For Quick Alerts
  ALLOW NOTIFICATIONS  
  For Daily Alerts

  ಭಾರತಕ್ಕೆ 'ಕೊರೊನಾ' ಬಂತೆಂದು ಸಂಭ್ರಮಿಸಿದ ನಟಿಗೆ ನೆಟ್ಟಿಗರ ತರಾಟೆ

  |

  ಮಾರಣಾಂತಿಕ ಕರೊನಾ ವೈರಸ್ ಗೆ ಇಡೀ ವಿಶ್ವವೆ ಆತಂಕಕ್ಕೆ ಒಳಗಾಗಿದೆ. ಚೀನಾದಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದ ಕೊರೊನಾ ವೈರಸ್ ಈಗ ಭಾರತಕ್ಕೂ ಕಾಲಿಟ್ಟಿದೆ. ಬೆಂಗಳೂರಿನ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

  ಜನರು ಆತಂಕದಲ್ಲಿ ಇದ್ದರೆ ತೆಲುಗು ನಟಿ ಚಾರ್ಮಿ ಕೌರ್ ಕರೊನಾ ವೈರಸ್ ಬಂತೆಂದು ಸಂಭ್ರಮಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಹೌದು, ಈ ಸಂಬಂಧ ಟಿಕ್ ಟಾಕ್ ಮಾಡಿರುವ ಚಾರ್ಮಿ "ದೆಹಲಿ, ತೆಲಂಗಾಣಕ್ಕೆ ಕೊರೊನಾ ಬಂದಿದೆ ಎಲ್ಲಾ ಕಡೆ ಇದೇ ಸುದ್ದಿ, ಆಲ್ ದಿ ಬೆಸ್ಟ್ ಎಂದು" ನಗುತ್ತ ಸಂಭ್ರಮಿಸುತ್ತಾ ಹೇಳಿದ್ದಾರೆ.

  ಚಾರ್ಮಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲರೂ ಆತಂಕದಲ್ಲಿ ಇದ್ದರೆ ನೀವು ಸಂಭ್ರಮಿಸುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ನೆಟ್ಟಿಗರು ಗರಂ ಆಗುತ್ತಿದಂತೆ ನಟಿ ಚಾರ್ಮಿ ಕ್ಷಮೆಯಾಚಿಸಿದ್ದಾರೆ. ಚಾರ್ಮಿ ಸದ್ಯ ಅಭಿನಯದಿಂದ ದೂರ ಉಳಿದು, ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.

  ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾಗಳಿಗೆ ಚಾರ್ಮಿ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಸದ್ಯ ಚಾರ್ಮಿ ಪುರಿ ಜಗನ್ನಾಥ್ ನಿರ್ದೇಶನದ ಫೈಟರ್ ಸಿನಿಮಾಗೆ ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಸಿನಿಮಾವಿದು.

  English summary
  Telugu Actress Charmi Kaur celebrated as Coronavirus came to be India.
  Wednesday, March 4, 2020, 7:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X