Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಸಿತಾರಾ ಅನ್‌ಪ್ಲ್ಯಾನ್ಡ್ ಬೇಬಿ, ಗೌತಮ್ ಬದುಕುತ್ತಾನಾ ಎನ್ನುವ ಭಯ ಇತ್ತು, ಅದಕ್ಕೆ ಚಿತ್ರರಂಗಕ್ಕೆ ಗುಡ್‌ಬೈ": ನಮ್ರತಾ
ತೆಲುಗು ನಟ ಮಹೇಶ್ ಬಾಬು ಹಾಗೂ ನಟಿ ನಮ್ರತಾ ಶಿರೋಡ್ಕರ್ ಪ್ರೀತಿಸಿ ಮದುವೆ ಆದವರು. ಹೊಸಬಾಳಿಗೆ ಕಾಲಿಟ್ಟ ನಂತರ ನಮ್ರತಾ ಸಿನಿಮಾಗಳಲ್ಲಿ ನಟಿಸುವುದಕ್ಕೆ ಗುಡ್ ಬೈ ಹೇಳಿದರು. ಫ್ಯಾಮಿಲಿ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ಮಹೇಶ್ ಬಾಬು ಡೇಟ್ಸ್, ವ್ಯಾಪಾರ ವ್ಯವಹಾರಗಳ ಕಡೆ ಗಮನ ಹರಿಸಿದರು.
ಸಂದರ್ಶನವೊಂದರಲ್ಲಿ ಮಹೇಶ್ ಬಾಬು ಪತ್ನಿ ನಮ್ರತಾ ತಮ್ಮ ಲವ್ ಸ್ಟೋರಿ, ಮದುವೆ ಹಾಗೂ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಮಗ ಗೌತಮ್ ಹಾಗೂ ಮಗಳು ಸಿತಾರಾ ಬಗ್ಗೆ ಆಕೆಯ ಕಾಮೆಂಟ್‌ಗಳು ಬಹಳ ವೈರಲ್ ಆಗುತ್ತಿದೆ. ಮಹೇಶ್ ಬಾಬು ಹಾಗೂ ನಮ್ರತಾ ಟಾಲಿವುಡ್ ಬೆಸ್ಟ್ ಕಪಲ್ ಎನಿಸಿಕೊಂಡಿದ್ದಾರೆ. ಮಹೇಶ್ ಬಾಬು ನಟಿಸಿದ ಸಿನಿಮಾಗಳಲ್ಲಿ 'ಪೋಕಿರಿ' ಬಹಳ ಇಷ್ಟ ಎಂದು ಹೇಳಿರುವ ನಮ್ರತಾ 'ವಂಶಿ' ಸಿನಿಮಾ ಇಷ್ಟವಾಗಲಿಲ್ಲ' ಎಂದಿದ್ದಾರೆ.
'ಅವತಾರ್
2'
ಅನ್ನು
ಸಿನಿಮಾ
ಎಂದು
ಕರೆಯುವುದೇ
ಅಪರಾಧ:
ಹೀಗಂದಿದ್ಯಾಕೆ
ರಾಮ್
ಗೋಪಾಲ್
ವರ್ಮಾ
2005ರಲ್ಲಿ ಮದುವೆ ಆಯಿತು. ಮರು ವರ್ಷವೇ ಗೌತಮ್ ಹುಟ್ಟಿದ್ದ. ಆದರೆ ಅವನು ಹುಟ್ಟಿದ 6 ವರ್ಷಗಳ ನಂತರ ಸಿತಾರ ಹುಟ್ಟಿದ್ದು. ಅದನ್ನು ನಾವು ಪ್ಲ್ಯಾನ್ ಮಾಡಿರಲಿಲ್ಲ ಎಂದು ನಮ್ರತಾ ಹೇಳಿದ್ದಾರೆ.

ಸಿತಾರಾ ಅನ್‌ಪ್ಲ್ಯಾನ್ಡ್ ಬೇಬಿ
"ಹೆಂಡತಿಯಾಗಿ ತಾಯಿಯಾಗಿ ತಮ್ಮ ಧರ್ಮವನ್ನು ನಿರ್ವಹಿಸುವುದಕ್ಕಾಗಿಯೇ ತಾವು ಸಿನಿಮಾಗಳಿಗೆ ದೂರ ಇದ್ದೇನೆ. ಮಗಳು ಸಿತಾರ ಬಗ್ಗೆ ಮಾತನಾಡುತ್ತಾ ಸಿತಾರ ನಮಗೆ ಅನ್‌ಪ್ಲ್ಯಾನ್ಡ್ ಬೇಬಿ. ಮಗ ಮಾತ್ರ ಸಾಕು ಎಂದುಕೊಂಡಿದ್ದರಂತೆ. ಆದರೆ ನಂತರ ಅನಿಸಿದ್ದು ಏನು ಅಂದರೆ ಆಕೆ ಇಲ್ಲದೇ ಇದ್ದಿದ್ದರೆ ನಮ್ಮ ಜೀವನ ಸಂಪೂರ್ಣ ಅನ್ನಿಸುತ್ತಿರಲಿಲ್ಲ. ಅವಳು ನಮ್ಮ ಮನೆಯ ಬೆಳಕು, ಆಶಾ ಕಿರಣ, ಸರ್ವಸ್ವ" ಎಂದಿದ್ದಾರೆ.

