Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಂತೂ ಕೃತಿ ಶೆಟ್ಟಿಗೆ ಸಿಕ್ತು ಮತ್ತೊಂದು ದೊಡ್ಡ ಯಶಸ್ಸು!
ಕರಾವಳಿ ಮೂಲದ ಬೆಡಗಿ ಕೃತಿ ಶೆಟ್ಟಿ ತೆಲುಗು ಸಿನಿಮಾರಂಗದಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಕೃತಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ. ಸದ್ಯ ಕೃತಿಯ ಮತ್ತೊಮ್ಮೆ ಯಶಸ್ಸು ಪಡೆದುಕೊಂಡಿದ್ದಾರೆ.
ಉಪ್ಪೆನ ಸಿನಿಮಾದ ಮೂಲಕ ಮೊದಲ ಸಿನಿಮಾದಲ್ಲೇ ನಟಿ ಕೃತಿ ಶೆಟ್ಟಿಗೆ ದೊಡ್ಡ ಸಕ್ಸಸ್ ಸಿಕ್ಕಿತ್ತು. ಆದರೆ ಮೊದಲ ಸಿನಿಮಾದ ನಂತರ ಅದ್ಯಾಕೊ ಯಾವ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲೆ ಇಲ್ಲ. ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದರೂ, ಕೃತಿಗೆ 'ಉಪ್ಪೆನ' ಮಾದರಿ ಯಶಸ್ಸು ಸಿಕ್ಕಿರಲಿಲ್ಲ.
ಕೃತಿ
ಶೆಟ್ಟಿಯನ್ನು
ತಿರಸ್ಕರಿಸಿದ
ತೆಲುಗು
ಸ್ಟಾರ್
ನಟರು:
ಕಾರಣ
ಕೇಳಿದ್ರೆ
ಅಚ್ಚರಿ
ಆಗುತ್ತೆ!
ಈಗ ಮತ್ತೇ ಕೃತಿ ಫಾರ್ಮ್‌ಗೆ ಬಂದಿದ್ದಾರೆ. ಉಪ್ಪೆನ ಬಳಿಕ ಮತ್ತೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. 'ದಿ ವಾರಿಯರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಕೃತಿ ಕೈ ಹಿಡಿದಿದೆ. ಈ ಚಿತ್ರದ ಗಳಿಕೆ ಮತ್ತು ಕೃತಿ ಮುಂದಿನ ಚಿತ್ರಗಳ ಬಗ್ಗೆ ಮುಂದೆ ಓದಿ...
ಮಹೇಶ್
ಬಾಬುಗಾಗಿ
ಪವನ್
ಕಲ್ಯಾಣ್
ಸಿನಿಮಾ
ಬಿಟ್ಟ
ಪೂಜಾ
ಹೆಗ್ಡೆ!

ಕೃತಿಗೆ ಮತ್ತೆ ಒಲಿದ ಅದೃಷ್ಟ!
ನಟಿ ಕೃತಿ ಶೆಟ್ಟಿಗೆ ಎರಡು ಸಿನಿಮಾ ಬಳಿಕ ಮತ್ತೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. 'ಉಪ್ಪೆನ' ಮುಲಕ ಭರವಸೆ ಮೂಡಿದ ನಟಿ ಮತ್ತೆ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಕೃತಿ ಶೆಟ್ಟಿಗೆ ವಾರಿಯರ್ ಸಿನಿಮಾ ಮೂಲಕ ಅದೃಷ್ಟ ಮರುಕಳಿಸಿದೆ. ಬೇಬಮ್ಮನ ಈ ಚಿತ್ರವನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಇನ್ನು ಬಾಕ್ಸಾಫಿಸ್‌ನಲ್ಲೂ ಸಿನಿಮಾ ಸದ್ದು ಮಾಡುತ್ತಿದೆ.

