twitter
    For Quick Alerts
    ALLOW NOTIFICATIONS  
    For Daily Alerts

    'ನನ್ನ ಮಾತುಗಳನ್ನು ಬೇರೆ ರೀತಿ ಅರ್ಥೈಸಿದ್ದು ಬೇಸರ ತರಸಿದೆ': ವಿವಾದ ಬಗ್ಗೆ ಸಾಯಿ ಪಲ್ಲವಿ ಸ್ಪಷ್ಟನೆ!

    |

    ದಕ್ಷಿಣ ಭಾರತದಲ್ಲಿ ತುಂಬಾ ಗೌರವ ಕೊಡುವ ನಟಿಯರಲ್ಲಿ ಒಬ್ಬರು ಸಾಯಿ ಪಲ್ಲವಿ. 'ಪ್ರೇಮಂ' ಸಿನಿಮಾ ಬಳಿಕ ಸಾಯಿ ಪಲ್ಲವಿ ವೃತ್ತಿ ಬದುಕು ಉತ್ತುಂಗದಲ್ಲಿದೆ. ದಕ್ಷಿಣ ಭಾರತದ ಬಹುತೇಕ ನಟಿಯಲ್ಲಿ ಈಕೆಯನ್ನು ಪ್ರಬುದ್ಧ ನಟಿಯೆಂದೇ ಗುರುತಿಸುತ್ತಾರೆ. ಆದರೆ, ಇತ್ತೀಚೆಗೆ 'ವಿರಾಟ ಪರ್ವಂ' ಸಿನಿಮಾ ಪ್ರಚಾರದ ವೇಳೆ ಕಾಶ್ಮೀರಿ ಫೈಲ್ಸ್ ಹಾಗೂ ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಾಯಿ ಪಲ್ಲವಿ ಮಾತಾಡಿದ್ದರು.

    ಸಂದರ್ಶಕರ ಪ್ರಶ್ನೆಗೆ ಸಾಯಿ ಪಲ್ಲವಿ ಉತ್ತರ ಹೀಗಿತ್ತು. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂತು. ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲಾದ ಹಿಂಸಾಚಾರವನ್ನು ತೋರಿಸಲಾಯಿತು. ಹಾಗೆ ಕಳೆದ ವರ್ಷ ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ ಚಾಲಕ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇವೆಲ್ಲವನ್ನೂ ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ. ಈಗ ನಡೆಯುತ್ತಿರುವುದಕ್ಕೂ ವ್ಯತ್ಯಾಸವೇನೂ ಕಾಣಿಸುತ್ತಿಲ್ಲ." ಎಂದಿದ್ದರು.

    ರಾಮನ ಹೆಸರಲ್ಲಿ ಹತ್ಯೆ, ಕಾಶ್ಮೀರಿ ಪಂಡಿತರ ಮೇಲೆ ಹಿಂಸೆ ಒಂದೇ: ಸಾಯಿ ಪಲ್ಲವಿರಾಮನ ಹೆಸರಲ್ಲಿ ಹತ್ಯೆ, ಕಾಶ್ಮೀರಿ ಪಂಡಿತರ ಮೇಲೆ ಹಿಂಸೆ ಒಂದೇ: ಸಾಯಿ ಪಲ್ಲವಿ

    ಸಾಯಿ ಪಲ್ಲವಿ ಈ ಹೇಳಿಕೆಯನ್ನು ನೀಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ವಿರುದ್ಧ ತಿರುಗಿಬಿದ್ದಿದ್ದರು. ಸಾಯಿ ಪಲ್ಲವಿ ಹೇಳಿಕೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿಯೇ ಸಾಯಿ ಪಲ್ಲವಿ ತಾನು ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

    ಮಾನವೀಯರಾಗಿ, ಮನುಷ್ಯರಾಗಿ ಎಂದವರು ದೇಶದ್ರೋಹಿಗಳೇ? ಸಾಯಿ ಪಲ್ಲವಿಗೆ ರಮ್ಯಾ ಬೆಂಬಲಮಾನವೀಯರಾಗಿ, ಮನುಷ್ಯರಾಗಿ ಎಂದವರು ದೇಶದ್ರೋಹಿಗಳೇ? ಸಾಯಿ ಪಲ್ಲವಿಗೆ ರಮ್ಯಾ ಬೆಂಬಲ

    ಸ್ಪಷ್ಟನೆ ಕೊಟ್ಟ ಸಾಯಿ ಪಲ್ಲವಿ

    ಸ್ಪಷ್ಟನೆ ಕೊಟ್ಟ ಸಾಯಿ ಪಲ್ಲವಿ

    ಕಾಶ್ಮೀರಿ ಪಂಡಿತರು ಹಾಗೂ ಗೋ ರಕ್ಷಕರ ಬಗ್ಗೆ ಸಾಯಿ ಪಲ್ಲವಿ ನೀಡಿದ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ಸ್ಪಷ್ಟಣೆ ನೀಡಿದ್ದಾರೆ. ಎಡ ಪಂಥ ಹಾಗೂ ಬಲ ಪಂಥ ಅನ್ನೋದನ್ನು ಗುರುತಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದು, " ಇಲ್ಲಿನ ನನ್ನ ಸ್ಪಷ್ಟನೆ. ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಪ್ರೀತಿ ಸಿಗಲಿ ಎಂದು ಬಯಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.

