For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕರ ಜೊತೆ ಅನುಷ್ಕಾ ಮದುವೆ: ಸ್ವೀಟಿ ಹೇಳಿದ್ದೇನು?

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. 15 ವರ್ಷದ ಯಶಸ್ವಿ ಪಯಣವನ್ನು ಮೆಲುಕು ಹಾಕಲು ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಅನುಷ್ಕಾ ಮದುವೆ ಬಗ್ಗೆ ಮಾತನಾಡಿದ್ದಾರೆ.

  ಇತ್ತೀಚಿಗಷ್ಟೆ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ತೆಲುಗಿನ ಖ್ಯಾತ ನಿರ್ದೇಶಕನ ಪುತ್ರನ ಜೊತೆ ಅನುಷ್ಕಾ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಸಖತ್ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಅನುಷ್ಕಾ ಯಾವುದು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಸ್ವೀಟಿ ಮದುವೆ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

  ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ಶೆಟ್ಟಿ ಮದುವೆ?ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

  ಅನುಷ್ಕಾ ಹೇಳಿದ್ದೇನು?

  ಅನುಷ್ಕಾ ಹೇಳಿದ್ದೇನು?

  15 ವರ್ಷ ಪೂರೈಸಿದ ಸಮಾರಂಭದಲ್ಲಿ ಮಾತನಾಡಿದ ನಟಿ ಮತ್ತು ನಿರ್ಮಾಪಕಿ ಚಾರ್ಮಿ, ಅನುಷ್ಕಾ ಶೆಟ್ಟಿ ಬಳಿ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುಷ್ಕಾ ನನಗೂ ಇದೆ ಪ್ರಶ್ನೆ ಕಾಡುತ್ತಿದೆ. ಯಾವಾಗ ಮದುವೆ? ನನಗೂ ಕೂಡ ಗೊತ್ತಿಲ್ಲ ಎಂದು ಹೇಳಿದ್ದಾರೆ.

  ಅನುಷ್ಕಾ ಮದುವೆ ಬಗ್ಗೆ ಪುರಿ ಜಗನ್ನಾಥ್ ಪ್ರತಿಕ್ರಿಯೆ

  ಅನುಷ್ಕಾ ಮದುವೆ ಬಗ್ಗೆ ಪುರಿ ಜಗನ್ನಾಥ್ ಪ್ರತಿಕ್ರಿಯೆ

  ಅನುಷ್ಕಾ ಮತ್ತು ಚಾರ್ಮಿ ಇಬ್ಬರು ಮದುವೆ ಬಗ್ಗೆ ಮಾತನಾಡುತ್ತಿದ್ದರೆ, ನಿರ್ದೇಶಕ ಪುರಿ ಜಗನ್ನಾಥ್ ಮಧ್ಯದಲ್ಲಿ ಮಾತನಾಡಿ "ನನಗೆ ನಾಯಕಿಯರು ಮದುವೆ ಆಗುವುದು ಇಷ್ಟವಿಲ್ಲ. ಹೀಗೆ ಇರಬೇಕು" ಎಂದು ಹೇಳಿದ್ದಾರೆ.

  ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

  ನಿರ್ದೇಶಕರ ಜೊತೆ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯೆ

  ನಿರ್ದೇಶಕರ ಜೊತೆ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯೆ

  ಇನ್ನು ಅನುಷ್ಕಾ ಮತ್ತೊಂದು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕರ ಜೊತೆ ಅನುಷ್ಕಾ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ವದಂತಿ ಬಗ್ಗೆ ಮಾತನಾಡಿದ್ದಾರೆ. "ಇದೆಲ್ಲ ನನಗೆ ಅರ್ಥವಾಗುತ್ತಿಲ್ಲ. ಹೇಗೆ ಇಂತಹ ಸುದ್ದಿಗಳನ್ನು ಬರೆಯುತ್ತಾರೆ. ಈ ರೀತಿ. ಸುಳ್ಳು ಸುದ್ದಿಗಳಿಂದ ಅವರ ಕುಟುಂಬಕ್ಕೆ ಅದು ಸಮಸ್ಯೆ ಆಗುತ್ತೆ" ಎಂದು ಹೇಳಿದ್ದಾರೆ.

  ಸಂಬಂಧವನ್ನು ಮುಚ್ಚಿಡಲು ಸಾಧ್ಯವಿಲ್ಲ

  ಸಂಬಂಧವನ್ನು ಮುಚ್ಚಿಡಲು ಸಾಧ್ಯವಿಲ್ಲ

  "ಜನರಿಗೆ ನಿಜ ಸುದ್ದಿ ಯಾವುದು ಎನ್ನುವುದು ಗೊತ್ತು. ನನಗೆ ಇಂತಹ ವದಂತಿಗಳಿಂದ ಯಾವುದೆ ಪರಿಣಾಮ ಬೀರುವುದಿಲ್ಲ. ಎಲ್ಲರಿಗೂ ನನ್ನ ಮದುವೆ ಯಾಕೆ ದೊಡ್ಡ ಡೀಲ್ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಯಾರಿಂದನೂ ಸಂಬಂಧವನ್ನು ಮುಚ್ಚಿಡಲು ಸಾಧ್ಯವಿಲ್ಲ. ನನಗೆ ನನ್ನದೆ ಆದ ವೈಯಕ್ತಿಕ ಜಾಗವಿದೆ. ಅಲ್ಲಿವರೆಗೂ ಪ್ರವೇಶ ಮಾಡಲು ನಾನು ಬಿಡಲ್ಲ. ಯಾವಾಗ ಮದುವೆ ಆಗುತ್ತೀನೋ ಆಗ ನಾನೆ ಖಂಡಿತ ಹೇಳುತ್ತೇನೆ" ಎಂದು ಹೇಳಿದ್ದಾರೆ.

  English summary
  Telugu famous Actress Anushka Shetty reaction her marriage. Actress Anushka Shetty will get marriage with director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X