For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಶ್ವೇತಾ ಬಸು: ಪತಿಯ ಬಗ್ಗೆ ಹೇಳಿದ್ದೇನು?

  |

  ಬಹುಭಾಷ ನಟಿ ಶ್ವೇತಾ ಬಸು ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಮದುವೆಯಾಗಿ ಒಂದು ವರ್ಷದೊಳಗೆ ಶ್ವೇತಾ ಬಸು ಪತಿಯಿಂದ ಬೇರೆಯಾಗಿದ್ದಾರೆ. 2008ರಲ್ಲಿ 'ಕೊತ್ತ ಬಂಗಾರ ಲೋಕಂ' ಸಿನಿಮಾ ಮೂಲಕ ಸೌತ್ ಇಂಡಸ್ಟ್ರಿ ಪ್ರವೇಶ ಮಾಡಿದ, ನಂತರ ಖಾಸಗಿ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ.

  ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದ ನಟಿ ಶ್ವೇತಾ ಬಸು, ನಂತರ ಇದೆಲ್ಲವನ್ನು ಮರೆತು ಹೊಸ ಜೀವನ ಆರಂಭಿಸಿದ್ದರು. ಸಿನಿಮಾ, ಪ್ರೀತಿ, ಮದುವೆ ಎಂದು ಜೀವನ ಸಾಗಿಸುತ್ತಿದ್ದ ಶ್ವೇತಾ ಮದುವೆಯಾಗಿ ಒಂದು ವರ್ಷದೊಳಗೆ ಪತಿಯಿಂದ ದೂರ ಆಗಿದ್ದಾರೆ. ವಿಚ್ಛೇದನದ ಬಗ್ಗೆ ನಟಿ ಶ್ವೇತಾ ಮೊದಲ ಬಾರಿಗೆ ಮೌನ ಮುರಿದ್ದಾರೆ.

  ಶ್ವೇತಾ ಬಸು ದಾಂಪತ್ಯದಲ್ಲಿ ಬಿರುಗಾಳಿ: ಪತಿಗೆ ವಿಚ್ಛೇದನ ನೀಡಿದ ನಟಿ

  2018ರಲ್ಲಿ ರೋಹಿತ್ ಮಿತ್ತಲ್ ಜೊತೆ ಮದುವೆ

  2018ರಲ್ಲಿ ರೋಹಿತ್ ಮಿತ್ತಲ್ ಜೊತೆ ಮದುವೆ

  ಡಿಸೆಂಬರ್ 13, 2018 ರಂದು ನಿರ್ಮಾಪಕ ರೋಹಿತ್ ಮಿತ್ತಲ್ ಜೊತೆ ವಿವಾಹವಾಗಿದ್ದ ಶ್ವೇತಾ ಬಸು, ವರ್ಷ ತುಂಬುವುದರೊಳಗೆ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಪತಿಯೊಂದಿಗೆ ಬೇರೆಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದರು. ''ರೋಹಿತ್ ಮಿತ್ತಲ್ ಮತ್ತು ನಾನು ಸ್ವತಂ ನಿರ್ಧಾರದಿಂದ ಪರಸ್ಪರ ಒಪ್ಪಿಗೆಯಿಂದ ದೂರವಾಗುತ್ತಿದ್ದೇವೆ. ಕೆಲವು ತಿಂಗಳ ಹಿಂದೆಯಷ್ಟೇ ನಾವಿಬ್ಬರು ಒಮ್ಮತದಿಂದ ದೂರವಾಗಲು ನಿರ್ಧರಿಸಿದ್ವಿ'' ಎಂದು ಶ್ವೇತಾ ಮಾಡಿರುವ ಫೋಸ್ಟ್ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು.

  ಬ್ರೇಕ್ ಅಪ್ ಬಗ್ಗೆ ಶ್ವೇತಾ ಹೇಳಿದ್ದೇನು?

  ಬ್ರೇಕ್ ಅಪ್ ಬಗ್ಗೆ ಶ್ವೇತಾ ಹೇಳಿದ್ದೇನು?