    ಸಾಯಿ ಕೊಟ್ಟ ಸ್ಪಷನೆ ಏನು?

    " ಯಾವುದೇ ಪ್ರಕಾರದ ಹಿಂಸೆ ಹಾಗೂ ಧರ್ಮದ ಹೆಸರಲ್ಲಿ ನಡೆಯವ ಹಿಂಸೆ ತಪ್ಪು ಎಂದು ನಾನು ಭಾವಿಸಿದ್ದೇನೆ. ಇದನ್ನೇ ನಾನು ಹೇಳಲು ಹೊರಟಿದ್ದೆ. ಆದರೆ, ಆನ್‌ಲೈನ್‌ನಲ್ಲಿ ಹಲವು ಮಂದಿ ಗುಂಪು ಘರ್ಷಣೆಯನ್ನು ಸಮರ್ಥಿಸಿಕೊಂಡಿದ್ದು ಆತಂಕ ತರಿಸಿದೆ. ಬೇರೆಯವರ ಜೀವವನ್ನು ತೆಗೆಯುವ ಹಕ್ಕು ನಮಗೆ ಇಲ್ಲ. ಎಂಬಿಬಿಎಸ್ ಪದವೀಧರೆಯಾಗಿ ಪ್ರತಿಯೊಬ್ಬರ ಜೀವವೂ ಮುಖ್ಯ ಎಂದು ಭಾವಿಸುತ್ತೇನೆ. ಭಾರತೀಯರೆಲ್ಲರೂ ಸಹೋದರರು ಎಂದು ಬೆಳೆದು ಬಂದವರು ನಾವು. ನಾನು ನ್ಯೂಟ್ರಲ್ ಆಗಿ ಮಾತಾಡುತ್ತೇನೆ. ಆದರೆ, ನನ್ನ ಮಾತುಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಿದ್ದು ಬೇಸರದ ವಿಚಾರ." ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

    ಸಾಯಿ ಪಲ್ಲವಿ ಯಾಕೆ ಈ ವಿವಾದ?

    ಸಾಯಿ ಪಲ್ಲವಿ ಯಾಕೆ ಈ ವಿವಾದ?

    ಸಾಯಿ ಪಲ್ಲವಿ ವಿರಾಟ ಪರ್ವಂ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾಗ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಕಾಶ್ಮೀರಿ ಪಂಡಿತರು ಹಾಗೂ ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತಾಡಿದ್ದರು. ಇದು ಸೋಶಿಯಲ್‌ ಮೀಡಿಯದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತೆ ಕೆಲವರು ಸಾಯಿ ಪಲ್ಲವಿ ಪರ ನಿಂತು ಬೆಂಬಲವನ್ನು ಸೂಚಿಸಿದ್ದರು.

    'ನ್ಯೂಟ್ರಲ್ ಕುಟುಂಬದಲ್ಲಿ ಬೆಳೆದಿದ್ದೇನೆ'

    'ನ್ಯೂಟ್ರಲ್ ಕುಟುಂಬದಲ್ಲಿ ಬೆಳೆದಿದ್ದೇನೆ'

    ವಿವಾದ ಸೃಷ್ಟಿಯಾಗುವ ಮುನ್ನವೇ ನಮ್ಮದು ನ್ಯೂಟ್ರಲ್ ಕುಟುಂಬ ಎಂದು ಹೇಳಿದ್ದರು. "ನಾನು ಬೆಳೆದು ಬಂದಿದ್ದು ನ್ಯೂಟ್ರಲ್ ಕುಟುಂಬದಲ್ಲಿ. ಎಡ ಅಥವಾ ಬಲಪಂಥೀಯ ಆಲೋಚನೆಯುಳ್ಳ ಕುಟುಂಬ ನಾನು ಬೆಳೆದಿಲ್ಲ. ಹಾಗಾಗಿ ನನ್ನ ಮೇಲೆ ಇಂತಹ ಯಾವುದರ ಮೇಲೂ ಪ್ರಭಾವ ಬೀರಿಲ್ಲ. ನೀನು ಒಳ್ಳೆಯ ವ್ಯಕ್ತಿಯಾಗಿ ಬದುಕಬೇಕು ಎಂದು ನನ್ನ ಕುಟುಂಬ ಹೇಳಿದೆ. ಯಾರೋ ಒಬ್ಬರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದರೆ ನೀನು ಆ ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಪರವಾಗಿ ನಿಲ್ಲು ಎಂದು ಹೇಳಿಕೊಟ್ಟಿದ್ದಾರೆ. ನಾನು ಹಾಗೆಯೇ ಬೆಳೆದಿದ್ದೀನಿ'' ಎಂದ್ದಿದ್ದರು ಸಾಯಿ ಪಲ್ಲವಿ.

    English summary
    Actress Sai Pallavi Gives Clarification on Kashmiri Pandits Statement; Says Disturbing, Know More.
    Sunday, June 19, 2022, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X