twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರಕ್ಕೆ ಹೆದರಿ ಸಿನಿಮಾದ ದೃಶ್ಯಕ್ಕೆ ಕತ್ತರಿ ಹಾಕಿದರೇ ನಟ ವಿಜಯ್!?

    |

    ನಟ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಕೊರೊನಾ ನಿಯಮ ಜಾರಿಯಲ್ಲಿದ್ದಾಗ ಬಿಡುಗಡೆ ಆದ ಮೊದಲ ಸ್ಟಾರ್ ನಟನ ಸಿನಿಮಾ ಆಗಿದ್ದ 'ಮಾಸ್ಟರ್' ಕೆಲವೇ ದಿನಗಳಲ್ಲಿ 200 ಕೋಟಿ ಹಣ ಗಳಿಸಿ ದಾಖಲೆ ನಿರ್ಮಿಸಿದೆ.

    'ಮಾಸ್ಟರ್' ಸಿನಿಮಾವನ್ನು ಅಮೆಜಾನ್ ಪ್ರೈಂ ಗೆ ಸಹ ಬಿಡುಗಡೆ ಮಾಡಲಾಗಿದ್ದು, ಅಲ್ಲಿಯೂ ಕೋಟ್ಯಂತರ ಮಂದಿ ಸಿನಿಮಾವನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.

    ಆದರೆ 'ಮಾಸ್ಟರ್' ಸಿನಿಮಾದಲ್ಲಿ ಒಂದು ಬಹುಮುಖ್ಯವಾದ ದೃಶ್ಯಕ್ಕೆ ಕತ್ತರಿ ಹಾಕಲಾಗಿದ್ದು, ಆ ಕತ್ತರಿ ಹಾಕಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಜಯ್ ಅಭಿಮಾಇಗಳಿಗೆ ಇಷ್ಟವಾಗುವಂತಹಾ ದೃಶ್ಯವೇ ಅದಾಗಿದ್ದರೂ ಏಕೆ ಆ ಸೀನ್‌ ಅನ್ನು ತೆಗೆದುಹಾಕಲಾಯಿತು ಎಂಬುದು ಬಹು ಚರ್ಚೆಗೆ ಕಾರಣವಾಗಿದೆ. ಸರ್ಕಾರಕ್ಕೆ ಹೆದರಿ ನಟ ವಿಜಯ್ ಅವರೇ ಆ ದೃಶ್ಯಕ್ಕೆ ಕತ್ತರಿ ಹಾಕಿಸಿದ್ದಾರೆ ಎನ್ನಲಾಗುತ್ತಿದೆ.

    ಮಹಿಳೆಯರ ಸುರಕ್ಷತೆ, 'ಉಡುಪು ಸಂಹಿತೆ' ಬಗ್ಗೆ ಮಾತು

    ಮಹಿಳೆಯರ ಸುರಕ್ಷತೆ, 'ಉಡುಪು ಸಂಹಿತೆ' ಬಗ್ಗೆ ಮಾತು

    ಡಿಲೀಟ್ ಮಾಡಲಾಗಿರುವ ಆ ದೃಶ್ಯದಲ್ಲಿ ನಟ ವಿಜಯ್ ಮಹಿಳೆಯರ ಹಕ್ಕುಗಳ ಬಗ್ಗೆ, ಮಹಿಳಾ ಸುರಕ್ಷತೆ ಬಗ್ಗೆ, ಮಹಿಳೆಯ ಮೇಲೆ ಹೇರಲಾಗುವ 'ಉಡುಪು ಸಂಹಿತೆ' ಗಳ ಬಗ್ಗೆ, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿಜಯ್ ಪ್ರಸ್ತುತ ವಿಷಯಗಳ ಬಗ್ಗೆಯೇ ದೃಶ್ಯದಲ್ಲಿ ಮಾತನಾಡಿದ್ದಾರೆ. ಒಂದೊಳ್ಳೆ ದೃಶ್ಯವೇ ಆಗಿದ್ದ ಇದನ್ನು ಸಿನಿಮಾದಿಂದ ಡಿಲೀಟ್ ಮಾಡಲಾಗಿದೆ.

