For Quick Alerts
  ALLOW NOTIFICATIONS  
  For Daily Alerts

  ತೆಲುಗಿಗೆ ಕಾಲಿಡುತ್ತಿರುವ ಕ್ಯೂಟ್ ಮಲಯಾಳಿ ನಜ್ರಿಯಾ

  |

  ಮಲಯಾಳಂ, ತಮಿಳಿನಲ್ಲಿ ತಮ್ಮದೇ ಆದ ಅಭಿಮಾನಿ ವರ್ಗ ಹೊಂದಿರುವ ಪ್ರತಿಭಾವಂತ ಮತ್ತು ಕ್ಯೂಟ್ ನಟಿ ನಜ್ರಿಯಾ ಮೊದಲ ಬಾರಿಗೆ ತೆಲುಗು ಸಿನಿಮಾ ಒಂದಕ್ಕೆ ಎಸ್ ಎಂದಿದ್ದಾರೆ.

  'ಬ್ಯಾಂಗ್ಲೋರ್ ಡೇಸ್', ರಾಜಾ ರಾಣಿ, ನೇರಂ, ವಾಯಿ ಮೂಡಿ ಪೇಸುವಾ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಜ್ರಿಯಾ, ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ನಾಯಕ ನಾನಿ.

  ನಾನಿಯ 21 ನೇ ಸಿನಿಮಾದಲ್ಲಿ ನಜ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ನಜ್ರಿಯಾ ನಟನೆಯ ಹಲವು ಸಿನಿಮಾಗಳು ತೆಲುಗಿಗೆ ಡಬ್ ಆಗಿದ್ದಾವಾದರೂ , ನಾನಿ ಜೊತೆಗೆ ನಟಿಸುತ್ತಿರುವ ಈ ಸಿನಿಮಾ ಅವರ ಮೊತ್ತ ಮೊದಲ ತೆಲುಗು ಸಿನಿಮಾ ಆಗಿರಲಿದೆ.

  15 ಸಿನಿಮಾಗಳಲ್ಲಿ ನಟಿಸಿರುವ ನಾಜರಿಯಾ

  15 ಸಿನಿಮಾಗಳಲ್ಲಿ ನಟಿಸಿರುವ ನಾಜರಿಯಾ

  2010 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ನಾಜರಿಯಾ ಈ ವರೆಗೆ ನಟಿಸಿರುವುದು 15 ಸಿನಿಮಾಗಳಲ್ಲಿಯಷ್ಟೆ. ಅದರಲ್ಲೂ 12 ಸಿನಿಮಾಗಳಲ್ಲಿಯಷ್ಟೆ ನಾಯಕಿಯಾಗಿ ನಟಿಸಿದ್ದಾರೆ ನಾಜರಿಯಾ. 10 ಮಲಯಾಳಂ ಹಾಗೂ 5 ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಕತೆಯ ವಿಷಯದಲ್ಲಿ ಚ್ಯೂಸಿ

  ಕತೆಯ ವಿಷಯದಲ್ಲಿ ಚ್ಯೂಸಿ

  ಕತೆಯ ವಿಷಯದಲ್ಲಿ ಸಾಕಷ್ಟು ಚ್ಯೂಸಿ ಆಗಿರುವ ನಾಜರಿಯಾ, ಬಹಳ ಅಳೆದು-ತೂಗಿ ಕತೆಗಳನ್ನು ಒಪ್ಪಿಕೊಳ್ಳುತ್ತಾರೆ. 2014 ರಲ್ಲಿ ಫಹಾದ್ ಜೊತೆಮದುವೆಯ ನಂತರ ನಟನೆಯಿಂದ ಕೇವಲ ಎರಡು ಸಿನಿಮಾಗಳಲ್ಲಿಯಷ್ಟೆ ನಟಿಸಿದ್ದಾರೆ ನಾಜರಿಯಾ. ಅದರಲ್ಲೊಂದು ಪತಿ ಫಹಾದ್ ಜೊತೆಗೆ ಟ್ರಾನ್ಸ್ ಸಿನಿಮಾದಲ್ಲಿ.

  ವಿವೇಕ್ ಆಥ್ರೆಯಾ ನಿರ್ದೇಶನ

  ವಿವೇಕ್ ಆಥ್ರೆಯಾ ನಿರ್ದೇಶನ

  ನಾನಿ ಹಾಗೂ ನಾಜರಿಯಾ ನಟಿಸಲಿರುವ ತೆಲುಗು ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾವನ್ನು ಯುವ ನಿರ್ದೇಶಕ ವಿವೇಕ್ ಆಥ್ರೆಯಾ ನಿರ್ದೇಶಿಸಲಿದ್ದಾರೆ. ಈ ಹಿಂದೆ ಮೆಂಟಲ್ ಮದಿಲೊ ಹಾಗೂ ಬ್ರೋಚೇವಾರೆವರುರಾ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

  ಕೊಹ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ | Filmibeat Kannada
  ಮೇಘನಾ ರಾಜ್ ಆಪ್ತ ಗೆಳತಿ ನಾಜರಿಯಾ

  ಮೇಘನಾ ರಾಜ್ ಆಪ್ತ ಗೆಳತಿ ನಾಜರಿಯಾ

  ನಾಜರಿಯಾ, ಕನ್ನಡದ ನಟಿ ಮೇಘನಾ ರಾಜ್ ಅವರ ಆಪ್ತ ಗೆಳತಿ. ಇಬ್ಬರೂ ಮ್ಯಾಡ್ ಡ್ಯಾಡಿ ಸಿನಿಮಾದಲ್ಲಿ ನಟಿಸಿದ್ದರು. ಮೇಘನಾ ಮದುವೆ, ನಿಶ್ಚಿತಾರ್ಥಕ್ಕೆ ನಾಜರಿಯಾ ಬಂದಿದ್ದರು. ಮೊನ್ನೆ ಮೇಘನಾಗೆ ಮಗುವಾದಾಗ ನೋಡಲು ಕೇರಳದಿಂದ ಕಾರಲ್ಲಿ ಬಂದಿದ್ದರು ನಾಜರಿಯಾ ಹಾಗೂ ಪತಿ ಫಹಾದ್ ಫಾಸಿಲ್.

  English summary
  Actress Nazriya Nazim doing her first movie in Telugu with actor Nani. She is a famous actress in Malayalam and Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X