For Quick Alerts
  ALLOW NOTIFICATIONS  
  For Daily Alerts

  ಕ್ರಿಸ್‌ಮಸ್ ಹಬ್ಬಕ್ಕೆ ಹೈದರಾಬಾದ್‌ ಮನೆ ಶೃಂಗಾರಗೊಳಿಸಿದ ಸಮಂತಾ

  |

  2020ನೇ ವರ್ಷ ಮುಗಿತಿದೆ. ಒಂದು ಕಡೆ ಹೊಸ ವರ್ಷದ ಸ್ವಾಗತಕ್ಕೆ ಜನರು ಸಿದ್ಧವಾಗುತ್ತಿದ್ದರೆ, ವರ್ಷದ ಕೊನೆಯ ಹಬ್ಬ ಕ್ರಿಸ್ ಮಸ್ ಆಚರಣೆಗೂ ಭಾರಿ ಸಿದ್ಧತೆ ನಡೆಯುತ್ತಿದೆ.

  ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada

  ಸೆಲೆಬ್ರಿಟಿಗಳ ಪೈಕಿ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕ್ರಿಸ್ ಮಸ್ ಆಚರಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಕ್ರೈಸ್ತ ಹಬ್ಬಕ್ಕಾಗಿ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸವನ್ನು ಶೃಂಗಾರಗೊಳಿಸುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  ಸಮಂತಾ ಅಕ್ಕಿನೇನಿ-ನಯನತಾರಾ ಸಿನಿಮಾದ ಚಿತ್ರೀಕರಣ ಆರಂಭ

  ಫೋಟೋ ಜೊತೆಗೆ ಎರಡು ವಿಡಿಯೋ ಸಹ ಹಂಚಿಕೊಂಡಿದ್ದು, ಅದರಲ್ಲಿ ಡ್ರಾಯಿಂಗ್ ಮಾಡುತ್ತಿರುವುದು, ಕಾರ್ಬನ್ ಶೀಟ್‌ನಲ್ಲಿ ಡಿಸೈನ್ ಮಾಡುತ್ತಿರುವುದು ನೋಡಬಹುದು. ಸಮಂತಾ ತಮ್ಮ ಮನೆಯಲ್ಲಿ ಈಗಾಗಲೇ ಕ್ರಿಸ್‌ಮಸ್ ಮರ ತಂದು ಇಟ್ಟಿದ್ದು, ಅದರ ಸುತ್ತಮುತ್ತ ಶೃಂಗಾರ ಮಾಡುತ್ತಿದ್ದಾರೆ.

  ಲಾಕ್‌ಡೌನ್ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಸಮಂತಾ ಮತ್ತು ನಾಗಚೈತನ್ಯ ಹಾಲಿಡೇ ಎಂಜಾಯ್ ಮಾಡಿದ್ದರು. ಮಾಲ್ಡೀವ್ಸ್‌ನಲ್ಲಿ ನಾಗ್ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದರು. ಈಗ ಹೈದರಾಬಾದ್‌ಗೆ ವಾಪಸ್ ಆಗಿರುವ ನಟಿ ಕ್ರಿಸ್‌ಮಸ್ ತಯಾರಿಯಲ್ಲಿದ್ದಾರೆ.

  ಸಮಂತಾ ಸಿನಿಮಾ...

  ಸಮಂತಾ, ನಯನತಾರಾ ಹಾಗೂ ವಿಜಯ್ ಸೇತುಪತಿ ನಟಿಸುತ್ತಿರುವ ಹೊಸ ಸಿನಿಮಾ ನಿನ್ನೆಯಷ್ಟೇ ಮುಹೂರ್ತ ಮಾಡಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಸಮಂತಾ ಕ್ರಿಸ್ ಮಸ್ ಮುಗಿದ ಮೇಲೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

  English summary
  South actress Samantha Akkineni decorates her home for christmas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X