For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ

  |
  ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ |Filmibeat kannada

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಪಾರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ. 38ನೇ ವಸಂತಕ್ಕೆ ಕಾಲಿಟ್ಟ ಸ್ವೀಟಿ ಅನುಷ್ಕಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  ಸ್ಟಾರ್ ನಟಿಯ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಇಂದು ಬೆಳ್ಳಂಬೆಳಗ್ಗೆಯೆ ಅನುಷ್ಕಾ ಮನೆ ಮುಂದೆ ಜಮಾಹಿಸಿದ್ದರು. ನೆಚ್ಚಿನ ನಟಿಗಾಗಿ ಕಾದುಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡದೆ, ಅಭಿಮಾನಿಗಳಿಂದ ಶುಭಾಶಯ ಸ್ವೀಕರಿಸಿ, ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ನೀಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

  'ಕನ್ನಡ ರಾಜ್ಯೋತ್ಸವ'ಕ್ಕೆ ಕನ್ನಡಾಭಿಮಾನ ಮೆರೆದ ಅನುಷ್ಕಾ ಶೆಟ್ಟಿ'ಕನ್ನಡ ರಾಜ್ಯೋತ್ಸವ'ಕ್ಕೆ ಕನ್ನಡಾಭಿಮಾನ ಮೆರೆದ ಅನುಷ್ಕಾ ಶೆಟ್ಟಿ

  ಹುಟ್ಟುಹಬ್ಬದ ಪ್ರಯುಕ್ತ ಅನುಷ್ಕಾ ಅಭಿನಯದ ನಿಶಬ್ದಂ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅನುಷ್ಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಬಳಿ ಸದ್ಯ ನಿಶಬ್ದಂ ಸಿನಿಮಾ ಬಿಟ್ಟರೆ ಬೇರೆ ಸಿನಿಮಾ ಯಾವ ಸಿನಿಮಾಗಳಿಲ್ಲ. ಜೊತೆಗೆ ಅನುಷ್ಕಾ ಮದುವೆ ವಿಚಾರವು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಇತ್ತೀಚಿಗೆ ಅಂದರೆ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಕನ್ನಡದಲ್ಲಿ ಶುಭಾಶಯ ತಿಳಿಸಿ ಕನ್ನಡತನ ಮೆರೆದಿದ್ದರು ಅನುಷ್ಕಾ. ಆಗಾಗ ಕನ್ನಡದಲ್ಲಿ ಪೋಸ್ಟ್ ಮಾಡುವ ಮೂಲಕ ಸದ್ದು ಮಾಡುವ ಅನುಷ್ಕಾ, ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಕನ್ನಡ ಚಿತ್ರಾಭಿಮಾನಿಗಳ ಬೇಸರ. ಮುಂದಿನ ದಿನಗಳಲ್ಲಿ ಅನುಷ್ಕಾ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಬರ್ತಾರಾ ಎನ್ನುವುದು ಕುತೂಹಲ.

  English summary
  South Indian famous actress Anushka Shetty celebrating her 38th birthday with Fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X