For Quick Alerts
  ALLOW NOTIFICATIONS  
  For Daily Alerts

  ಅನುಮತಿ ಇಲ್ಲದೆ ನಟಿ ರೇಖಾಗೆ ಕಿಸ್ ಮಾಡಿದ ಕಮಲ್ ಹಾಸನ್

  |

  ತಮಿಳಿನ ಹಿರಿಯ ನಟಿ ರೇಖಾ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 'ಪುನ್ನಗೈ ಮನ್ನನ್' ಚಿತ್ರದ ಕಿಸ್ಸಿಂಗ್ ದೃಶ್ಯದ ಬಗ್ಗೆ ಮಾತನಾಡಿರುವ ರೇಖಾ, ಈ ಚಿತ್ರದಲ್ಲಿ ನನ್ನ ಅನುಮತಿ ಇಲ್ಲದೆ ಕಮಲ್ ಹಾಸನ್ ಕಿಸ್ ಮಾಡಿದ್ದರು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

  ನಟಿ ರೇಖಾ ಅವರ ಈ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗದೆ. ಇದು ಕೂಡ ಲೈಂಗಿಕ ದೌರ್ಜನ್ಯ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 1986ರಲ್ಲಿ ತೆರೆಗೆ ಬಂದ ಪುನ್ನಗೈ ಮನ್ನನ್ ಚಿತ್ರದಲ್ಲಿ ನಾಯಕನಾಗಿ ಕಮಲ್ ಹಾಸನ್ ಮಿಂಚಿದ್ದರು. ಚಿತ್ರಕ್ಕೆ ಬಾಲಚಂದರ್ ಆಕ್ಷನ್ ಕಟ್ ಹೇಳಿದ್ದಾರೆ. ನಟಿ ರೇಖಾ ಕಮಲ್ ಬಗ್ಗೆ ಹೇಳಿದ್ದನು? ಮುಂದೆ ಓದಿ..

  'ಇಂಡಿಯನ್-2' ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಿದ ಕಮಲ್ ಹಾಸನ್'ಇಂಡಿಯನ್-2' ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಿದ ಕಮಲ್ ಹಾಸನ್

  ಚರ್ಚೆಗೆ ಕಾರಣವಾಗಿದೆ ಪುನ್ನಗೈ ಮನ್ನನ್ ಕಿಸ್ಸಿಂಗ್ ದೃಶ್ಯ

  ಚರ್ಚೆಗೆ ಕಾರಣವಾಗಿದೆ ಪುನ್ನಗೈ ಮನ್ನನ್ ಕಿಸ್ಸಿಂಗ್ ದೃಶ್ಯ

  ಪುನ್ನಗೈ ಮನ್ನನ್ ಚಿತ್ರದಲ್ಲಿ ನಾಯಕಿ ರೇಖಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಮಲ್ ಹಾಸನ್ ರೇಖಾ ಅವರಿಗೆ ಕಿಸ್ ಮಾಡುತ್ತಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

  ಮತ್ತೆ ಗೆದ್ದು ಬೀಗಿದ ಕೇಜ್ರಿವಾಲ್ ಗೆ ಅಭಿನಂದನೆ ಸಲ್ಲಿಸಿದ ನಟ ಕಮಲ್ ಹಾಸನ್ಮತ್ತೆ ಗೆದ್ದು ಬೀಗಿದ ಕೇಜ್ರಿವಾಲ್ ಗೆ ಅಭಿನಂದನೆ ಸಲ್ಲಿಸಿದ ನಟ ಕಮಲ್ ಹಾಸನ್

  ನಟಿ ರೇಖಾ ಹೇಳಿದ್ದೇನು?

  ನಟಿ ರೇಖಾ ಹೇಳಿದ್ದೇನು?

