Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ ರೀತಿ ಬೆಳೆಯುದಿಲ್ಲವಂತೆ ಕೃತಿ ಶೆಟ್ಟಿ: ಹೀಗಂತಿರೋದ್ಯಾಕೆ?
ಕರಾವಳಿ ಮೂಲದ ನಟಿ ಕೃತಿ ಶೆಟ್ಟಿ ತೆಲುಗು ಸಿನಿಮಾರಂಗದಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಕೃತಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ. ಸದ್ಯ ಕೃತಿಯ ಹೊಸದೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.
ಆದರೆ ಕೃತಿ ಶೆಟ್ಟಿಗೆ ಮಾತ್ರ ಅಂದಕೊಂಡ ಮಟ್ಟಿಗೆ ಯಶಸ್ಸು ಸಿಗುತ್ತಾ ಇಲ್ಲ. ಮೊದಲ ಸಿನೆಮಾ 'ಉಪ್ಪೆನ' ಮೂಲಕ ಪ್ರೇಕ್ಷಕರ ಮನ ಗೆದ್ದ ಕೃತಿ ಶೆಟ್ಟಿ ಅಂದುಕೊಂಡ ಹಾಗೆ ಸ್ಟಾರ್ ನಟರ ಸಿನಿಮಾಗಳನ್ನು ಧಕ್ಕಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆದರೆ ಈಗ ರಾಮ್ ಪೋತಿನೇನಿ ಜೊತೆಗೆ ನಟಿಸಿರುವ 'ದಿ ವಾರಿಯರ್' ಸಿನಿಮಾದ ರಿಲೀಸ್ ದಿನಂಕ ಪ್ರಕಟವಾಗಿದೆ.
ಕೃತಿ
ಶೆಟ್ಟಿಯನ್ನು
ತಿರಸ್ಕರಿಸಿದ
ತೆಲುಗು
ಸ್ಟಾರ್
ನಟರು:
ಕಾರಣ
ಕೇಳಿದ್ರೆ
ಅಚ್ಚರಿ
ಆಗುತ್ತೆ!
ಇತ್ತೀಚೆಗೆ ನಾಯಕ ನಟಿಯರು ಒಂದೆ ಸಿನಿಮಾರಂಗಕ್ಕೆ ಸೀಮಿತ ಆಗದೆ. ನಾನಾ ಭಾಷೆಗಳಲ್ಲಿ ಗುರುತಿಸಿಕೊಂಡು, ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಮೊದಲಿಗರು. ಆದರೆ ರಶ್ಮಿಕಾಗೆ ಒಲಿದ ಅದೃಷ್ಟ ಕೃತಿಗೆ ಬರಲಿಲ್ಲ.
ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಒಂದು ಸಿನಿಮಾ ಮಾಡಿದ ಬಳಿಕ, ಸಾಲು ಸಾಲಾಗಿ ದೊಡ್ಡ ನಟರ ಜೊತೆಗೆ ಕಾಣಿಸಿಕೊಂಡರು. ಜೊತೆಗೆ ತೆಲುಗು, ತಮಿಳಿಗೆ ಎಂಟ್ರಿ ಕೊಟ್ಟು ಮಹೇಶ್ ಬಾಬು, ಅಲ್ಲು ಅರ್ಜುನ್, ಕಾರ್ತಿ, ವಿಜಯ್ ದೇವರಕೊಂಡ ಜೊತೆಗೆ ನಟಿಸಿ ಈಗ ಬಾಲಿವುಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.
ಮಹೇಶ್
ಬಾಬುಗಾಗಿ
ಪವನ್
ಕಲ್ಯಾಣ್
ಸಿನಿಮಾ
ಬಿಟ್ಟ
ಪೂಜಾ
ಹೆಗ್ಡೆ!
ಅದರೆ ಅದ್ಯಾಕೋ ಕೃತಿ ಶೆಟ್ಟಿಗೆ ಮಾತ್ರ ಈ ರೀತಿಯ ಅದೃಷ್ಟ ಇನ್ನೂ ಬಂದಿಲ್ಲಾ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಹಾಡಿದಾಡುತ್ತಾ ಇವೆ. ಕೃತಿ ಶೆಟ್ಟಿಗೆ ಮೊದಲ ಸಿನಿಮಾದಲ್ಲಿ ಸಿಕ್ಕ ಕೀರ್ತಿ ನೋಡಿದರೆ, ಅತಿ ಕಡಿಮೆ ಸಮಯದಲ್ಲಿ ಕೃತಿ ಶೆಟ್ಟಿ ಸಿನಿಮಾರಂಗದಲ್ಲಿ ನಂಬರ್ 1, ಆಗಿ ಬಿಡುತ್ತಾರೆ ಎನ್ನಲಾಗಿತ್ತು. ಆದರೆ ಕೃತಿ ಮಾತ್ರ ಕುಟುಂತ್ತಾ ಸಾಗಿದ್ದಾರೆ.
ಇದೇ ವರ್ಷ ಜುಲೈನಲ್ಲಿ ಕೃತಿ ಶೆಟ್ಟಿ ಮುಂದಿನ ಸಿನಿಮಾ ರಿಲೀಸ್ ಆಗಲಿದೆ. ಜುಲೈ 14ಕ್ಕೆ ಕೃತಿ ಶೆಟ್ಟಿ ಮತ್ತು ರಾಮ್ ಪೋತಿನೇನಿ ಜೊತೆಯಾಗಿ ನಟಿಸಿದ ಸಿನಿಮಾ 'ದಿ ವಾರಿಯರ್' ತೆರೆಕಾಣಲಿದೆ. ಈ ಚಿತ್ರದ ಬಳಿಕ ಆದರೂ ನಟಿ ಕೃತಿಯನ್ನು ಅರಸಿ ಮತ್ತಷ್ಟು ದೊಡ್ಡ, ದೊಡ್ಡ ಸಿನಿಮಾಗಳು ಬರುತ್ತವೆಯಾ ಎನ್ನುವುದನ್ನು ನೋಡಬೇಕಿದೆ.
ಬಿಕ್ಕಿ,
ಬಿಕ್ಕಿ
ಅತ್ತ
ನಟಿ
'ಕೃತಿ
ಶೆಟ್ಟಿ',
ನಿರೂಪಕರ
ಮಹಾ
ಎಡವಟ್ಟು!
ಈ ಚಿತ್ರವನ್ನು ಬಿಟ್ಟರೆ ನಟ ಸೂರ್ಯನ ಮುಂದಿನ ಸಿನಿಮಾದಲ್ಲಿ ಕೃತಿ ಶೆಟ್ಟಿ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ನಟಿ ಕೃತಿ ಹೇಗೆ ಕಾಣಿಸಿಕೊಳ್ಳಲಿದ್ದರೆ ಎನ್ನುವ ಕುತೂಹಲ ಮೂಡಿದೆ. ಇದರ ಜೊತೆಗೆ 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ' ಚಿತ್ರದಲ್ಲೂ ನಟಿ ಕೃತಿ ನಟಿಸಿದ್ದಾರೆ.