For Quick Alerts
  ALLOW NOTIFICATIONS  
  For Daily Alerts

  'ಕಾರ್ತಿಕೇಯ 2' ಯಶಸ್ಸಿನ ಬಳಿಕ 'ಕಾರ್ತಿಕೇಯ 3' ಸೆಟ್ಟೇರುತ್ತಾ? ಟಾಲಿವುಡ್‌ನಲ್ಲೇನಿದು ಟಾಕ್?

  |

  'ಪುಷ್ಪ' ಬಳಿಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅಚ್ಚರಿ ಮೂಡಿಸಿದ ಸಿನಿಮಾ 'ಕಾರ್ತಿಕೇಯ 2'. ಈ ಸಿನಿಮಾ ರಿಲೀಸ್ ಆದಾಗ, ಈ ಮಟ್ಟಕ್ಕೆ ಸಕ್ಸಸ್ ಕಾಣಬಹುದು ಅನ್ನೋದು ಬಹುಶ: ಸಿನಿಮಾ ತಂಡಕ್ಕೆ ಗೊತ್ತಿರಲಿಲ್ಲವೇನೋ? ಆದರೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅಚ್ಚರಿಯೆಂಬಂತೆ ದಾಖಲೆ ಬರೆದಿತ್ತು.

  ಸೋಲುಗಳಿಂದ ಕಂಗೆಟ್ಟಿದ್ದ ಟಾಲಿವುಡ್‌ನ ನಟ ನಿಖಿಲ್ ಸಿದ್ಧಾರ್ಥ್‌ಗೆ 'ಕಾರ್ತಿಕೇಯ 2' ಮರುಜೀವ ಕೊಟ್ಟಿದೆ. ಸಿನಿಮಾ ಬಿಡುಗಡೆಯಾದಾಗ ಆ ಮಟ್ಟಿಗೆ ಕ್ರೇಜ್ ಇರಲಿಲ್ಲ. ಆದರೆ ನಿಧಾನವಾಗಿ ಸಿನಿಮಾ ನೋಡುವುದಕ್ಕೆ ಜನರು ಬರಲಾರಂಭಿಸಿದ್ರು. ಬಳಿಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದೊಡ್ಡ ಚಮತ್ಕಾರವೇ ನಡೆದು ಹೋಯ್ತು. ಈ ಯಶಸ್ಸಿನ ಬೆನ್ನಲ್ಲೇ ಪಾರ್ಟ್ 3ಗೆ ತಂಡ ಸಜ್ಜಾಗುತ್ತಿದೆ ಎನ್ನಲಾಗಿದೆ.

  "ನಮ್ಮ ಚಿತ್ರಗಳಿಗೆ ಆಸ್ಕರ್ ಸರ್ಟಿಫಿಕೇಟ್ ಬೇಕಾಗಿಲ್ಲ": ನಿಖಿಲ್ ಶಾಕಿಂಗ್ ಹೇಳಿಕೆ

  'ಕಾರ್ತಿಕೇಯ 3'ಗೆ ಸಜ್ಜಾಗುತ್ತಿದೆ ವೇದಿಕೆ

  ಚಂದೂ ಮಂದೆಟ್ಟಿ ನಿರ್ದೇಶಿಸಿದ ಸಿನಿಮಾಗೆ ದೇಶದೆಲ್ಲೆಡೆ ಮೆಚ್ಚಿಗೆ ವ್ಯಕ್ತವಾಗಿತ್ತು. 'ಕಾರ್ತಿಕೇಯ 2' ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಅಂತ ಸಾಬೀತಾದ ಮೇಲೆ ಇಡೀ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾದ ಕಥೆ ಹಾಗೂ ಮೇಕಿಂಗ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

  ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿರ್ದೇಶಕರು 'ಕಾರ್ತಿಕೇಯ 3' ಸಿನಿಮಾಗೆ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. 'ಕಾರ್ತಿಕೇಯ 3' ಸಿನಿಮಾ ಮಾಡಬಹುದಾದ ಎಲ್ಲಾ ಸಾಧ್ಯಗಳು ಕೂಡ ಇವೆ ಎಂದು ಹೇಳಲಾಗುತ್ತಿದೆ.

  ನಿಖಿಲ್ ಸಿದ್ಧಾರ್ಥ್ ಹೇಳಿದ್ದೇನು?

  'ಕಾರ್ತಿಕೇಯ 2' ಸಿನಿಮಾ ಸೂಪರ್‌ ಸಕ್ಸಸ್ ಬಳಿಕ ನಿಖಿಲ್ ಸಿದ್ಧಾರ್ಥ್ ಸಂದರ್ಶನವನ್ನು ನೀಡಿದ್ದರು. ಈ ವೇಳೆ "ಕಾರ್ತಿಕೇಯ 2 ಸಕ್ಸಸ್ ಬಳಿಕ ಇಡೀ ಚಿತ್ರತಂಡ ಈ ಪ್ರಾಜೆಕ್ಟ್ ಅನ್ನು ಮುಂದುವರೆಸೋ ಉತ್ಸಾಹದಲ್ಲಿದ್ದಾರೆ. ಸಿನಿಮಾದ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕವರ್ಗವನ್ನು ದೊಡ್ಡದು ಮಾಡುವ ಆಲೋಚನೆಯಲ್ಲಿದ್ದಾರೆ." ಎಂದು ಹೇಳಿದ್ದರು.

  'ಕಾರ್ತಿಕೇಯ 2' ಸಿನಿಮಾ ಸಕ್ಸಸ್ ಸರ್ಪ್ರೈಸ್ ಆಗಿತ್ತು. ಆದರೆ, ಪಾರ್ಟ್ 3 ಮಾಡುವಾಗ ಸಿನಿಮಾದ ಬಗ್ಗೆ ಜವಾಬ್ದಾರಿ ಹೆಚ್ಚಾಗಿದ್ದು, ಕಥೆ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ.

  After Nikhil Siddharth Starrer Karthikeya 2 Success Karthikeya 3 On Cards

  3ಡಿಯಲ್ಲಿ 'ಕಾರ್ತಿಕೇಯ 3

  ಇನ್ನೊಂದು ವಿಶೇಷ ಅಂದರೆ, 'ಕಾರ್ತಿಕೇಯ 3' 3ಡಿಯಲ್ಲಿರುತ್ತೆ ಎಂದು ನಟ ನಿಖಿಲ್ ಸಿದ್ಧಾರ್ಥ್ ಸುಳಿವು ನೀಡಿದ್ದಾರೆ. ಮಾಹಿತಿ ಪ್ರಕಾರ, ಪಾರ್ಟ್ 3ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ಶುರು ಮಾಡಿದ್ದಾರೆ ಎನ್ನಲಾಗಿದೆ.

  'ಕಾರ್ತಿಕೇಯ 2' ಸಿನಿಮಾ ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡಿದೆ. ಇದೇ ಜೋಷ್‌ನಲ್ಲಿ ಕೇರಳದಲ್ಲಿ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ ಅಂತ ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

  English summary
  After Nikhil Siddharth Starrer Karthikeya 2 Success Karthikeya 3 On Cards, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X