For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ ನನ್ನ ಸಿನಿಮಾಗಳ ವಿಚಾರದಲ್ಲಿ ತಂದೆ ತಲೆಹಾಕಲ್ಲ; ನಟ ನಾಗಚೈತನ್ಯ

  |

  ಟಾಲಿವುಡ್ ಸ್ಟಾರ್ ದಂಪತಿ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಅಕ್ಕಿನೇನಿ ಕುಟುಂಬದ ಮತ್ತೊಂದು ಸೀಕ್ರೆಟ್ ಬಯಲಾಗಿದೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ಯಾವುದು ಸರಿಯಿಲ್ಲ, ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ನಾಗ ಚೈತನ್ಯ ಹೇಳಿದ ಈ ಮಾತು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

  ಇತ್ತೀಚಿಗಷ್ಟೆ ಚಿತ್ರರಂಗದಲ್ಲಿ ನೆಪೋಟಿಸಂ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಅನೇಕರು ನೆಪೋಟಿಸಂ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾಗ ಚೈತನ್ಯ ಕೂಡ ಸ್ಟಾರ್​ ಕುಟುಂಬದಿಂದ ಬಂದಿರುವ ನಟ. ಚಿತ್ರರಂಗಕ್ಕೆ ಎಂಟ್ರಿ ಕೊಡಲು ನಾಗ ಚೈತನ್ಯ ಅವರಿಗೆ ತುಂಬಾ ಸುಲಭವಾಗಿತ್ತು. ಆದರೆ ಈಗ ಅವರು ತಮ್ಮ ಸ್ವಂತ ಪರಿಶ್ರಮದಿಂದ ಬೆಳೆಯುತ್ತಿದ್ದಾರೆ. ತಮ್ಮದೇ ರೀತಿಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಜಾಗ ಪಡೆದುಕೊಂಡಿದ್ದಾರೆ.

  ಸಮಂತಾಗೆ ಧನ್ಯವಾದ ತಿಳಿಸಿದ ನಾಗ ಚೈತನ್ಯ: ಹಾರ್ಟ್ ಇಮೋಜಿ ಎಲ್ಲಿ ಎನ್ನುತ್ತಿದ್ದಾರೆ ನೆಟ್ಟಿಗರುಸಮಂತಾಗೆ ಧನ್ಯವಾದ ತಿಳಿಸಿದ ನಾಗ ಚೈತನ್ಯ: ಹಾರ್ಟ್ ಇಮೋಜಿ ಎಲ್ಲಿ ಎನ್ನುತ್ತಿದ್ದಾರೆ ನೆಟ್ಟಿಗರು

  ನಾಗ ಚೈತನ್ಯ ಸದ್ಯ ಲವ್ ಸ್ಟೋರಿ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ಸಮಯದಲ್ಲಿ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಹೇಳಿರುವ ಮಾತುಗಳು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ತನ್ನ ಸಿನಿಮಾಗಳ ವಿಚಾರದಲ್ಲಿ ತಂದೆ ಅಕ್ಕಿನೇನಿ ನಾಗಾರ್ಜುನ ತಲೆಹಾಕುವುದಿಲ್ಲ ಎಂದು ನಾಗ ಚೈತನ್ಯ ಹೇಳಿದ್ದಾರೆ.

  "ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅಪ್ಪನೇ ನನ್ನ ಸಿನಿಮಾಗಳ ವಿಚಾರವನ್ನು ನೋಡಿಕೊಳ್ಳುತ್ತಿದ್ದರು. ಬಳಿಕ ಅವರು ನಮಗೆ ಸ್ವತಂತ್ರ ನೀಡಿದರು. ನಾನು ಮತ್ತು ನನ್ನ ತಮ್ಮ ಅಖಿಲ್​ ದೊಡ್ಡವರಾದ ಬಳಿಕ ನಮ್ಮ ನಿರ್ಧಾರವನ್ನು ನಾವೇ ತೆಗೆದುಕೊಳ್ಳಲು ಅಪ್ಪ ಅವಕಾಶ ನೀಡಿದರು. ನಮ್ಮ ತಪ್ಪುಗಳಿಂದಲೇ ನಾವು ಕಲಿಯಬೇಕು ಅಂತ ಅವರು ಹೇಳಿದರು" ಎಂದು ಸಂದರ್ಶನದಲ್ಲಿ ನಾಗ ಚೈತನ್ಯ ಹೇಳಿದ್ದಾರೆ.

  ಸದ್ಯ ನಾಗಚೈತನ್ಯ ನಟನೆಯ 'ಲವ್​ ಸ್ಟೋರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಇತ್ತೀಚೆಗೆ 'ಲವ್​ ಸ್ಟೋರಿ' ಟ್ರೈಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ಬಗ್ಗೆ ನಾಗ ಚೈತನ್ಯ ಮಾಡಿದ್ದ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿಕೊಳ್ಳುವ ಮೂಲಕ ಸಮಂತಾ ತನ್ನ ಪತಿಯ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

  ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತೆ ಮುಂದಕ್ಕೆ ಹೋಗಿದೆ. ಇದೀಗ ಸಿನಿಮಾ ಸೆಪ್ಟಂಬರ್ 24ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಶೇಖರ್​ ಕಮ್ಮುಲ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Tollywood Actor Nagarjuna will not interfere to naga chaitanya film carreers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X