಾಹಿ ಕಲಾವಿದ ಶರಣ್ಯ ಅವರನ್ನು ವಿಚಾರಣೆ ನಡೆಸಲಾಗಿದೆ. ಚಿತ್ರಾ ಅವರ ಮ್ಯಾನೇಜರ್ ಆನಂದ್ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಈ ಪ್ರಕರಣದ ಅಂತಿಮ ವಿಚಾರಣೆ ಮುಕ್ತಾಯಗೊಂಡಿದೆ, ಅದರ ವರದಿಯನ್ನು ಒಂದು ಅಥವಾ ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆರ್‌ಡಿಒ ದಿವ್ಯಾಶ್ರೀ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

  ಸ್ಟಾರ್ ಗಳ ಜಾಮಾನ ಮುಗಿತು ಇನ್ನೇನಿದ್ರು ನಮ್ದೇ ಹವಾ | Pankaj Tripathi | Filmibeat Kannada
  ಈ ಪ್ರಕರಣದಲ್ಲಿ ಅನುಮಾನ ಹೆಚ್ಚಿದೆ

  ಈ ಪ್ರಕರಣದಲ್ಲಿ ಅನುಮಾನ ಹೆಚ್ಚಿದೆ

  ಅಂದ್ಹಾಗೆ, ಚಿತ್ರ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಆಕೆಯ ಫೋನ್‌ನಿಂದ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಾ ಅವರ ಫೋನ್‌ನಿಂದ ಆಡಿಯೋ ಫೈಲ್‌ಗಳನ್ನು ಪತಿ ಹೇಮಂತ್ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ, ಸೈಬರ್ ಪೊಲೀಸರ ಸಹಾಯದಿಂದ ಅದನ್ನು ಮತ್ತೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರಾ ತಾಯಿ ಹೇಮಂತ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

  English summary
  Actress VJ Chitra Death case: RDO Officials ruled out dowry harassment by husband.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X