Don't Miss!
- News
ತೆರಿಗೆ ಉಳಿಸುವ FD ಗಳು: ಈ ಬ್ಯಾಂಕುಗಳಲ್ಲಿ ಶೇ 7.6ರ ವರೆಗೆ ಬಡ್ಡಿದರ- ಹಿರಿಯ ನಾಗರಿಕರಿಗೆ ಇನ್ನೂ ಹೆಚ್ಚು
- Sports
ಆಸೀಸ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ರಣಜಿ ಟ್ರೋಫಿ ಆಡಲೇಬೇಕಾದ ನಾಲ್ವರು ಪ್ರಮುಖ ಆಟಗಾರರು
- Automobiles
ಬಹುನಿರೀಕ್ಷಿತ 'ಹೀರೋ Xoom 110 ಸಿಸಿ' ಟೀಸರ್: ಜ.30ಕ್ಕೆ ಸ್ಕೂಟರ್ ಬಿಡುಗಡೆ.. ಹೋಂಡಾ ಡಿಯೋಗೆ ಪ್ರತಿಸ್ಪರ್ಧಿ!
- Technology
ಮೆಗಾ ರಿಪಬ್ಲಿಕ್ ಡೇ ಸೇಲ್: ಫೋನ್ಗಳಿಗೆ ಭಾರೀ ಡಿಸ್ಕೌಂಟ್, ಗಮನ ಸೆಳೆದ ಆಫರ್!
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Finance
ಹೊಸ ಕುಟುಂಬ ಸದಸ್ಯರ ಹೆಸರು ರೇಷನ್ ಕಾರ್ಡ್ಗೆ ಹೀಗೆ ಅಪ್ಡೇಟ್ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಹೊಸ ವರ್ಷಕ್ಕೆ ವಿಜಯ್ ಜೊತೆ ಫಾರಿನ್ ಟ್ರಿಪ್ ನಿಜ, ಲಿಂಕ್ ಮಾಡಿ ಮಾತಾಡ್ಲಿ ತಲೆ ಕೆಡಿಸಿಕೊಳ್ಳಲ್ಲ, ಆದ್ರೆ..: ರಶ್ಮಿಕಾ
ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಗುಸು ಗುಸು ಹಲವು ದಿನಗಳಿಂದ ಕೇಳಿ ಬರ್ತಾನೇ ಇದೆ. ಇಬ್ಬರು ಹೊಸ ವರ್ಷಕ್ಕೆ ಒಟ್ಟಿಗೆ ವಿದೇಶಕ್ಕೆ ಹೋಗಿದ್ದರು, ರಶ್ಮಿಕಾ ಇನ್‌ಸ್ಟಾ ಲೈವ್ ವೇಳೆ ವಿಜಯ್ ದೇವರಕೊಂಡ ಕೂಡ ಜೊತೆಗಿದ್ದರು ಎನ್ನಲಾಗಿತ್ತು. ಇದನ್ನೆಲ್ಲಾ ಒಂದಕ್ಕೊಂದು ಲಿಂಕ್ ಮಾಡಿ ಇಬ್ಬರು ಡೇಟಿಂಗ್ ಮಾಡುತ್ತಿರುವುದು ನಿಜ ಎನ್ನಲಾಗಿತ್ತು. ಈ ಬಗ್ಗೆ ಮೊದಲ ಬಾರಿಗೆ ರಶ್ಮಿಕಾ ಮೌನ ಮುರಿದಿದ್ದಾರೆ.
