For Quick Alerts
  ALLOW NOTIFICATIONS  
  For Daily Alerts

  ಪೈಪೋಟಿಯೇ ಇಲ್ಲದೆ ಜ್ಯೂ.ಎನ್ಟಿಆರ್ ಚಿತ್ರ ರಾಜ್ಯದಲ್ಲಿ ತೆರೆಗೆ

  |

  ಜ್ಯೂ.ಎನ್ಟಿಆರ್ ಚಿತ್ರಕ್ಕೆ ಕನ್ನಡ ಚಿತ್ರಗಳಿಂದ ಯಾವ ಪೈಪೋಟಿ ಇಲ್ಲದೆ ಭರ್ಜರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಜ್ಯೂ. ಎನ್ಟಿಆರ್ ಅಭಿನಯದ ದಮ್ಮು ಚಿತ್ರ ಇದೇ ತಿಂಗಳು 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

  ಭಾರೀ ನಿರೀಕ್ಷೆಯ ಎರಡು ಕನ್ನಡ ಚಿತ್ರಗಳಾದ ಅಣ್ಣಾಬಾಂಡ್ ಮತ್ತು ಕಠಾರಿವೀರ ಸುರಸುಂದರಾಂಗಿ ಅದೇ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗಬೇಕಿತ್ತು. ಆದರೆ ಎರಡೂ ಚಿತ್ರಗಳಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬವಾಗಿ ಮೇ ಮೊದಲವಾರಕ್ಕೆ ಮುಂದಕ್ಕೆ ಹೋಗಿರುವುದರಿಂದ ಮತ್ತೊಮ್ಮೆ ಮಗುದೊಮ್ಮೆ ತೆಲುಗು ಚಿತ್ರಗಳು ರಾಜ್ಯದ ಸಿನಿಮಾ ಮಂದಿರಗಳಲ್ಲಿ ಅಪ್ಪಳಿಸಲಿವೆ.

  ಬೋಯಪಾಟಿ ಶ್ರೀನು ನಿರ್ದೇಶನದ , ಸುಮಾರು 34 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜ್ಯೂ.ಎನ್ಟಿಆರ್, ತ್ರಿಶಾ ಕೃಷ್ಣನ್ ಅಭಿನಯದ ದಮ್ಮು ಚಿತ್ರಕ್ಕೆ ಮುಂಬೈ ಕರ್ನಾಟಕ ಭಾಗಕ್ಕೆ ರಾಘವೇಂದ್ರ ಎಂಟರ್ಪ್ರೈಸಸ್, ರಾಜ್ಯದ ಉಳಿದ ಭಾಗಕ್ಕೆ ಕುಬೇರನ್ ಪಿಚ್ಚರ್ಸ್, ಸಮರತ ಫಿಲಂಸ್, ಬಳ್ಳಾರಿ ಸಾಯಿ ಹಂಚಿಕೆದಾರರು.

  ಒಂದು ಮೂಲಗಳ ಪ್ರಕಾರ ಈ ಚಿತ್ರ ರಾಜ್ಯದ 100ಕ್ಕೂ ಹೆಚ್ಚು ಮಂದಿರಗಳಲ್ಲಿ ದಮ್ಮು ಚಿತ್ರ ಬಿಡುಗಡೆಯಾಗಲಿದೆ. ಒಂದು ವೇಳೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾದರೆ ಕನ್ನಡೇತರ ಚಿತ್ರವೊಂದು ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನುವ ದಾಖಲೆ ದಮ್ಮು ಚಿತ್ರ ಬರೆಯಲಿದೆ.

  English summary
  Much awaited Telugu movie Jr. NTR's Dammu releasing on 27th April. Since, Anna Bond and KVSS release date postponed there is no Kannada movie competing for Telugu movie in Karnataka. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X