ವಾರಿಯರ್ ಬಾಕ್ಸಾಫೀಸ್ ಲೆಕ್ಕಾಚಾರ!
ಲಿಂಗುಸ್ವಾಮಿ ನಿರ್ದೇಶಿಸಿದ 'ದಿ ವಾರಿಯರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ರಿಲೀಸ್ ಬಳಿಕ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಕೂಡ, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ರಿಲೀಸ್ ಆದ 3ನೇ ದಿನಕ್ಕೆ ಸಿನಿಮಾ 21 ಕೋಟಿಯನ್ನು ಬಾಚಿಕೊಂಡಿದೆ. ಇನ್ನು ಈ ಸಿನಿಮಾಗೆ ಹಾಕಿದ 70 ಕೋಟಿ ಬಜೆಟ್ ಒಂದೇ ವಾರದಲ್ಲಿ ವಾಪಸ್ ಆಗಲಿದೆ ಎನ್ನಲಾಗುತ್ತಿದೆ.

ಕೃತಿ ಶೆಟ್ಟಿ ನಟಿಸಿದ ಚಿತ್ರಗಳು!
'ಉಪ್ಪೆನ' ಚಿತ್ರದ ನಂತರ ಕೃತಿ ಶೆಟ್ಟಿ ಬಗ್ಗೆ ಸಾಕಷ್ಟು ನಿರೀಕ್ಷೆ ಹೆಚ್ಚಿತ್ತು. ಆದರೆ ನಿರೀಕ್ಷೆಯಂತೆ ಕೃತಿ ಅಂತಹ ಯಶಸ್ಸು ಕಾಣಲಿಲ್ಲ. ಉಪ್ಪೆನ ಬಳಿಕ ಕೃತಿ 'ಶ್ಯಾಮ ಸಿಂಘ ರಾಯ್' ಸಿನಿಮಾದಲ್ಲಿ ನಟಿಸಿದರು. ಆದರೆ ಈ ಚಿತ್ರದಲ್ಲಿ ಸಾಯಿ ಪಲ್ಲವಿಯದ್ದು ಪ್ರಮುಖ ಪಾತ್ರವಾಗಿತ್ತು. ಆ ಬಳಿಕ ಬಂದ 'ಬಂಗಾರ್ರಾಜು' ಅಷ್ಟೇನು ಸದ್ದು ಮಾಡಲಿಲ್ಲ. ಈ 'ವಾರಿಯರ್' ಮೂಲಕ ಮತ್ತೆ ದೊಡ್ಡ ಮಟ್ಟದ ಯಶಸ್ಸು ಧಕ್ಕಿಸಿಕೊಂಡಿದ್ದಾರೆ.

ಕೃತಿ ಮುಂದಿನ ಸಿನಿಮಾಗಳು!
ವಾರಿಯರ್ ಸಿನಿಮಾದ ಬಳಿಕ ಕೃತಿ ಶೆಟ್ಟಿ ಕೈಯಲ್ಲಿ ದೊಡ್ಡ, ದೊಡ್ಡ ಸಿನಿಮಾಗಳಿವೆ. ನಟ ಸೂರ್ಯನ ಮುಂದಿನ ಸಿನಿಮಾದಲ್ಲಿ ಕೃತಿ ಶೆಟ್ಟಿ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ನಟಿ ಕೃತಿ ಹೇಗೆ ಕಾಣಿಸಿಕೊಳ್ಳಲಿದ್ದರೆ ಎನ್ನುವ ಕುತೂಹಲ ಮೂಡಿದೆ. ಇದರ ಜೊತೆಗೆ 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ' ಚಿತ್ರದಲ್ಲೂ ನಟಿ ಕೃತಿ ನಟಿಸಿದ್ದಾರೆ. ಇದರೊಂದಿಗೆ ಹೆಸರಿಡದ ಇನ್ನೂ ಎರಡು ಸಿನಿಮಾಗಳು ಕೃತಿ ಕೈಯಲ್ಲಿ ಇವೆ.