For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 21ಕ್ಕೆ ಪ್ರಮುಖ ಘೋಷಣೆ ಮಾಡಲಿದೆ 'ಆದಿಪುರುಷ್' ಚಿತ್ರತಂಡ?

  |

  ನಟ ಪ್ರಭಾಸ್ ಅಭಿನಯಿಸುತ್ತಿರುವ ಆದಿಪುರುಷ್ ಚಿತ್ರದ ಪ್ರಮುಖ ಕಲಾವಿದರ ಆಯ್ಕೆ ಮುಗಿದಿದೆ. ಚಿತ್ರೀಕರಣ ಸಹ ಆರಂಭವಾಗಿದೆ. ಅದಾಗಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆ ಮಾಡಲಾಗಿದೆ.

  ಇದೀಗ, ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಆದಿಪುರುಷ್ ಚಿತ್ರತಂಡ ಪ್ರಮುಖ ಘೋಷಣೆಯೊಂದನ್ನು ಮಾಡಲಿದೆ ಎಂಬ ವಿಚಾರ ಹೊರಬಿದ್ದಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಮತ್ತು ಸಲಾರ್ ಚಿತ್ರಗಳ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ.

  ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್

  ಆದಿಪುರುಷ್ ಚಿತ್ರತಂಡದಿಂದ ಯಾವ ವಿಚಾರ ಹೊರಬೀಳಲಿದೆ ಎಂಬ ಕುತೂಹಲ ಪ್ರಭಾಸ್ ಅಭಿಮಾನಿಗಳನ್ನು ಕಾಡ್ತಿದೆ. ಸದ್ಯದ ನಿರೀಕ್ಷೆ ಪ್ರಕಾರ ಪ್ರಭಾಸ್ ಅವರ ಫಸ್ಟ್ ಲುಕ್ ಪೋಸ್ಟರ್ ದಿನಾಂಕ ಹೇಳಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

  'ಆದಿಪುರುಷ್' ಸಿನಿಮಾ ರಾಮಾಯಣ ಆಧರಿಸಿ ತಯಾರಾಗುತ್ತಿರುವ ಚಿತ್ರ. ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನವಮಿ ಹಿನ್ನೆಲೆ ಪ್ರಭಾಸ್ ಫಸ್ಟ್ ಲುಕ್ ಬಿಡುಗಡೆಯ ದಿನಾಂಕ ತಿಳಿಸಬಹುದು ಎಂಬ ನಿರೀಕ್ಷೆಯೇ ಹೆಚ್ಚಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಏಪ್ರಿಲ್ 21ರ ಬೆಳಗ್ಗೆ 7 ಗಂಟೆಗೆ ಆದಿಪುರುಷ್ ಸಿನಿಮಾದಿಂದ ಅಪ್‌ಡೇಟ್ ಸಿಗಲಿದೆ.

  ಓಂ ರಾವತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕೃತಿ ಸನೂನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರ ನಿರ್ವಹಿಸಲಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನಾಗಿ ಬಣ್ಣ ಹಚ್ಚಲಿದ್ದಾರೆ.

  ತಾಯಿಯನ್ನು ಉಳಿಸಿಕೊಟ್ಟ Salman Khan ರನ್ನು ದೇವರೆಂದ Rakhi Sawant | Filmibeat Kannada

  ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಆದಿಪುರುಷ್ ಸಿನಿಮಾ ಬಿಡುಗಡೆಯಾಗಲಿದ್ದು, 2022ರ ಆಗಸ್ಟ್ 11ಕ್ಕೆ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ. ಸುಮಾರು 400 ಕೋಟಿ ಬಜೆಟ್‌ನಲ್ಲಿ ಈ ಪ್ರಾಜೆಕ್ಟ್ ತಯಾರಾಗುತ್ತಿದ್ದು, ವಿಎಫ್‌ಎಕ್ಸ್ ಕೆಲಸಕ್ಕೆ ಹೆಚ್ಚು ಬಂಡವಾಳ ಹಾಕಲಾಗಿದೆ.

  English summary
  Prabhas and Kriti sanon starrer Adipurush Team will Announce Massive Update on april 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X