For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು, ಅಲ್ಲು ಅರ್ಜುನ್ ಹಿಂದಿಕ್ಕಿ ದಾಖಲೆ ನಿರ್ಮಿಸಿದ ನಟ ಪ್ರಭಾಸ್

  |

  ದಕ್ಷಿಣ ಭಾರತಿಯ ಚಿತ್ರರಂಗದ ಖ್ಯಾತ ನಟ ಪ್ರಭಾಸ್ ಸದ್ಯ ಇನ್ನೂ ಹೆಸರಿಡದ 20ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಕೊರೊನಾ ಲಾಕ್ ಡೌನ್ ಆಗುವ ಮೊದಲೆ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದಾರೆ. ಆನಂತರ ಇಡೀ ಚಿತ್ರತಂಡ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿಯೂ ಇದ್ದರು.

  ಕೊರೊನಾ ವೈರಸ್ ಹಾವಳಿಯ ನಡುವೆಯೂ ಪ್ರಭಾಸ್ ಮತ್ತೆ ಸುದ್ದಿಯಲ್ಲಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಇಷ್ಟ ಪಡುವ ನೆಚ್ಚಿನ ನಟ ಪ್ರಭಾಸ್, ಈಗ ಇನ್ಸ್ಟಾಗ್ರಾಮ್ ನಲ್ಲಿಯೂ ದಾಖಲೆಯ ನಿರ್ಮಿಸಿದ್ದಾರೆ. ಹೌದು ನಟ ಮಹೇಶ್ ಬಾಬು, ಅಲ್ಲು ಅರ್ಜುನ್, ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡ ಅವರನ್ನು ಹಿಂದಿಕ್ಕಿ ಇನ್ಸ್ಟಾದಲ್ಲೂ ಕಿಂಗ್ ಆಗಿದ್ದಾರೆ. ಮುಂದೆ ಓದಿ...

  ಇನ್ಸ್ಟಾಗ್ರಾಮ್ ನಲ್ಲಿ ಬಾಹುಬಲಿ ಸ್ಟಾರ್ ಕಿಂಗ್

  ಇನ್ಸ್ಟಾಗ್ರಾಮ್ ನಲ್ಲಿ ಬಾಹುಬಲಿ ಸ್ಟಾರ್ ಕಿಂಗ್

  ನಟ ಪ್ರಭಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಮಾತ್ರವಲ್ಲ. ಇನ್ಸ್ಟಾಗ್ರಾಮ್ ನಲ್ಲಿಯೂ ಕಿಂಗ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರಭಾಸ್ ದಾಖಲೆ ನಿರ್ಮಿಸಿದ್ದಾರೆ. ಅಂದ್ಹಾಗೆ ಫಾಲೋವರ್ಸ್ ವಿಚಾರದಲ್ಲಿ ಅಂತ ಅಂದ್ಕೋಬೇಡಿ. ಹ್ಯಾಶ್ ಟ್ಯಾಗ್ ವಿಚಾರದಲ್ಲಿ. ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್ ಅಂದರೆ ನಟ ಪ್ರಭಾಸ್ ಅವರದ್ದು. ಬರೋಬ್ಬರಿ 1 ಮಿಲಿಯನ್ನು ಹ್ಯಾಶ್ ಟ್ಯಾಗ್ ಬಳಕೆಯಾಗಿದೆ.

  ಮಹೇಶ್ ಬಾಬು-ಅಲ್ಲು ಹಿಂದಿಕ್ಕಿದ ಪ್ರಭಾಸ್

  ಮಹೇಶ್ ಬಾಬು-ಅಲ್ಲು ಹಿಂದಿಕ್ಕಿದ ಪ್ರಭಾಸ್

  ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಹೆಸರು. ಆದರೆ ಈ ಬಾರಿ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಅವರನ್ನು ಹಿಂದಿಕ್ಕಿ ಪ್ರಭಾಸ್ ಹೆಸರಿನ ಹ್ಯಾಶ್ ಟ್ಯಾಗ್ 1 ಮಿಲಿಯನ್ ಗಡಿ ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

  ಪ್ರಭಾಸ್ ಅಭಿಮಾನಿಗಳ ಸಂಭ್ರಮ

  ಪ್ರಭಾಸ್ ಅಭಿಮಾನಿಗಳ ಸಂಭ್ರಮ

  ಟಾಲಿವುಡ್ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಪ್ರಭಾಸ್. ಅಂದ್ಹಾಗೆ ಪ್ರಭಾಸ್ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದೆ ಇತ್ತೀಚಿಗೆ. ಅತೀ ವೇಗದಲ್ಲಿ 1 ಮಿಲಿಯನ್ ಹ್ಯಾಶ್ ಟ್ಯಾಗ್ ದಾಟಿರುವ ಖುಷಿಯನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ "ಮಿಲಿಯನ್ ಆನ್ ಇನ್ಸ್ಟಾ ಪೋಸ್ಟ್ ಆನ್ ಪ್ರಭಾಸ್" ಎಂದು ಟ್ರೆಂಡ್ ಮಾಡುತ್ತಿದ್ದಾರೆ.

  ಮೊದಲು ಪ್ರಭಾಸ್ ನಂತರ ಸ್ಥಾನದಲ್ಲಿ ಯಾರ್ಯಾರು ಇದ್ದಾರೆ?

  ಮೊದಲು ಪ್ರಭಾಸ್ ನಂತರ ಸ್ಥಾನದಲ್ಲಿ ಯಾರ್ಯಾರು ಇದ್ದಾರೆ?

  ಇನ್ಸ್ಟಾಗ್ರಾಮ್ ಹ್ಯಾಶ್ ಟ್ಯಾಗ್ ಬಳಕೆಯಲ್ಲಿ ಪ್ರಭಾಸ್ ಮೊದಲ ಸ್ಥಾನ ಗಿಟ್ಟಿಸಿಕೊಂಡರೆ, ನಂತರದ ಸ್ಥಾನದಲ್ಲಿ ಅಲ್ಲು ಅರ್ಜುನ್ ಮತ್ತು ಮಹೇಶ್ ಇದ್ದಾರೆ. ಆನಂತರದ ಸ್ಥಾನದಲ್ಲಿ ಕ್ರಮವಾಗಿ ಪವನ್ ಕಲ್ಯಾಣ್, ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಜಾಗ ಪಡಿಸಿದ್ದಾರೆ.

  4 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟ

  4 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟ

  ಪ್ರಭಾಸ್ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದು. ಇತ್ತೀಚಿಗೆ. ಆದರೆ ಕಡಿಮೆ ಅವದಿಯಲ್ಲಿಯೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಪ್ರಭಾಸ್ ಇನ್ಸ್ಟಾಗ್ರಾಮ್ ನಲ್ಲಿ 4.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಪ್ರಭಾಸ್ ಅಭಿಮಾನಿ ಬಳಗ ಹೆಚ್ಚಾಗುತ್ತಿದ್ದು, ಫಾಲೋವರ್ಸ್ ಸಂಖ್ಯೆಯೂ ಹೆಚ್ಚುತ್ತಿದೆ.

  English summary
  Telugu Actor Prabhas get 1 million Mentions on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X