  ಚುಂಬನದ ದೃಶ್ಯದ ಬಗ್ಗೆ ಮಾತನಾಡಿದ ರೇಖಾ "ನಿರ್ದೇಶಕ ಬಾಲಚಂದರ್ ನನ್ನ ಅನುಮತಿ ಪಡೆಯದೆ ಚುಂಬನದ ದೃಶ್ಯದ ಬಗ್ಗೆ ಪ್ಲಾನ್ ಮಾಡಿದ್ದರು. ಅಲ್ಲದೆ ನನ್ನ ಒಪ್ಪಿಗೆ ಇಲ್ಲದೆ ದೃಶ್ಯದಲ್ಲಿ ಕಿಸ್ ಮಾಡಿಸಲಾಯಿತು. ಈ ದೃಶ್ಯದಿಂದ ನನ್ನ ತಂದೆ ಅಸಮಾಧಾನಗೊಳ್ಳುತ್ತಾರೆ ಎಂದು ತುಂಬ ಚಿಂತೆ ಆಗಿತ್ತು. ಆದರೆ ಬಾಲಚಂದರ್ ಇದೆಲ್ಲ ಕಾಮನ್, ಎರಡು ಪಾತ್ರಗಳ ನಡುವೆ ಪ್ರೀತಿ ಮತ್ತು ಬಾಂಧವ್ಯವನ್ನು ತೋರಿಸಬೇಕು ಇದರಲ್ಲಿ ಅಶ್ಲೀಲತೆ ಇಲ್ಲ ಎಂದು ಹೇಳಿದ್ದರು" ಎಂದು ಸಂದರ್ಶವೊಂದರಲ್ಲಿ ಹೇಳಿದ್ದಾರೆ.

  ನೆಟ್ಟಿಗರ ಪ್ರತಿಕ್ರಿಯೆ

  ನೆಟ್ಟಿಗರ ಪ್ರತಿಕ್ರಿಯೆ

  ಇನ್ನು "ಈ ಘಟನೆ ನನ್ನನ್ನು ತುಂಬ ದಿನಗಳ ವರೆಗೂ ಕಾಡುತ್ತಿತ್ತು" ಎಂದು ಹೇಳಿಕೊಂಡಿದ್ದಾರೆ. ನಟಿ ರೇಖಾ ನೀಡಿರುವ ಸಂದರ್ಶನ ಹಳೆಯದಾದರು ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದ್ದಾರೆ. ರೇಖಾ ಮಾತುಗಳನ್ನು ಕೇಳಿ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಇದು ಒಂದು ರೀತಿಯ ಲೈಂಗಿಕ ದೌರ್ಜನ್ಯ ಎಂದು ಹೇಳುತ್ತಿದ್ದಾರೆ.

  ಒಂದೆ ಸಿನಿಮಾದಲ್ಲಿ ರಜನಿ- ಕಮಲ್: ನನಸಾಯ್ತು ಅಭಿಮಾನಿಗಳ ವರ್ಷಗಳ ಕನಸುಒಂದೆ ಸಿನಿಮಾದಲ್ಲಿ ರಜನಿ- ಕಮಲ್: ನನಸಾಯ್ತು ಅಭಿಮಾನಿಗಳ ವರ್ಷಗಳ ಕನಸು

  ಕಮಲ್ ಹಾಸನ್ ಕ್ಷಮೆಯಾಚಿಸಬೇಕು

  ಕಮಲ್ ಹಾಸನ್ ಕ್ಷಮೆಯಾಚಿಸಬೇಕು

  ಇನ್ನು ಕೆಲವರು ಕಮೆಂಟ್ ಮಾಡಿ, ನಟ ಕಮಲ್ ಕ್ಷಮೆಯಾಚಿಸಬೇಕು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಸಂದರ್ಶಕರ ವಿರುದ್ಧವು ಕಿಡಿಕಾರುತ್ತಿದ್ದಾರೆ. 'ಲೈಂಗಿಕ ದೌರ್ಜನ್ಯ ಎನ್ನುವುದು ಎಷ್ಟು ಸಾಮಾನ್ಯವಾಗಿದೆ ಎಂದು ಸಂದರ್ಶಕನ ಪ್ರತಿಕ್ರಿಯೆ ತೋರುತ್ತಿದೆ' ಎಂದು ಹೇಳುತ್ತಿದ್ದಾರೆ.

  English summary
  Actress Rekha said that without my permission Actor Kamal Haasan kissed to to me in Punnagai Mannan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X