'ಗೀತಾ ಗೋವಿಂದಂ' ಚಿತ್ರದಲ್ಲಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲೂ ಜೋಡಿ ಜೊತೆಯಾಗಿತ್ತು. ಜೋಡಿಯನ್ನು ನೋಡಿ ಪ್ರೇಕ್ಷಕರು ಕೂಡ ಫಿದಾ ಆಗಿದ್ದರು. ಹೋದಲ್ಲಿ ಬಂದಲ್ಲಿ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದು ನೋಡಿ ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೀತಿದೆ ಎನ್ನಲಾಗಿತ್ತು. ಇಬ್ಬರು ಈ ಕೂಡ ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಇಬ್ಬರು ಮತ್ತೆ ಒಟ್ಟಿಗೆ ನಟಿಸಲು ತೀರ್ಮಾನಿಸಿದ್ದಾರೆ. ಆದರೆ ಸದ್ಯಕ್ಕೆ ತಮ್ಮ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಆದರೆ ಮೊದಲ ಸಿನಿಮಾ ಸಮಯದಿಂದಲೂ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರಲು ಶುರುವಾಗಿತ್ತು.
ತೆಲುಗು ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಮೆಚ್ಚುಗೆ ಮಾತುಗಳನ್ನಾಡಿದ್ದರು. ಅದೇ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆಯೂ ಮಾತನಾಡಿದ್ದಾರೆ. ಒಟ್ಟಿಗೆ ಟ್ರಿಪ್ಪು ಹೋಗಿದ್ದು ನಿಜ ಆದರೆ ನೀವಂದುಕೊಂಡಂತೆ ಏನು ಇಲ್ಲ, ಎಂದಿದ್ದಾರೆ.

ವಿಜಯ್, ನಾನು ಬೆಸ್ಟ್ ಫ್ರೆಂಡ್ಸ್
ಇನ್‌ಸ್ಟಾ ಲೈವ್ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಧ್ವನಿ ಕೇಳಿಸಿತು ಎನ್ನುವ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, "ಕೆಲವೊಮ್ಮೆ ನಮಗೆ ಬೇಕಾದವರ ಧ್ವನಿಯನ್ನೇ ಕೇಳುತ್ತಿದ್ದೇವೆ ಎನಿಸುತ್ತದೆ. ಹಾಗೆಯೇ ಆ ವಿಡಿಯೋದಲ್ಲಿ ವಿಜಯ್ ಧ್ವನಿ ಕೇಳಿದಂತೆ ಎಲ್ಲರಿಗೂ ಅನ್ನಿಸಿದೆ. ಆದರೆ ಆ ಸಮಯದಲ್ಲಿ ನಮ್ಮ ಸ್ನೇಹಿತರು ಮಾತನಾಡುತ್ತಿದ್ದರು. ಇನ್ನು ವಿಜಯ್ ಬಗ್ಗೆ ಹೇಳಬೇಕು ಅಂದ್ರೆ ಆತ ನನಗೆ ಬೆಸ್ಟ್ ಫ್ರೆಂಡ್. ಪ್ರಸ್ತುತ ವಿಜಯ್ ಅವನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾನೆ. ನಾನು ಕೂಡ ನನ್ನ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದಿದ್ದಾರೆ.

ನ್ಯೂ ಇಯರ್ ಟೂರ್ ನಿಜ
