For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ಹಿರಿಯ ನಟಿ ಕಸ್ತೂರಿ ಶಂಕರ್

  |

  ಕನ್ನಡದಲ್ಲಿ ರವಿಚಂದ್ರನ್ ಜೊತೆಗೆ ಜಾಣ, ಪ್ರೇಮಕ್ಕೆ ಸೈ, ವಿಷ್ಣುವರ್ಧನ್ ಜೊತೆಗೆ ಹಬ್ಬ, ಶಿವರಾಜ್ ಕುಮಾರ್ ಜೋಡಿಯಾಗಿ ಇಬ್ಬರ ನಡುವೆ ಮುದ್ದಿನ ಆಟ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಕಸ್ತೂರಿ ಶಂಕರ್ ಇದೀಗ ಸುದ್ದಿಯಲ್ಲಿದ್ದಾರೆ.

  ನಟಿ ಕಸ್ತೂರಿ ಶಂಕರ್ ಇದ್ದಕ್ಕಿದ್ದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೇಲೆ ವಿಪರೀತ ಸಿಟ್ಟಾಗಿದ್ದಾರೆ. ಕೊಹ್ಲಿಗೆ ಸಾಮಾಜಿಕ ಜಾಲತಾಣ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.

  ವಿರಾಟ್-ಅನುಷ್ಕಾ ಮಗು ಬಗ್ಗೆ ಕರೀನಾ ಕಪೂರ್ ಮಾತುವಿರಾಟ್-ಅನುಷ್ಕಾ ಮಗು ಬಗ್ಗೆ ಕರೀನಾ ಕಪೂರ್ ಮಾತು

  ನಟಿ ಕಸ್ತೂರಿ ಶಂಕರ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸುತ್ತಿರುತ್ತಾರೆ. ದೀಪಾವಳಿ ಹಬ್ಬದಂದು ವಿರಾಟ್ ಕೊಹ್ಲಿ ನೀಡಿದ್ದ ಸಂದೇಶ ಕಸ್ತೂರಿ ಶಂಕರ್‌ಗೆ ಸಿಟ್ಟು ತರಿಸಿದ್ದು, ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

  ಪಟಾಕಿ ಬೇಡ ಎಂದಿದ್ದ ವಿರಾಟ್ ಕೊಹ್ಲಿ

  ಪಟಾಕಿ ಬೇಡ ಎಂದಿದ್ದ ವಿರಾಟ್ ಕೊಹ್ಲಿ

  ದೀಪಾವಳಿ ಹಬ್ಬದ ಶುಭಾಶಯ ಕೋರಿ ಟ್ವಿಟ್ಟರ್‌ನಲ್ಲಿ ವಿಡಿಯೋ ಹಾಕಿದ್ದ ವಿರಾಟ್ ಕೊಹ್ಲಿ, 'ಈ ಬಾರಿ ಪಟಾಕಿ ಬೇಡ' ಎಂದು ಹೇಳಿದ್ದರು. ಕೊಹ್ಲಿಯ ಈ ಹೇಳಿಕೆ ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿತ್ತು. ಅದರಲ್ಲಿ ನಟಿ ಕಸ್ತೂರಿ ಶಂಕರ್ ಸಹ ಒಬ್ಬರು.

  'ನಿಮಗೆ ಸ್ಪೋರ್ಟ್ಸ್ ಕಾರು ಏಕು ಸೈಕಲ್ ಇಟ್ಟುಕೊಳ್ಳಿ ಸಾಕು'

  'ನಿಮಗೆ ಸ್ಪೋರ್ಟ್ಸ್ ಕಾರು ಏಕು ಸೈಕಲ್ ಇಟ್ಟುಕೊಳ್ಳಿ ಸಾಕು'

  'ದೀಪಾವಳಿಗೆ ಪಟಾಕಿ ಬೇಡ ದೀಪ ಸಾಕೇ?, ಹಾಗಿದ್ದರೆ ನಿಮಗೆ ಒಂಬತ್ತು ಸ್ಪೋರ್ಟ್ಸ್ ಕಾರು ಏಕೆ, ಸುಮ್ಮನೆ ವಾಯುಮಾಲಿನ್ಯ ಒಂದು ಸೈಕಲ್ ತೆಗೆದುಕೊಂಡು ಬಿಡಿ. ಇಟಲಿಯಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಏಕಾದಿರಿ ಸುಮ್ಮನೆ ವಿಮಾನದಿಂದ ವಾಯುಮಾಲಿನ್ಯವಾಯಿತು, ಇಲ್ಲಿಯೇ ರಿಜಿಸ್ಟರ್ ಮದುವೆ ಆಗಬಹುದಿತ್ತಲ್ಲಾ?' ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ ಕಸ್ತೂರಿ ಶಂಕರ್.

  ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಳ ನಾಯಿ: ಕಾಂಗ್ರೆಸ್ ಮುಖಂಡವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಳ ನಾಯಿ: ಕಾಂಗ್ರೆಸ್ ಮುಖಂಡ

  ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರ: ಕಸ್ತೂರಿ ಶಂಕರ್

  ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರ: ಕಸ್ತೂರಿ ಶಂಕರ್

  ಮುಂದುವರೆದು, 'ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಮಾತನಾಡಿ. ದೀಪಾವಳಿ ಕೇವಲ ಹಬ್ಬವಷ್ಟೆ ಅಲ್ಲ ತಮಿಳುನಾಡಿನ ಶಿವಕಾಶಿಯ ಜನರಿಗೆ ಜೀವನವೇ ಅದು. ನಿಮ್ಮ ಹುಸಿ ಸಾಮಾಜಿಕ ಬದ್ಧತೆ ತೋರಿಸಲು ಜನರ ಬದುಕು ಕಸಿಯಬೇಡಿ ಎಂದಿದ್ದಾರೆ ಕಸ್ತೂರಿ ಶಂಕರ್.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada
  ಗಾಯಕಿ ಸುಚಿತ್ರಾ ವಿರುದ್ಧವೂ ಹೇಳಿಕೆ

  ಗಾಯಕಿ ಸುಚಿತ್ರಾ ವಿರುದ್ಧವೂ ಹೇಳಿಕೆ

  ಕಸ್ತೂರಿ ಶಂಕರ್ ಈ ಹಿಂದೆಯೂ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಗಾಯಕಿ ಸುಚಿತ್ರಾ ಬಿಗ್‌ಬಾಸ್ ಮನೆ ಪ್ರವೇಶಿಸಿದಾಗ 'ಸುಚಿತ್ರಾ, ಮೀರಾ ಮಿಥುನ್ ಪಾರ್ಟ್‌ 2, ಜನರ ಗಮನ ಸೆಳೆಯಲು ಆಕೆ ಬೇಕೆಂದೇ ಗಲಾಟೆ ಮಾಡುತ್ತಾಳೆ' ಎಂದಿದ್ದರು.

  English summary
  Senior actress Kasturi Shankar lashes out on Indian cricketer Virat Kohli for his no crackers statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X