  ಖಾಸಗಿ ಫೋರ್ಟಲ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಶ್ವೇತಾ "ನಾವಿಬ್ಬರು ಕಾನೂನು ಬದ್ಧವಾಗಿ ಪ್ರತ್ಯೇಕವಾಗುತ್ತಿದ್ದೀವಿ. ವಿಚ್ಛೇದನದ ನಂತರವು ಇಬ್ಬರು ಸ್ನೇಹ ಮತ್ತು ಸೌಹಾರ್ದಯುತವಾಗಿ ಇರುತ್ತೇವೆ. ನನ್ನ ವೃತ್ತಿ ಜೀವನವನ್ನು ತುಂಬ ಬೆಬಲಿಸುತ್ತಾರೆ. ನಿರ್ಮಾಪಕರಾಗಿ ಅವರ ಕೆಲಸಕ್ಕೆ ನಾನು ದೊಡ್ಡ ಫ್ಯಾನ್. ಒಂದು ದಿನ ಅವರ ಜೊತೆ ಕೆಲಸ ಮಾಡುವ ಬರವಸೆ ಹೊಂದಿದ್ದೀನಿ" ಎಂದು ಪತಿಯನ್ನು ಹಾಡಿ ಹೊಗಳಿದ್ದಾರೆ.

  ಫ್ಲ್ಯಾಶ್ ಬ್ಯಾಕ್ 2019: ಸಂಬಂಧ ಮುರಿದುಕೊಂಡು ದೂರಾದ ತಾರೆಯರು

  'ವಿಚ್ಛೇದನದ ನಂತರವು ಸ್ನೇಹಿತರಾಗಿ ಇರುತ್ತೇವೆ'

  'ವಿಚ್ಛೇದನದ ನಂತರವು ಸ್ನೇಹಿತರಾಗಿ ಇರುತ್ತೇವೆ'

  ಶ್ವೇತಾ ಬಸು ಮತ್ತು ರೋಹಿತ್ ಮಿತ್ತಲ್ ಅವರು ಕಳೆದ ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೀಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದಾಂಪತ್ಯ ಸಂಬಂಧವನ್ನು ಕೊನೆಗಾಣಿಸಿ, ಇಬ್ಬರು ಉತ್ತಮ ಸ್ನೇಹಿತರಾಗಿ ಇರಲು ನಿರ್ಧರಿಸಿದ್ದಾರಂತೆ.

  ಸಿನಿಮಾ ಜೀವನದ ಬಗ್ಗೆ ಗಮನ ಹರಿಸುವೆ

  ಸಿನಿಮಾ ಜೀವನದ ಬಗ್ಗೆ ಗಮನ ಹರಿಸುವೆ

  ಶ್ವೇತಾ ಬಸು ಕೈಯಲ್ಲಿ ಸಾಕಷ್ಟು ಪ್ರೊಜೆಕ್ಟ್ ಗಳಿವೆಯಂತೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲಿಯೂ ಬ್ಯುಸಿಯಾಗಿದ್ದಾರೆ. ಈಗಾಗಲೆ ಎರಡು ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತಾ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಜೊತೆ ನೆಟ್ ಫ್ಲೆಕ್ಸ್ ಸೀರಿಸ್ ನಲ್ಲಿ ಅಭಿನಯಿಸುತ್ತಿದ್ದಾರೆ.

  ಅರ್ಜುನ್ ರಾಂಪಾಲ್-ಮೆಹರ್ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ: ಮಕ್ಕಳ ಸುಪರ್ದಿ ತಾಯಿಗೆ

  ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಶ್ವೇತಾ

  ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಶ್ವೇತಾ

  ಬಾಲನಟಿಯಾಗಿ ಗಮನ ಸೆಳೆದಿದ್ದ ನಟಿ ಶ್ವೇತಾ ಪ್ರಸಾದ್ ಮಕ್ಡಿ, ಇಕ್ಬಾಲ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮಕ್ಡಿ ಚಿತ್ರದ ಚುನ್ನಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿದ್ದರು. ನಂತರ ಡರ್ನಾ ಜರೂರಿ ಹೈ(ಹಿಂದಿ), ಕೊತ್ತ ಬಂಗಾರು ಲೋಕಂ(ತೆಲುಗು), ಎಕ್ ನದೀರ್ ಗೊಲ್ಪೋ(ಬೆಂಗಾಳಿ) ಚಿತ್ರಗಳಲ್ಲಿ ನಟಿಸಿದ್ದರು. ಕೊನೆಯದಾಗಿ 'ದಿ ತಾಷ್ಕೆಂಟ್ ಫೈಲ್ಸ್' ಚಿತ್ರದಲ್ಲಿ ಶ್ವೇತಾ ನಟಿಸಿದ್ದರು.

  English summary
  Famous Actress Shweta Basu Prasad divorced husband rohit mittal. She is break silence after divorce her husband rohit mittal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X