For Quick Alerts
  ALLOW NOTIFICATIONS  
  For Daily Alerts

  ಇದೇ ನೀವು ನನಗೆ ಕೊಡುವ ದೊಡ್ಡ ಗಿಫ್ಟ್: ಅಭಿಮಾನಿಗಳಲ್ಲಿ Jr. NTR ಮನವಿ

  |

  ಟಾಲಿವುಡ್ ಸ್ಟಾರ್ ನಟ ನಟ ಜೂ.ಎನ್ ಟಿ ಆರ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮೇ 20 ಜೂ. ಎನ್ ಟಿ ಆರ್ 37ನೇ ವಸಂತಕ್ಕೆ ಕಾಲಿಡುತ್ತಿದ್ದು, ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

  ಆದರೆ ಆ ಬಾರಿ ಅದ್ದೂರಿ ಆಚರಣೆ, ಸಂಭ್ರಮ, ಸಡಗರಕ್ಕೆ ಬ್ರೇಕ್ ಬಿದ್ದಿದೆ. ಕೊರೊನಾ ಹಾವಳಿ ಎಲ್ಲಾ ಸಂಭ್ರಮ, ಸಡಗರವನ್ನು ಕಿತ್ತುಕೊಂಡಿದೆ. ಪ್ರತಿವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದ ಜೂ.ಎನ್ ಟಿ ಆರ್ ಕಳೆದ ವರ್ಷದಿಂದ ಸರಳವಾಗಿ ಮನೆಯಲ್ಲೇ ಆಚರಣೆ ಮಾಡುತ್ತಿದ್ದಾರೆ.

  ಎನ್‌ಟಿಆರ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನಟಿ ನಾಯಕಿ?ಎನ್‌ಟಿಆರ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನಟಿ ನಾಯಕಿ?

  ಈ ಬಾರಿ ಕೂಡ ಹುಟ್ಟುಹಬ್ಬ ಆಚರಣೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಭೀಕರ ಪರಿಸ್ಥಿಯ ಸಮಯದಲ್ಲಿ ಹುಟ್ಟುಹಬ್ಬ ಆಚರಣೆ ಮಾಡದಂತೆ ಕೇಳಿಕೊಂಡಿದ್ದಾರೆ. ಹುಟ್ಟುಹಬ್ಬದ ಎರಡು ದಿನಗಳ ಮುಂಚೆಯೇ ಜೂ ಎನ್ ಟಿ ಆರ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, 'ನನ್ನ ಅಭಿಮಾನಿಗಳು, ಪ್ರತಿಯೊಬ್ಬರಿಗೂ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶಗಳು, ವಿಡಿಯೋ ಮತ್ತು ಶುಭಾಶಯಗಳನ್ನು ನೋಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರ ಋಣಿಯಾಗಿರುತ್ತೇನೆ. ಸದ್ಯದಲ್ಲೇ ಕೊರೊನಾ ನೆಗೆಟಿವ್ ವರದಿ ಬರಲಿದೆ' ಎಂದಿದ್ದಾರೆ.

  ಜೊತೆಗೆ ಪ್ರತಿವರ್ಷ ನನ್ನ ಹುಟ್ಟುಹಬ್ಬಕ್ಕೆ ತೋರಿದ ಪ್ರೀತಿಗೆ ನೀವು ಅಭಾರಿ. ಇಂಥ ಸಂಕಷ್ಟದ ಕಾಲದಲ್ಲಿ ನೀವು ಮನೆಯಲ್ಲೇ ಇರುವುದು ನನಗೆ ಕೊಡುವ ಅತೀ ದೊಡ್ಡ ಗಿಫ್ಟ್' ಎಂದು ಹೇಳಿದ್ದಾರೆ. ಇದು ಆಚರಣೆಯ ಸಮಯವಲ್ಲ. ಇಂಥ ಕಷ್ಟದ ಸಮಯದಲ್ಲಿ ಅಗತ್ಯ ಇರೋರಿಗೆ ಸಹಾಯ ಮಾಡಿ. ಇದೆಲ್ಲ ಮುಗಿದ ಬಳಿಕ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ' ಎಂದು ಹೇಳಿದ್ದಾರೆ.

  Kirik Party ಅನುಭವವನ್ನು‌ ಮತ್ತೆ ಫೀಲ್‌ ಮಾಡೋಕೆ ಇಷ್ಟ ಇಲ್ಲ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಜೂ. ಎನ್ ಟಿ ಆರ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದ. ಚಿತ್ರದಲ್ಲಿ ರಾಮ್ ಚರಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟಿ ಅಲಿಯಾ ಭಟ್, ಅಜಯ್ ದೇವಗನ್ ಕೂಡ ಚಿತ್ರದಲ್ಲಿದ್ದಾರೆ.

  English summary
  Tollywood Actor Jr. NTR requests to fans not to celebrate his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X