For Quick Alerts
  ALLOW NOTIFICATIONS  
  For Daily Alerts

  ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ ರಾಮ್‌ಚರಣ್ ಪತ್ನಿ: ಬೆಲೆ ಎಷ್ಟು ಕೋಟಿ ರೂ. ಗೊತ್ತಾ?

  |

  ಟಾಲಿವುಡ್ ನಟ ರಾಮ್‌ ಚರಣ್ ತೇಜಾ ಪತ್ನಿ ಉಪಾಸನಾ ಕೊಣಿದೇಲ ತಮ್ಮ ಹೊಸ ಕಾರನ್ನು ಪರಿಚಯಿಸಿದ್ದಾರೆ. ಇತ್ತೀಚೆಗಷ್ಟೆ ಔಡಿ ಕಂಪೆನಿಯ ಔಡಿ ಇ-ಟ್ರಾನ್ ಕಾರನ್ನು ಆಕೆ ಸ್ವಂತ ಮಾಡಿಕೊಂಡಿದ್ದರು. ಕಾರಿನ ವಿಶೇಷತೆಗಳ ಬಗ್ಗೆ ಇದೀಗ ಒಂದು ವಿಡಿಯೋ ಶೇರ್ ಮಾಡಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ಸೊಸೆಯ ಹೊಸ ಕಾರು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಕಾರು ಚೆನ್ನಾಗಿದೆ, ಕಲರ್ ಎಲ್ಲವೂ ಸೂಪರ್' ಕಂಗ್ರಾಟ್ಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಪೋಲೋ ಆಸ್ಪತ್ರೆ ಸಮೂಹದ ಒಡೆಯ ಅನಿಲ್ ಕಾಮಿನೇನಿ ಮಗಳಾಗಿರುವ ಉಪಾಸನಾ 2012ರಲ್ಲಿ ನಟ ರಾಮ್‌ಚರಣ್‌ನ ಪ್ರೀತಿಸಿ ಮದುವೆ ಆಗಿದ್ದರು. ಲಂಡನ್ ರೀಜೆಂಟ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಉಪಾಸನಾ
  ತಮ್ಮ ಸಾಮಾಜಿಕ ಕೆಲಸಗಳ ಮೂಲಕವೂ ಗುರ್ತಿಸಿಕೊಂಡಿದ್ದಾರೆ.

  ಮಕ್ಕಳು ಯಾಕಿಲ್ಲ: ಮತ್ತೆ ಸ್ಪಷ್ಟನೆ ಕೊಟ್ಟ ರಾಮ್‌ ಚರಣ್ ಪತ್ನಿ ಉಪಾಸನಾ!ಮಕ್ಕಳು ಯಾಕಿಲ್ಲ: ಮತ್ತೆ ಸ್ಪಷ್ಟನೆ ಕೊಟ್ಟ ರಾಮ್‌ ಚರಣ್ ಪತ್ನಿ ಉಪಾಸನಾ!

  ರಾಮ್‌ಚರಣ್‌- ಉಪಾಸನಾ ದಂಪತಿ ಬಳಿ ಸಾಕಷ್ಟು ಐಶಾರಾಮಿ ಕಾರುಗಳಿವೆ. ಇದೀಗ ಆ ಪಟ್ಟಿಗೆ ಆಡಿ ಇ-ಟ್ರಾನ್ ಕಾರು ಸಹ ಸೇರಿಕೊಂಡಿದೆ. ಕಾರಿನ ವಿಶೇಷತೆಗಳ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಉಪಾಸನಾ, "ಈ ಪ್ರಪಂಚದಲ್ಲಿ ಪ್ರತಿಯೊಂದು ಅಪ್‌ಗ್ರೇಡ್ ಆಗುತ್ತಿದೆ. ಅದಕ್ಕೆ ತಕ್ಕಂತೆ ನಾನು ಅಪ್‌ಡೇಟ್ ಆಗಿದ್ದೀನಿ. ಅದರ ಭಾಗವಾಗಿ ಆಡಿ ಇ-ಟ್ರಾನ್ ಕೊಂಡುಕೊಂಡಿದ್ದೇನೆ. ನನ್ನ ಅವಶ್ಯಕತೆಗಳಿಗೆ ತಕ್ಕಂತೆ ಈ ಕಾರು ಬಹಳ ಅನುಕೂಲಕರವಾಗಿದೆ. ಪ್ರಯಾಣಕ್ಕೂ ಆರಾಮಾದಾಯಕವಾಗಿದೆ. ಅದರಲ್ಲೂ ವಾಯ್ಸ್ ಕಮಾಂಡಿಂಗ್ ಆಪ್ಷನ್ ಸಖತ್ತಾಗಿದೆ" ಎಂದು ಹೇಳಿದ್ದಾರೆ.

  ಹೊಸ ಕಾರಿನ ಬೆಲೆ ಎಷ್ಟು ಕೋಟಿ ರೂ.?

  ಉಪಾಸನಾ ಖರೀದಿಸಿರುವ ಔಡಿ ಇ-ಟ್ರಾನ್ ಕಾರಿನ ಬೆಲೆ ಬರೋಬ್ಬರಿ 1.20 ಕೋಟಿ ರೂ. ಎನ್ನಲಾಗುತ್ತಿದೆ. ಆಧುನಿಕ ವೈಶಿಷ್ಟ್ಯತೆ ಮತ್ತು ತಂತ್ರಜ್ಞಾನವನ್ನು ಒಳಗೊಂಡಿರುವ ಈ ಕಾರು ಸುಖಕರ ಪ್ರಯಾಣಕ್ಕೂ ಅನುಕೂಲಕರವಾಗಿದೆ.

  RC 15: ವೈಜಾಗ್ ಬೀಚ್ ರೋಡ್‌ನಲ್ಲಿ ರಾಮ್ ಚರಣ್-ಶಂಕರ್ ಸಿನಿಮಾ, ಫೋಟೊಗಳು ವೈರಲ್!RC 15: ವೈಜಾಗ್ ಬೀಚ್ ರೋಡ್‌ನಲ್ಲಿ ರಾಮ್ ಚರಣ್-ಶಂಕರ್ ಸಿನಿಮಾ, ಫೋಟೊಗಳು ವೈರಲ್!

   ಮಗು ಮಾಡಿಕೊಳ್ಳದಕ್ಕೆ ಉಪಾಸನಾ ಕಾರಣ

  ಮಗು ಮಾಡಿಕೊಳ್ಳದಕ್ಕೆ ಉಪಾಸನಾ ಕಾರಣ

  ಮದುವೆ ಆಗಿ 10 ವರ್ಷಗಳಾದರೂ ರಾಮ್‌ಚರಣ್‌- ಉಪಾಸನಾ ದಂಪತಿ ಮಕ್ಕಳನ್ನು ಹೊಂದದಿರದ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಸದ್ಯಕ್ಕೆ ಮಕ್ಕಳು ಬೇಡ ಎಂದು ನಿರ್ಧರಿಸಿರುವುದಾಗಿ ದಂಪತಿ ಈ ಹಿಂದಿಯೂ ಹೇಳಿದ್ದರು. ಇತ್ತೀಚೆಗೆ ಸದ್ಗುರುಗಳೊಂದಿಗಿನ ಸಂವಾದದಲ್ಲಿ ಈ ವಿಚಾರದ ಬಗ್ಗೆ ಉಪಾಸನಾ ಮಾತನಾಡಿದ್ದರು.

   ಈ ವರ್ಷ ರಾಮ್‌-ಚರಣ್‌ಗೆ ಸಿಹಿ ಮತ್ತು ಕಹಿ

  ಈ ವರ್ಷ ರಾಮ್‌-ಚರಣ್‌ಗೆ ಸಿಹಿ ಮತ್ತು ಕಹಿ

  ರಾಮ್‌ ಚರಣ್‌ ತೇಜಾ ಸಿನಿಮಾಗಳ ಬಗ್ಗೆ ಹೇಳುವುದಾರೆ ಈ ವರ್ಷ ಒಂದು ದೊಡ್ಡ ಗೆಲುವಿನ ಜೊತೆಗೆ ಒಂದು ಸೋಲನ್ನು ಕಂಡಿದ್ದಾರೆ. ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಸೂಪರ್ ಹಿಟ್‌ ಆಗಿ ಚರಣ್‌ ಅಭಿನಯವನ್ನು ಹಾಲಿವುಡ್ ಪ್ರೇಕ್ಷಕರು ಕೊಂಡಾಡಿದ್ದಾರೆ. ಆದರೆ ತಂದೆ ಚಿರಂಜೀವಿ ಜೊತೆ ನಟಿಸಿದ 'ಆಚಾರ್ಯ' ಸಿನಿಮಾ ಹೀನಾಯವಾಗಿ ಸೋಲುಂಡು, ನಿರ್ಮಾಪಕರಾಗಿಯೂ ಚರಣ್ ನಷ್ಟ ಎದುರಿಸುವಂತಾಯಿತು.

   RC15 ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಫ್ಯಾನ್ಸ್

  RC15 ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಫ್ಯಾನ್ಸ್

  'ಆಚಾರ್ಯ' ನಂತರ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಹೊಸ ಚಿತ್ರದಲ್ಲಿ ರಾಮ್‌ ಚರಣ್ ತೇಜಾ ಬಣ್ಣ ಹಚ್ಚಿದ್ದಾರೆ. ಬಹುಕೋಟಿ ವೆಚ್ಚದ ಈ ಆಕ್ಷನ್ ಎಂಟರ್‌ಟೈನರ್‌ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚರಣ್‌- ಶಂಕರ್ ಕಾಂಬಿನೇಷನ್‌ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋದು ಸುಳ್ಳಲ್ಲ.

  English summary
  Actor Ram Charan Wife Upasana Konidela Buys Luxury Electric Car. Know More.
  Sunday, July 31, 2022, 13:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X