Don't Miss!
- Sports
IPL 2022: ಮುಕ್ತಾಯವಾದ ನಂತರ ತಂಡಗಳು ಮತ್ತು ಆಟಗಾರರಿಗೆ ಸಿಗಲಿರುವ ಪ್ರಶಸ್ತಿ ಮತ್ತು ಹಣವೆಷ್ಟು?
- News
ಪಠ್ಯ ಪುಸ್ತಕಗಳಲ್ಲಿ ರಾಜಕೀಯ ಸೇರಿಸಬೇಡಿ: ಸಲೀಂ ಅಹ್ಮದ್
- Finance
Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೇರೆ ಹೀರೋಯಿನ್ಸ್‌ಗಿಂತಲೂ ಸಮಂತಾ ಜೊತೆ ನನ್ನ ಕೆಮಿಸ್ಟ್ರಿ ಉತ್ತಮವಾಗಿತ್ತು: ನಾಗ ಚೈತನ್ಯ
ಸಮಂತಾ ಮತ್ತು ನಾಗಚೈತನ್ಯ ದೂರವಾಗಿ ತಿಂಗಳುಗಳೇ ಕಳೆದಿದೆ. ಈ ಇಬ್ಬರು ತಾರಾ ಜೋಡಿ ತಮ್ಮ ವಿಚ್ಛೇದನ ಘೋಷಣೆ ಮಾಡಿದ ನಂತರದಲ್ಲಿ ಸಾಕಷ್ಟು ಅಭಿಮಾನಿಗಳು ಮನನೊಂದಿದ್ದರು. ಇದಾದ ಬಳಿಕ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು ಈ ಬಗ್ಗೆ ಕಾರಣ ತಿಳಿಸದೆ ಸುಮ್ಮನಾಗಿದ್ದರು. ಬಳಿಕ ಕೊಂಚ ದಿನದ ನಂತರ ಕುಟುಂಬ ಸದಸ್ಯರು ಈ ಬಗ್ಗೆ ಮೌನ ಮುರಿದಿದ್ದರು.
ವಿಚ್ಛೇದನದ ಬಳಿಕ ನಟಿ ಸಮಂತಾ ವಿರುದ್ಧ ಹಲವು ಕೀಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರಲು ಆರಂಭಿಸಿತ್ತು. ಹಲವರು ಸಮಂತಾ ಮಾಡಿದ ತಪ್ಪಿನಿಂದಲೇ ಡಿವೋರ್ಸ್ ಆಗಿದೆ ಎನ್ನಲು ಆರಂಭಿಸಿದರು. ಸಮಂತಾಗೆ ಮಗು ಪಡೆಯಲು ಇಷ್ಟವಿರಲಿಲ್ಲ ಎಂದೆಲ್ಲಾ ಆರೋಪಗಳ ಪಟ್ಟಿಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿತ್ತು. ಇದರಿಂದಾಗಿ ಸಮಂತಾ ಸಾಕಷ್ಟು ಮನನೊಂದಿದ್ದರೂ ಕೂಡ.
ಆದರೇ ಸಮಂತಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಇಂತಹ ಸುದ್ದಿಗಳು ಪ್ರಸಾರವಾದರೂ ನಾಗ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಾಕಷ್ಟು ಸಮಯ ಹೀಗೆ ಮೌನ ವಹಿಸಿದ್ದ ನಾಗಚೈತನ್ಯ ಇದೀಗ ತಮ್ಮ ಮತ್ತು ಸಮಂತಾ ಡಿವೋರ್ಸ್ ಬಗ್ಗೆ ಮಾತನಾಡಲು ಆರಂಭಿಸಿದ್ದರೂ. ಬಂಗಾರ್‌ರಾಜು ಚಿತ್ರದ ಪ್ರಚಾರ ಸಂದರ್ಭ ಈ ಹಿಂದೆ ಡಿವೋರ್ಸ್ ಬಗ್ಗೆ ಮಾತನಾಡಿದ್ದ ನಾಗ ಚೈತನ್ಯ ಇದೀಗ ಮತ್ತೊಮ್ಮೆ ಸಮಂತಾ ಬಗ್ಗೆ ಮಾತನಾಡಿದ್ದಾರೆ ಅದೇನು ಅಂತ ಮುಂದೆ ಓದಿ...