ವಿಜಯ್ ಜೊತೆ ಡೇಟಿಂಗ್ ವದಂತಿ ಶುರುವಾಗಲು ಕಾರಣ ಏನು ಅಂದ್ರೆ, "ಗೀತಾಗೋವಿಂದಂ ಸಿನಿಮಾದಲ್ಲಿ ನಮ್ಮಿಬ್ಬರ ಕ್ಯಾರೆಕ್ಟರೈಸೇಷನ್. ಬೆಳ್ಳಿ ತೆರೆಯಲ್ಲಿ ಜೋಡಿ ಕೆಮೆಸ್ಟ್ರಿ ಇಷ್ಟ ಆದರೆ ಪ್ರೇಕ್ಷಕರು ಅವರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇಂತಹ ವದಂತಿಗಳು ಶುರು ಆಗಿರಬಹುದು. ಲಿಂಕ್ ಮಾಡಿ ಮಾತನಾಡುವುದರಲ್ಲಿ ತಪ್ಪೇನು ಇಲ್ಲ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್, ಹಾಗಾಗಿ ಟೂರ್ ಹೋಗುತ್ತಿರುತ್ತೀವಿ. ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಬಾರದಾ? ನಾವು ಪ್ರವಾಸಕ್ಕೆ ಹೋದರೆ ಒಬ್ಬಿಬ್ಬರು ಹೋಗುವುದಿಲ್ಲ, ಏಳೆಂಟು ಜನ ಹೋಗುತ್ತೇವೆ. ಹೊಸ ವರ್ಷದ ಸಂಭ್ರಮದಲ್ಲಿ ಇಬ್ಬರು ಒಂದೇ ಜಾಗದಲ್ಲಿ ಇದ್ದರು ಎಂದರು. ಸರಿ ಪರವಾಗಿಲ್ಲ. ಯಾಕಂದರೆ ನಾವು ಪಬ್ಲಿಕ್ ಫಿಗರ್ಸ್, ಇದೇ ಮಾತಾಡಿ, ಅದೇ ಮಾತಾಡಿ ಎಂದು ಹೇಳಲು ಆಗುವುದಿಲ್ಲ"

ಪೋಷಕರಿಗೆ ತೊಂದರೆ ಆಗಬಾರದು
"ಸಿನಿಮಾ ರಿಲೀಸ್ ಹತ್ತಿರ ಬಂದಾಗ ಅದರ ಬಗ್ಗೆ ಮಾತನಾಡಬೇಕು. ಯಾಕಂದ್ರೆ ಒಂದು ವರ್ಷ ಕಷ್ಟಬಿದ್ದು ಸಿನಿಮಾ ಮಾಡಿರುತ್ತೇವೆ. ಆಗ ಸಿನಿಮಾ ಬಗ್ಗೆ ಮಾತನಾಡಬೇಕು. ಅದೇ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೀಗಾಯ್ತು? ಹಾಗಾಯ್ತು? ಅಂತಾರೆ. ಸರಿ ಬಿಡಿ ಅವರಿಷ್ಟ ಮಾತನಾಡಲಿ. ಆದರೆ ಇದರಿಂದ ನಮ್ಮ ಸುತ್ತಾ ಇರುವುವರಿಗೆ ತೊಂದರೆಯಾದರೆ ಸರಿಯಲ್ಲ. ನಮ್ಮ ಪೋಷಕರಿಗೆ ವಿಜಯ್ ಪೋಷಕರಿಗೆ ಸ್ನೇಹಿತರಿಗೆ ಸಮಸ್ಯೆ ಆದರೆ ಅದು ತಪ್ಪಾಗುತ್ತದೆ."

ಇಬ್ಬರು ತಮ್ಮ ಚಿತ್ರಗಳಲ್ಲಿ ಬ್ಯುಸಿ
ಕಳೆದ ವರ್ಷ 'ಆಡವಾರ್ಲು ಮೀಕು ಜೋಹಾರ್ಲು', 'ಗುಡ್ ಬೈ', 'ಸೀತಾರಾಮಂ' ಸಿನಿಮಾಗಳಲ್ಲಿ ನಟಿಸಿ ರಶ್ಮಿಕಾ ರಂಜಿಸಿದ್ದರು. ಈ ವರ್ಷ 'ವಾರಿಸು' ಮೂಲಕ ಶುಭಾರಂಭ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ನಟಿಸಿದ ಮೊದಲ ಸಿನಿಮಾ 'ಮಿಷನ್ ಮಜ್ನು' ನೇರವಾಗಿ ಓಟಿಟಿಗೆ ಬಂದಿದೆ. ಇನ್ನು ರಣಬೀರ್ ಕಪೂರ್ ಜೋಡಿಯಾಗಿ 'ಅನಿಮಲ್' ಚಿತ್ರದಲ್ಲಿ ನಟಿಸ್ತಿದ್ದಾರೆ. 'ಪುಷ್ಪ- 2' ಚಿತ್ರದಲ್ ಮತ್ತೆ ಶ್ರೀವಲ್ಲಿ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ ಗೌತಮ್ ತಿನ್ನನೂರು ನಿರ್ದೇಶನದ 'VD12' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.