For Quick Alerts
  ALLOW NOTIFICATIONS  
  For Daily Alerts

  ಕೋಡಿ ಮೋಡಿಯಲ್ಲಿ ರಮ್ಯಾ, ದಿಗಂತ್ ಜೋಡಿ

  |

  ನಟಿ ರಮ್ಯಾ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚುಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವುದು ಗೊತ್ತೇ ಇದೆ. ಇದೀಗ ರಮ್ಯಾ, ತೆಲುಗು ಸೂಪರ್ ಹಿಟ್ ಚಿತ್ರ 'ಅರುಂಧತಿ' ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅರುಂಧತಿಯಲ್ಲಿ ನಟಿಸಿದ್ದು ಕರ್ನಾಟಕ ಮೂಲದ ಅನುಷ್ಕಾ ಎಂಬುದನ್ನು ಮತ್ತೆ ಯಾರಿಗೂ ನೆನಪಿಸಬೇಕಿಲ್ಲ ತಾನೇ?

  ಕೋಡಿ ರಾಮಕೃಷ್ಣ ನಿರ್ದೇಶಿಸಲಿರುವ ಮುಂದಿನ ಚಿತ್ರ ಮಹಿಳಾ ಪ್ರಧಾನವಾಗಿದ್ದು ಅದರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಟಿಸಲಿದ್ದಾರೆಂಬುದು ಇತ್ತೀಚಿಗೆ ಬಂದ ಸುದ್ದಿ. ಸುದ್ದಿಮೂಲಗಳ ಪ್ರಕಾರ, ರಮ್ಯಾಗೆ ಕೋಡಿಯವರ ಕಥೆ ಇಷ್ಟವಾಗಿದ್ದು ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ನಾಯಕರಾಗಿ ಗುಳಿಕೆನ್ನೆ ಚೆಲುವ ದಿಗಂತ್ ನಟಿಸಲಿದ್ದಾರೆ.

  ಆಶ್ಚರ್ಯವೆಂದರೆ, ಈ ಚಿತ್ರ ಕನ್ನಡದಲ್ಲಿಯೇ ನಿರ್ಮಾಣವಾಗುತ್ತಿದೆ. ರಮ್ಯಾ, ದಿಗಂತ್ ಏನೂ ತೆಲುಗಿಗೆ ಹೋಗುತ್ತಿಲ್ಲ. ಅಂದುಕೊಂಡಂತೆ ನಡೆದರೆ, ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ರಮ್ಯಾ ಮತ್ತು ದಿಗಂತ್ ಎರಡನೇ ಬಾರಿಗೆ ಮತ್ತೆ ಜೊತೆಯಾಗಲಿದ್ದಾರೆ. ಈ ಮೊದಲು ಅವರಿಬ್ಬರೂ 'ಟಿ ಎನ್ ಸೀತಾರಾಂ' ನಿರ್ದೇಶನದ 'ಮೀರಾ ಮಾಧವ ರಾಘವ' ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸಿದ್ದರು. ಒಟ್ಟಿನಲ್ಲಿ ರಮ್ಯಾ-ದಿಗಂತ್ ಅಭಿಮಾನಿಗಳಿಗೆ ಸಂತಸದ ಸುದ್ದಿ. (ಒನ್ ಇಂಡಿಯಾ ಕನ್ನಡ)

  English summary
  Golden Gal Ramya seems to have bagged a biggie. The actress will be reportedly working with Kodi Ramakrishn​a of Telugu blockbuster movie Arundhati fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X