ನಾಗ್ ಹೀಗೆ ಹೇಳಲು ಕಾರಣ ಏನು?
ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಬಳಿಕ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಾಗಚೈತನ್ಯ ಮತ್ತು ನಾಗಾರ್ಜುನ ಅಕ್ಕಿನೇನಿ ಅಭಿನಯದ 'ಬಂಗಾರ್ರಾಜು' ಸಿನಿಮಾ ರಿಲೀಸ್ ಆಗಿದೆ. ಇತ್ತೀಚೆಗೆ ನಾಗಚೈತನ್ಯ ಮತ್ತು ತಂದೆ ನಾಗಾರ್ಜುನ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ನಿರೂಪಕಿ ಕೇಳಿದ ಒಂದು ಪ್ರಶ್ನೆಗೆ ನಾಗಚೈತನ್ಯ ಸಮಂತಾ ಹೆಸರನ್ನು ಹೇಳಿದ್ದಾರೆ.

ನಿರೂಪಕಿ ಕೇಳಿದ ಪ್ರಶ್ನೆಗೆ ನಾಗಚೈತನ್ಯ ಉತ್ತರ
ಹೌದು ಖಾಸಗಿ ಸಂದರ್ಶನದ ನಿರೂಪಕಿ "ನೀವು ಸಾಕಷ್ಟು ನಟಿಯರೊಂದಿಗೆ ಅಭಿನಯಿಸಿದ್ದೀರಿ. ಇಲ್ಲಿವರೇಗೂ ನಿಮ್ಮೊಂದಿಗೆ ನಟಿಸಿದ ನಟಿಯರಲ್ಲಿ ನೀವು ಆನ್‌ಸ್ಕ್ರೀನ್ ಯಾವ ನಟಿಯೊಂದಿಗೆ ಉತ್ತಮ ಕೆಮಿಸ್ಟ್ರಿ ಹೊಂದಿದ್ದೀರಿ" ಎಂದು ಕೇಳಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರ ನೀಡಿರುವ ನಾಗಚೈತನ್ಯ ಸಮಂತಾ ಎಂದು ಉತ್ತರ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಹೌದು ಇಲ್ಲಿವರೆಗೂ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ನಾಲ್ಕು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದು, ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೂ ಹಿಡಿಸಿತ್ತು. ಸಿನಿಮಾದ ಮೂಲಕವೇ ಪ್ರೀತಿ ಮಾಡಲು ಆರಂಭಿಸಿದ್ದ ಈ ಜೋಡಿ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ತದನಂತರ ಇತ್ತೀಚೆಗೆ ಇವರಿಬ್ಬರು ಡಿವೋರ್ಸ್ ಅನೌನ್ಸ್ ಮಾಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಈ ಹಿಂದೆ ಮೊದಲ ಬಾರಿಗೆ ಮೌನ ಮುರಿದ್ದ ನಾಗ್ ಹೇಳಿದ್ದು ಏನು?
ಇನ್ನು ಕೆಲದಿಗಳ ಹಿಂದೆ ಕೂಡ 'ಬಂಗಾರ್ರಾಜು' ಸಿನಿಮಾ ಪ್ರಚಾರದ ಸಂದರ್ಭದಲ್ಲಿ ವಿಚ್ಛೇದನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ನಾಗ ಚೈತನ್ಯ, ಇಬ್ಬರ ಒಳಿತಾಗಿ ತೆಗೆದುಕೊಂಡ ನಿರ್ಣಯವದು. ಆಕೆ ಸಂತೋಷವಾಗಿದ್ದರೆ, ನಾನೂ ಸಂತೋಷವಾಗಿರುತ್ತೇನೆ. ಆ ಸಂದರ್ಭದಲ್ಲಿ ಈ ನಿರ್ಣಯ ಸೂಕ್ತ ಎನಿಸಿತು ಹಾಗಾಗಿ ನಿರ್ಣಯ ತೆಗೆದುಕೊಂಡೆವು ಎಂದಿದ್ದರು ನಾಗ ಚೈತನ್ಯ.

ನಾಗ್ ಮಾತಿಗೆ ಸಮಂತಾ ಫ್ಯಾನ್ಸ್ ಕೋಪ!
ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಗ ಚೈತನ್ಯ "ನನ್ನ ಕುಟುಂಬದ ಗೌರವಕ್ಕೆ ಹಾನಿಯಾಗುವ ಯಾವುದೇ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ'' ಎಂದಿದ್ದರು. ನಾಗಚೈತನ್ಯ ಅವರು ಹೀಗೆ ಹೇಳಿದ್ದು ಸಮಂತಾರನ್ನು ಉದ್ದೇಶಿಸಿ ಎಂದು ಹೇಳಲಾಗಿತ್ತು. ಮದುವೆ ಬಳಿಕವೂ ಸಮಂತಾ ಕೆಲವು ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿಯೂ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದು ನಾಗ ಚೈತನ್ಯ ಮತ್ತು ಅಕ್ಕಿನೇನಿ ಕುಟುಂಬಕ್ಕೆ ಹಿಡಿಸಿರಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ.