For Quick Alerts
  ALLOW NOTIFICATIONS  
  For Daily Alerts

  ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ಹೆಬ್ಬುಲಿ ನಟಿ ದೂರು

  |

  ಕನ್ನಡದ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ತಮಿಳು ನಟಿ ಅಮಲಾ ಪೌಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೆಲ ದಿನಗಳಿಂದ ನನ್ನ ಮಾಜಿ ಬಾಯ್‌ಫ್ರೆಂಡ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. ನಟಿಯ ದೂರಿನ ಹಿನ್ನೆಲೆಯಲ್ಲಿ ಆಕೆಯ ಮಾಜಿ ಬಾಯ್‌ಫ್ರೆಂಡ್ ಭವಿಂದರ್ ಸಿಂಗ್‌ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  ಕಾಲಿವುಡ್ ನಟಿ ಅಮಲಾ ಪೌಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೆ ಅಲ್ಲ ನಿರ್ಮಾಪಕಿಯಾಗಿಯೂ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ತಮಿಳು ಸಿನಿಮಾ ನಿರ್ದೇಶಕ ಎ. ಎಲ್ ವಿಜಯ್‌ನ ಮದುವೆ ಆಗಿ ಅಮಲಾ ಡೈವೋರ್ಸ್ ಪಡೆದಿದ್ದರು. 2018ರಲ್ಲಿ ನಟಿಗೆ ಭವಿಂದರ್ ಸಿಂಗ್‌ ಪರಿಚಯವಾಗಿತ್ತು. ಇಬ್ಬರು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದರು. ಆದರೆ ಸಿನಿಮಾ ನಿರ್ಮಾಣ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಇಬ್ಬರೂ ದೂರಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

  'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!

  ಸದ್ಯ ನನ್ನನ್ನು ಭವಿಂದರ್ ಸಿಂಗ್ ಬೆದರಿಸುತ್ತಿದ್ದಾನೆ. ನಾನು ಕೇಳಿದಷ್ಟು ಹಣ ಕೊಡಬೇಕು, ನಾನು ಹೇಳಿದಂತೆ ಕೇಳಬೇಕು, ಒಪ್ಪದೇ ಇದ್ದರೆ ನಿನ್ನ ಪ್ರೈವೇಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡುವುದಾಗಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ತಮಿಳುನಾಡಿನ ವಿಲ್ಲುಪುರಂ ಪೊಲೀಸರು ಚೀಟಿಂಗ್ ಕೇಸ್ ದಾಖಲಿಸಿಕೊಂಡು ಸೆಕ್ಷನ್‌ 16ರ ಅಡಿಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತನ 12 ಮಂದಿ ಸ್ನೇಹಿತರಿಗಾಗಿ ಪೊಲೀಸರ ಹುಡುಕಾಟ ನಡೀತಿದೆ.

  ಭವಿಂದರ್ ಜೊತೆ ಹೆಬ್ಬುಲಿ ನಟಿ 2ನೇ ಮದುವೆ

  ಭವಿಂದರ್ ಜೊತೆ ಹೆಬ್ಬುಲಿ ನಟಿ 2ನೇ ಮದುವೆ

  2 ವರ್ಷಗಳ ಹಿಂದೆ ಅಮಲಾ ಪೌಲ್ ಹಾಗೂ ಭವಿಂದರ್ ಸಿಂಗ್ ಮದುವೆ ಆಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಕಾರಣವಾಗಿದ್ದು ಅವರಿಬ್ಬರು ಮದುವೆ ಮಾಡಿಕೊಂಡಂತೆ ಭವಿಂದರ್ ಸಿಂಗ್ ಪೋಸ್ಟ್ ಮಾಡಿದ್ದ ಫೋಟೊಗಳು. ಕೂಡಲೇ ಆತ ಆ ಫೋಟೊಗಳನ್ನು ಡಿಲೀಟ್ ಮಾಡಿದರೂ ಅಷ್ಟರಲ್ಲಾಗಲೇ ಅದು ವೈರಲ್ ಆಗಿತ್ತು. ಆದರೆ ಅಮಲಾ ಸಂದರ್ಶನವೊಂದರಲ್ಲಿ ಮಾತನಾಡಿ ನಾನು ಎರಡನೇ ಮದುವೆ ಆಗಿಲ್ಲ ಎಂದು ಹೇಳಿದ್ದರು.

  ಭವಿಂದರ್ ಸ್ನೇಹಿತರಿಂದಲೂ ಲೈಂಗಿಕ ಕಿರುಕುಳ

  ಭವಿಂದರ್ ಸ್ನೇಹಿತರಿಂದಲೂ ಲೈಂಗಿಕ ಕಿರುಕುಳ

  ಅಮಲಾ ಪೌಲ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಇಬ್ಬರು ಸೇರಿ 'ಕಡವೆಲ್' ಅನ್ನುವ ಸಿನಿಮಾ ನಿರ್ಮಾಣ ಮಾಡಿದ್ದರು. ಇದೀಗ ಈ ಸಂಸ್ಥೆಯ ಡೈರೆಕ್ಟರ್ ಸ್ಥಾನದಿಂದ ನನ್ನ ಹೆಸರನ್ನು ತೆಗೆದು ಹಾಕಿ ನಕಲಿ ಪತ್ರಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಭವಿಂದರ್ ಸ್ನೇಹಿತರು ಕೂಡ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

  'ಹೆಬ್ಬುಲಿ' ಕಿಚ್ಚನ ಜೋಡಿಯಾಗಿ ಅಮಲಾ

  'ಹೆಬ್ಬುಲಿ' ಕಿಚ್ಚನ ಜೋಡಿಯಾಗಿ ಅಮಲಾ

  ತಮಿಳು ನಟಿ ಅಮಲಾ ಪೌಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. 2017ರಲ್ಲಿ ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಡಾ. ನಂದಿನಿ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಕೃಷ್ಣ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು.

  'ಆಡೈ' ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ದ ಅಮಲಾ

  'ಆಡೈ' ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ದ ಅಮಲಾ

  3 ವರ್ಷಗಳ ಹಿಂದೆ ಅಮಲಾ ಪೌಲ್ ನಟಿಸಿದ್ದ 'ಆಡೈ' ಸಿನಿಮಾ ಎಲ್ಲರ ಹುಬ್ಬೇರಿಸಿತ್ತು. ಕಾರಣ ಚಿತ್ರದಲ್ಲಿ ಬಹುತೇಕ ಬೆತ್ತಲಾಗಿ ದರ್ಶನ ಕೊಟ್ಟಿದ್ದರು. 20 ದಿನಗಳ ಕಾಲ ಈ ರೀತಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕಥೆಯಲ್ಲಿ ಬರುವ ಒಂದು ದಾರುಣ ಸನ್ನಿವೇಶದಲ್ಲಿ ಈ ರೀತಿ ಕಾಣಿಸಿಕೊಂಡಿದ್ದರು. ತೆಲುಗು, ತಮಿಳಿನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ.

  English summary
  Actress Amala Paul Files Cheating Complaint Against Her Ex Boyfriend. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X