For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಮತ್ತು ದೀಪಿಕಾ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿ

  |

  ಟಾಲಿವುಡ್ ನಟ ಪ್ರಭಾಸ್ ಸದ್ಯ 'ರಾಧೆ ಶ್ಯಾಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ರಾಧೆ ಶ್ಯಾಮ ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ನಡುವೆ ಪ್ರಭಾಸ್ 21ನೇ ಸಿನಿಮಾದ ಬಗ್ಗೆ ಸಹ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಐಶ್ವಿನ್, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮೂವರು ಕಾಂಬಿನೇಷನ್ ನ ಸಿನಿಮಾ ಅಭಿಮಾನಿಗಳ ನಿದ್ದೆ ಗೆಡಿಸಿದೆ.

  Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

  ಹೌದು, ಮೊದಲ ಬಾರಿಗೆ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಸಂಭ್ರಮವಾಗಿದೆ. ಇಬ್ಬರು ಸ್ಟಾರ್ ಕಲಾವಿದರನ್ನು ಒಟ್ಟಿಗೆ ನೋಡಲು ಚಿತ್ರ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟಿ ನಿವೇತಾ ಥಾಮಸ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ನಟ ಪ್ರಭಾಸ್ ಮುಂದಿನ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ.!

  ಪ್ರಭಾಸ್ ಸಿನಿಮಾದ ಪಾತ್ರದಲ್ಲಿ ನಿವೇತಾ

  ಪ್ರಭಾಸ್ ಸಿನಿಮಾದ ಪಾತ್ರದಲ್ಲಿ ನಿವೇತಾ

  ಈ ಮೊದಲು ನಿವೇತಾ ಥಾಮಸ್, ಪ್ರಭಾಸ್ ಗೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೀಗ ನಿವೇತಾ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿವೇತಾ ಥಾಮಸ್ ಪಾತ್ರ ಚಿತ್ರದ ಪ್ರಮುಖ ಟ್ವಿಸ್ಟ್ ಆಗಿರಲಿದೆಯಂತೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೂ ರಿವೀಲ್ ಮಾಡಿಲ್ಲ.

  ನಿವೇತಾ ಥಾಮಸ್ ಸಿನಿಮಾಗಳು

  ನಿವೇತಾ ಥಾಮಸ್ ಸಿನಿಮಾಗಳು

  ನಿವೇತಾ ಥಾಮಸ್ ಸದ್ಯ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾದಲ್ಲಿ ಮತ್ತು ಮಹೇಶ್ ಬಾಬು ಅಭಿನಯದ ಸರ್ಕಾರ್ ವಾರಿ ಪಾಟ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಈಗ ಪ್ರಭಾಸ್ ಸಿನಿಮಾದಲ್ಲಿಯೂ ನಿವೇತಾ ಹೆಸರು ಕೇಳಿ ಬರುತ್ತಿದೆ.

  ನಟಿ ಕೀರ್ತಿ ಸುರೇಶ್ ಗೆ ಸಾಥ್ ನೀಡಿದ ನಟ ಪ್ರಭಾಸ್

  2022ಕ್ಕೆ ಸಿನಿಮಾ ರಿಲೀಸ್ ಸಾಧ್ಯತೆ

  2022ಕ್ಕೆ ಸಿನಿಮಾ ರಿಲೀಸ್ ಸಾಧ್ಯತೆ

  ಪ್ರಭಾಸ್ 21ನೇ ಸಿನಿಮಾ ಪ್ಯಾನ್ ಇಂಡಿಯ ಯೋಜನೆಯಾಗಿದೆ. ತೆಲುಗು, ಹಿಂದಿ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವನಿ ದತ್ ನಿರ್ಮಿಸುತ್ತಿದ್ದಾರೆ. ಬಹುನಿರೀಕ್ಷೆಯ ಈ ಸಿನಿಮಾ 2021ರಲ್ಲಿ ಸೆಟ್ಟೇರಲಿದ್ದು, 2022ರ ಬೇಸಿಗೆಯಲ್ಲಿ ರಿಲೀಸ್ ಆಗಲಿದೆ.

  ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್‌ಗೆ ಆಯ್ತು ದೊಡ್ಡ ನಷ್ಟ!

  ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಸಿನಿಮಾ

  ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಸಿನಿಮಾ

  ನಟ ಪ್ರಭಾಸ್ 21ನೇ ಸಿನಿಮಾ ಬಳಿಕ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರ ಕಾಂಬಿನೇಷ್ ನಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೂಡಿಬರಲಿದೆಯಂತೆ. ಭೂಗತ ಲೋಕದ ಸುತ್ತ ಕಥೆ ಸುತ್ತಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಇಬ್ಬರ ನಡುವೆ ಮಾತುಕಥೆ ಮುಗಿದಿದ್ದು, 2022ರಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  English summary
  Actress Nivetha thomas will play important role in Prabhas and Deepika padukone's next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X