ಗೌತಮ್ ಬಗ್ಗೆ ಬಹಳ ಭಯ ಇತ್ತು
"ಮಗ ಗೌತಮ್ ಹುಟ್ಟಿದಾಗ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದೇವೆ. ಗೌತಮ್ 8 ತಿಂಗಳಿಗೆ ಹುಟ್ಟಿದ್ದ. ಆತನ ಕಂಡೀಷನ್ ಬಹಳ ಕ್ರಿಟಿಕಲ್ ಆಗಿದೆ ಎಂದು ವೈದ್ಯರ ಹೇಳಿದ್ದರು. ಆ ಸಮಯದಲ್ಲಿ ಅವನು ಬದುಕುವುದೇ ಇಲ್ಲವೇನೋ ಎಂದು ಬಹಳ ಆತಂಕ ಎದುರಾಗಿತ್ತು. ಆದರೆ ಏನೇನೋ ಕಷ್ಟ ಎದುರಿಸಿ ಅದರಿಂದ ಹೊರ ಬಂದಿದ್ದೆವು"

ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ಯಾಕೆ?
ಮುಂಬೈನಲ್ಲಿ ಹುಟ್ಟಿಬೆಳೆದ ನಮ್ರತಾ ಬಹಳ ಆಸೆಪಟ್ಟು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಚಿತ್ರರಂಗಕ್ಕೆ ಬರುವುದು ಕಷ್ಟ ಆಗಲಿಲ್ಲ. ಮಹೇಶ್ ಬಾಬು ಜೊತೆ 'ವಂಶಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲಿಂದಲೇ ಇಬ್ಬರು ನಡುವೆ ಪ್ರೀತಿ ಹುಟ್ಟಿತ್ತು. "ಮಹೇಶ್ ಬಾಬುಗೆ ಮದುವೆ ಬಗ್ಗೆ ಕ್ಲಾರಿಟಿ ಇತ್ತು. ಮದುವೆ ನಂತರ ನಾನು ನಟಿಸಬಾರದು ಎಂದು ಹೇಳಿದ್ದರು. ನನಗೆ ನಟನೆಗಿಂತ ಮಹೇಶ್ ಬಾಬು ಜೊತೆ ಮದುವೆ ಬಹಳ ಹ್ಯಾಪಿಯೆಸ್ಟ್ ಮೊಮೆಂಟ್, ನಟನೆ ನಿಲ್ಲಿಸಿದಕ್ಕೆ ಯಾವುದೇ ಕಾರಣಕ್ಕೂ ಬೇಸರ ಇಲ್ಲ" ಎಂದು ನಮ್ರತಾ ಹೇಳಿಕೊಂಡಿದ್ದಾರೆ.

ಮಕ್ಕಳ ವಿಚಾರದಲ್ಲಿ ಜಗಳ
"ಮಹೇಶ್ ಇಂಟ್ರಾವರ್ಟ್. ಸಿನಿಮಾ ಆದ್ಮೇಲೆ ಉಳಿದ ಪ್ರಪಂಚ. ಬೇರೆ ಕೆಲಸ ಇಲ್ಲ ಅಂದರೆ ಮಕ್ಕಳಿಗಾಗಿ ಮಹೇಶ್ ಬಹಳ ಸಮಯ ಕೊಡುತ್ತಾರೆ. ಗೌತಮ್, ಸಿತಾರ ತಮಗೆ ಏನೇ ಬೇಕಿದ್ದರೂ ಮಹೇಶ್ ಬಾಬುನ ಕೇಳುತ್ತಾರೆ. ಅವರು ಕೂಡ ಕೊಡಿಸುತ್ತಾರೆ. ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಕೆಲವೊಮ್ಮೆ ಜಗಳ ನಡೆಯುತ್ತಿರುತ್ತದೆ. ಇದು ಸಣ್ಣ ಪುಟ್ಟ ಜಗಳ. ಎಲ್ಲರ ಮನೆಯಲ್ಲೂ ಇದ್ದಿದ್ದೇ. " ಎಂದು ನಕ್ಕಿದ್ದಾರೆ.

ಕನ್ನಡ ಚಿತ್ರದಲ್ಲೂ ನಮ್ರತಾ ನಟನೆ
'ಜಬ್ ಪ್ಯಾರ್ ಕಿಸಿಸೇ ಹೋತಾ ಹೈ' ಚಿತ್ರದ ಪುಟ್ಟ ಪಾತ್ರದ ಮೂಲಕ ನಮ್ರತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಅದಕ್ಕೂ ಮುನ್ನ ಬಾಲನಟಿಯಾಗಿಯೂ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ 'ವಂಶಿ' ನಮ್ರತಾ ನಟಿಸಿದ ಮೊದಲ ಚಿತ್ರ. 'ಹೆರಾ ಪೇರಿ', 'ಅಸ್ತಿತ್ವ', 'ಅಂಜಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ 'ಚೋರ ಚಿತ್ತ ಚೋರ' ಚಿತ್ರದಲ್ಲಿ ನಮ್ರತಾ, ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ ಮಿಂಚಿದ್ದರು. ಇನ್ನು ಮಹೇಶ್ ಬಾಬು ಫೌಂಡೇಷನ್ ಮೂಲಕ ಸಾಕಷ್ಟು ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.