Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಅಂತಹ ಆಲೋಚನೆಗಳಿಗೆ ಇದು ಸರಿಯಾದ ಸಮಯ": ಸಮಂತಾ ಎಮೋಷನಲ್ ಪೋಸ್ಟ್ ವೈರಲ್
ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಚಿಕಿತ್ಸೆ ಪಡೆದು ಹೋರಾಡುತ್ತಿದ್ದಾರೆ. ಹೊಸ ವರ್ಷ ಹತ್ತಿರ ಬರ್ತಿದ್ದಂತೆ ಸಮಂತಾ ಮಾಡಿರುವ ಟ್ವೀಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಯಾಮ್ ಮಾತುಗಳನ್ನು ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.
"ಕಿಸ್ಸಿಂಗ್
ಸೀನ್
ನಂತ್ರ
ಕ್ಯಾರವಾನ್ನಲ್ಲಿ
ಅತ್ತಿದ್ದೆ":
ಅಂಜಲಿ
ಹೇಳಿದ
ಆ
ನಟನ್ಯಾರು?
ಸಮಂತಾ ನಟಿಸಿದ 'ಯಶೋದ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಆಸ್ಪತ್ರೆ ಬೆಡ್ ಮೇಲೆ ಮಲಗಿ ಈ ಚಿತ್ರಕ್ಕೆ ಡಬ್ಬಿಂಗ್ ಕೂಡ ಮಾಡಿದ್ದರು. ನೋವಿನಲ್ಲೇ ಸಿನಿಮಾ ಪ್ರಚಾರ ಮಾಡಿದ್ದರು. ಸದ್ಯ ಸಮಂತಾ ನಟನೆಯ 'ಖುಷಿ' ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ. ಸಮಂತಾ ಚೇತರಿಸಿಕೊಂಡ ನಂತರ ಚಿತ್ರೀಕರಣ ಮತ್ತೆ ಶುರುವಾಗಲಿದೆ. ಹೊಸದಾಗಿ ಸ್ಯಾಮ್ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದು ಆಕೆಯ ಮ್ಯಾನೇಜರ್ ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ಆದಷ್ಟು ಬೇಗ ನೆಚ್ಚಿನ ನಟಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಹಳೇ ವರ್ಷಕ್ಕೆ ಬೈ ಹೇಳಿ ಹೊಸ ವರ್ಷವನ್ನು ವೆಲ್‌ಕಮ್ ಮಾಡಲು ಇಡೀ ಜಗತ್ತು ಸಜ್ಜಾಗಿದೆ. ಕೆಲ ಸೆಲೆಬ್ರೆಟಿಗಳು ವಿದೇಶದಲ್ಲಿ ಹೊಸ ವರ್ಷ ಸ್ವಾಗತಿಸಲು ನಿರ್ಧರಿಸಿ ಫ್ಯಾಮಿಲಿ ಜೊತೆ ಫೈಟ್ ಏರಿದ್ದಾರೆ. ಇಂತಹ ಹೊತ್ತಲ್ಲೇ ಸಮಂತಾ ಒಂದು ಪೋಸ್ಟ್ ಮಾಡಿದ್ದಾರೆ. ಪ್ರತಿ ವರ್ಷ ವಿಭಿನ್ನವಾಗಿ ಹೊಸ ವರ್ಷಾಚರಣೆ ಮಾಡುತ್ತಿದ್ದ ಸ್ಯಾಮ್ ಮಾತ್ರ ನೋವಿನಲ್ಲಿ ಇದ್ದಾರೆ. ಇಂತ ಹೊತ್ತಲ್ಲೇ ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫಿಲಾಸಫಿಕಲ್ ಮೆಸೇಜ್ ಪೋಸ್ಟ್ ಮಾಡಿದ್ದಾರೆ. ಒಳಗಿನ ನೋವನ್ನು ತಡೆದುಕೊಂಡು ಮೇಲೆ ನಗುತ್ತಿರುವಂತೆ ಸೆಲ್ಫಿ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ.
ಯಾವ
ರಶ್ಮಿಕಾ,
ಯಾವ
ಪೂಜಾ
ಹೆಗ್ಡೆ?
ಇಬ್ಬರಿಗಿಂತ
ಶ್ರೀಲೀಲಾ
ಗ್ರೇಟ್
ಎಂದ
ತೆಲುಗು
ಮಂದಿ!
"ಜವಾಬ್ದಾರಿಗಳನ್ನು ಮುಂದುವರಿಸಿಕೊಂಡು ಹೋಗಬೇಕು. ನಾವು ಏನು ಮಾಡಬಹುದೋ ಅದನ್ನು ನಿಯಂತ್ರಿಸಿ. ನಮಗೆ ಒಳ್ಳೆಯದು, ಸುಲಭವಾದದ್ದು ಎನಿಸುವ ರೆಸೊಲ್ಯೂಷನ್‌ಗಳನ್ನು ಆವಿಷ್ಕರಿಸಿ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಆ ದೇವರ ಕೃಪೆ ಇರುತ್ತದೆ. ಹೊಸ ವರ್ಷದ ಶುಭಾಶಯಗಳು 2023" ಎಂದು ಸಮಂತಾ ಬರೆದುಕೊಂಡಿದ್ದಾರೆ. ಬಹಳ ದಿನಗಳ ನಂತರ ಸಮಂತಾ ಕಾಣಿಸಿಕೊಂಡಿರುವುದನ್ನು ನೋಡಿ, ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಬೇಗ ಚೇತರಿಸಿಕೊಳ್ಳಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

2 ದಿನ ಮೊದಲೇ ಸಮಂತಾ ನ್ಯೂ ಇಯರ್ ವಿಶ್ ಮಾಡಿದ್ದು ನೋಡಿ, ಕೆಲವರು ಅಚ್ಚರಿಗೊಂಡಿದ್ದಾರೆ. ಹೊಸ ವರ್ಷದ ಸಮಯದಲ್ಲಿ ಆಕೆ ಸೋಶಿಯಲ್ ಮೀಡಿಯಾದಿಂದ ದೂರ ಇರಲು ನಿರ್ಧರಿಸಿದಂತಿದೆ. ಪ್ರಶಾಂತವಾಗಿ ಕಾಲ ಕಳೆಯಲು ಮನಸ್ಸು ಮಾಡಿದಂತಿದೆ. ಹಾಗಾಗಿ ಇಷ್ಟು ಬೇಗ ಶುಭಾಶಯ ಕೋರಿದ್ದಾರೆ ಎನ್ನುವುದು ಕೆಲವರ ವಾದ.