    ಸಿನಿಮಾದ ಉದ್ದ ಸೀನ್ ಕತ್ತರಿಸಲು ಕಾರಣವಲ್ಲ

    ಸಿನಿಮಾದ ಉದ್ದ ಸೀನ್ ಕತ್ತರಿಸಲು ಕಾರಣವಲ್ಲ

    ಆದರೆ ಈ ಸೀನ್ ಅನ್ನು ಡಿಲೀಟ್ ಮಾಡಲು ಸಿನಿಮಾದ ಉದ್ದ ಕಾರಣವಲ್ಲ, ಬದಲಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸದೇ ಇರಲೆಂದು ವಿಜಯ್ ಅವರೇ ವಿಶೇಷ ಆಸಕ್ತಿವಹಿಸಿ ಸೀನ್ ಅನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ 'ಮಾಸ್ಟರ್' ಸಿನಿಮಾ ನಟರೊಬ್ಬರು ಹೇಳಿರುವುದು 'ಸ್ಪಾಟ್‌ಬಾಯ್' ವರದಿ ಮಾಡಿದೆ.

    ಸರ್ಕಾರಕ್ಕೆ ಇರುಸು-ಮುರುಸಾಗದಿರಲೆಂದು ಸೀನ್ ಡಿಲೀಟ್

    ಸರ್ಕಾರಕ್ಕೆ ಇರುಸು-ಮುರುಸಾಗದಿರಲೆಂದು ಸೀನ್ ಡಿಲೀಟ್

    ಡಿಲೀಟ್ ಆಗಿರುವ ದೃಶ್ಯದಲ್ಲಿ ವಿಜಯ್ ಮಹಿಳೆಯರಿಗೆ ಅವರಿಗೆ ಇಷ್ಟವಾಗುವ ಉಡುಗೆ ತೊಡುವಂತೆ ಹೇಳುತ್ತಾರೆ. ಹುಡುಗರೊಂದಿಗೆ ಆತ್ಮೀಯವಾಗಿ, ಧೈರ್ಯವಾಗಿ ಇರುವಂತೆ ಹೇಳುತ್ತಾರೆ. ಇತ್ತೀಚೆಗೆ ನಡೆದ ಅತ್ಯಾಚಾರಗಳ ಬಗ್ಗೆ, ಮಹಿಳೆಯರಿಗೆ ಅಸುರಕ್ಷಿತವಾಗಿರುವ ಸಮಾಜದ ಬಗ್ಗೆ ಸಮಾಜದ ಬಗ್ಗೆ ಮಾತನಾಡುತ್ತಾರೆ. ಉಳಿದ ರಾಜ್ಯಗಳಂತೆ ತಮಿಳುನಾಡಿನಲ್ಲಿಯೂ ಮಹಿಳಾ ಸುರಕ್ಷತೆ ಮುಖ್ಯ ವಿಷಯ. ಅಲ್ಲಿ ಚುನಾವಣೆ ಸಹ ಸಮೀಪದಲ್ಲಿರುವ ಕಾರಣ ಈ ದೃಶ್ಯದಿಂದ ಸರ್ಕಾರಕ್ಕೆ ಇರುಸು-ಮುರುಸಾಗಬಹುದೆಂಬ ಕಾರಣಕ್ಕೆ ದೃಶ್ಯವನ್ನು ಕತ್ತರಿಸಲು ಹೇಳಿದರಂತೆ ವಿಜಯ್.

    Recommended Video

    ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada
    'ಮರ್ಸೆಲ್' ಸಿನಿಮಾಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು

    'ಮರ್ಸೆಲ್' ಸಿನಿಮಾಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು

    ಈ ಹಿಂದೆ ವಿಜಯ್ ನಟನೆಯ 'ಮರ್ಸೆಲ್' ಸಿನಿಮಾದ ಸಂಭಾಷಣೆ ಸಹ ಇದೇ ರೀತಿ ವಿವಾದಕ್ಕೆ ಕಾರಣವಾಗಿತ್ತು. ಆ ಸಿನಿಮಾದಲ್ಲಿ ನಟ ವಿಜಯ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎನ್ನಲಾಗಿತ್ತು. ಹಲವು ಬಿಜೆಪಿಗರು ಸಿನಿಮಾವನ್ನು ವಿರೋಧಿಸಿದರು. ವಿಜಯ್ ಕ್ರಿಶ್ಚಿಯನ್ ಆದ್ದರಿಂದ ಬಿಜೆಪಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ಆರೋಪಿಸಿತ್ತು. ಆ ನಂತರ ವಿಜಯ್ ಮನೆ ಮೇಲೆ ಐಟಿ ದಾಳಿ ಸಹ ನಡೆದಿತ್ತು.

    English summary
    Why a good scene deleted from Vijay's Master movie. Deleted scene now became viral on social media.
    Tuesday, February 9, 2021, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X