For Quick Alerts
  ALLOW NOTIFICATIONS  
  For Daily Alerts

  ಗಂಡು ಮಗುವಿಗೆ ಜನ್ಮ ನೀಡಿದ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್!

  |

  ಬಾಲಿವುಡ್‌ ನಟಿ ಕಾಜಲ್ ಅಗರ್ವಾಲ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಕಾಜಲ್ ಹಾಗೂ ಪತಿ ಗೌತಮ್ ಕಿಚ್ಲು ಇಂದು (ಏಪ್ರಿಲ್ 18) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಕಾಜಲ್ ಅಗರ್ವಾಲ್ ಮಂಗಳವಾರ( ಏಪ್ರಿಲ್ 18) ರಂದು ಗಂಡು ಮಗುವಿಗೆ ಜನ್ಮನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಕಾಜಲ್ ಹಾಗೂ ಗೌತಮ್ ಕುಟುಂಬ ಖುಷಿಯ ಅಲೆಯಲ್ಲಿ ತೇಲಾಡುತ್ತಿದೆ.

  ಕಾಜಲ್ ಅಗರ್ವಾಲ್ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಕಾಜಲ್ ಅಗರ್ವಾಲ್ ಅಥವಾ ಅವರ ಪತಿ ಗೌತಮ್ ಕಿಚ್ಲು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಲ್ಲ. ಬಾಲಿವುಡ್ ಸೆಲೆಬ್ರೆಟಿ ಕ್ಯಾಮರಾಮ್ಯಾನ್ ವೈರಲ್ ಭವಾನಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ.

   ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಗರ್ಭಿಣಿನಾ? ಫೋಟೊ ಹೇಳಿದ ಕಥೆಯೇನು? ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಗರ್ಭಿಣಿನಾ? ಫೋಟೊ ಹೇಳಿದ ಕಥೆಯೇನು?

  ಕಾಜಲ್ ಗರ್ಭಿಣಿ ವಿಷಯ ರಿವೀಲ್ ಮಾಡಿದ್ದ ಪತಿ

  ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿರುವ ವಿಷಯವನ್ನು ಪತಿ ಗೌತಮ್ ಕಿಚ್ಲು ಬಹಿರಂಗ ಪಡಿಸಿದ್ದರು. ಹೊಸ ವರ್ಷದ ಶುಭ ಸಂದರ್ಭದಲ್ಲಿ ಗೌತಮ್ ಕಿಚ್ಲು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದರು. ಇಲ್ಲಿಂದ ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

  ಕಾಜಲ್ ಅಗರ್ವಾಲ್ ಟಾಲಿವುಡ್ ಸಿನಿಮಾ 'ಆಚಾರ್ಯ' ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಸದ್ಯ ಕಮಲ್ ಹಾಸನ್ ಜೊತೆ 'ಇಂಡಿಯನ್ 2' ಸಿನಿಮಾದಲ್ಲಿ ನಟಿಸುತ್ತಿದ್ದರೂ, ಆ ಸಿನಿಮಾ ಅರ್ಧಕ್ಕೆ ನಿಂತಿತ್ತು. ತನ್ನೆಲ್ಲಾ ಕಮಿಟ್ಮೆಂಟ್ ಮುಗಿಸಿದ ಬಳಿಕ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ದರು.

  Actress Kajal Aggarwal Gautam Kitchlu Blessed With Baby Boy

  ಸೀಮಂತದ ಫೋಟೊಗಳನ್ನು ಶೇರ್ ಮಾಡಿದ್ದ ಕಾಜಲ್

  ನಟಿ ಕಾಜಲ್ ಅಗರ್ವಾಲ್ ಬೇಬಿ ಬಂಪ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇದ್ದರು. ಪತಿಯೊಂದಿಗೆ ಇರುವ ಫೋಟೊಗಳು, ವರ್ಕ್‌ಔಟ್ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಅಲ್ಲದೆ ಸೀಮಂತದ ಫೋಟೊಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.

  ಕಾಜಲ್ ಅಗರ್ವಾಲ್ ಪ್ರೆಗ್ನೆಸಿಯ ದಿನಗಳನ್ನು ಎಂಜಾಯ್ ಮಾಡಿದ್ದಾರೆ. ಈಗ ಚೊಚ್ಚಲ ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿ ಇದ್ದಾರೆ. ಪ್ರೆಗ್ನೆನ್ಸಿ ದಿನಗಳಲ್ಲಿ ದುಬೈಗೆ ಹಾರಿದ್ದ ಕಾಜಲ್ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿಕೊಂಡಿದ್ದರು.

  ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಕೊರೊನಾ ಕಾಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2020 ಅಕ್ಟೋಬರ್ 3೦ ರಂದು ವಿವಾಹವಾಗಿದ್ದರು. ಕಾಜಲ್ ಅಗರ್ವಾಲ್ ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ನಟಿಸಿದ 'ಚಕ್ರವ್ಯೂಹ' ಸಿನಿಮಾಗೆ ಒಂದು ಹಾಡನ್ನೂ ಹಾಡಿದ್ದಾರೆ.

  English summary
  Actress Kajal Aggarwal Gautam Kitchlu Blessed With Baby Boy, Know More
  Wednesday, April 20, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X