For Quick Alerts
    ALLOW NOTIFICATIONS  
    For Daily Alerts

    RRR ಯಶಸ್ಸಿನ ಬಳಿಕ ಹೊಸ ಕಾರು ಖರೀದಿಸಿದ ರಾಜಮೌಳಿ: ಮಾಡಲ್ ಯಾವುದು? ಬೆಲೆಯೆಷ್ಟು?

    |

    ರಾಜಮೌಳಿ ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಟಾಲಿವುಡ್ ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ನಿರ್ದೇಶಕ. ಬಾಹುಬಲಿ, RRR ಅಂತ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿವೆ. ರಾಜಮೌಳಿ ತಾನೇ ನಿರ್ದೇಶಿಸಿದ 'ಬಾಹುಬಲಿ 2' ಸಿನಿಮಾದ ದಾಖಲೆಯನ್ನು RRR ಮುರಿಯಲು ಸಾಧ್ಯವಾಗಿಲ್ಲ. ಆದರೂ, 1100 ಕೋಟಿ ಕಲೆಕ್ಷನ್ ಮೂಲಕ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದಾರೆ.

    RRR ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ರಾಜಮೌಳಿ ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಜಮೌಳಿ ಹೊಸ ಕಾರಿನ ಫೋಟೊ ಹರಿದಾಡುತ್ತಿದ್ದು, ವೈರಲ್ ಆಗಿದೆ. ಸೂಪರ್‌ಸ್ಟಾರ್‌ಗಳಿಗಿಂತಲೂ ದೊಡ್ಡ ಸಂಭಾವನೆ ಪಡೆಯುವ ರಾಜಮೌಳಿ ಪಡೆಯುವ ಕಾರು ಯಾವುದು? ಆ ಕಾರಿನ ಬೆಲೆ ಎಷ್ಟು? ಎಂಬ ವಿಷಯಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.

    ರಾಜಮೌಳಿ ಖರೀದಿಸಿದ ಕಾರಿನ ಬೆಲೆ ಎಷ್ಟು?

    ರಾಜಮೌಳಿ ಅದೆಷ್ಟೊ ದೊಡ್ಡ ಸಂಭಾವನೆ ಪಡೆದರೂ, ಸುಖಾಸುಮ್ಮನೆ ದುಂದುವೆಚ್ಚ ಮಾಡಿದ್ದು ಯಾರೂ ಕಂಡಿಲ್ಲ. ಆದರೆ, RRR ಸಿನಿಮಾ ಬಳಿಕ ಮತ್ತೊಂದು ದುಬಾರಿ ಕಾರೊಂದನ್ನು ರಾಜಮೌಳಿ ಖರೀದಿ ಮಾಡಿದ್ದಾರೆ. ಜಕ್ಕಣ್ಣ ಖರೀದಿ ಮಾಡಿದ ಕಾರಿನ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

    RRR ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ರಾಜಮೌಳಿ ವೋಲ್ವೋ ಎಕ್ಸ್‌ಸಿ 40 ಕಾರನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ ಸರಿ ಸುಮಾರು 44 ಲಕ್ಷದ 50 ರೂಪಾಯಿ ಎಂದು ಹೇಳಲಾಗುತ್ತಿದೆ. ಕೆಂಪು ಬಣ್ಣದ ಹೊಸ ಕಾರಿನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಜಮೌಳಿ ಮನಸ್ಸು ಮಾಡಿದ್ದರೆ ಇದಕ್ಕಿಂತ ದುಬಾರಿ ಬೆಲೆಯ ಕಾರನ್ನು ಖರೀದಿ ಮಾಡಬಹುದಿತ್ತು. ಆದರೆ, ರಾಜಮೌಳಿ ಕಾರುಗಳಿ ಕೋಟಿಗಟ್ಟಲೆ ಹಣ ವೆಚ್ಚ ಮಾಡಲು ಇಷ್ಟ ಪಟ್ಟಿಲ್ಲ.

    ರಾಜಮೌಳಿ ಹೊಸ ಕಾರಿನ ವಿಶೇಷತೆಯೇನು?

    ರಾಜಮೌಳಿ ಖರೀದಿಸಿದ ಹೊಸ ಕಾರಿನ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಫ್ಯೂಷನ್ ರೆಡ್ ಕಾರಿನ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ವೋಲ್ವೋ ಎಕ್ಸ್‌ಸಿ 40 ಕಾರಿನಲ್ಲಿ ಅತ್ಯದ್ಬುತವಾದ ಫೀಚರ್‌ಗಳಿವೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮ್ಯಾಟ್ ಕಂಟ್ರೋಲಿಂಗ್ ಸಿಸ್ಟಮ್ ಇದೆ. ಸನ್ ರೂಫ್ ಇದೆ. ವೈಯರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಇನ್ನೂ ಹಲವು ಫೀಚರ್ ಈ ಕಾರಿನಲ್ಲಿ ಇವೆ.

    After RRR Blockbuster SS Rajamouli Brought New Car, Model And Price Details

    ವೋಲ್ವೋ ಕಂಪನಿ ರಾಜಮೌಳಿ ಹೊಸ ಕಾರನ್ನು ನೀಡಿದ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದೆ. ಈ ಫೋಟೊ ವೈರಲ್ ಆಗುತ್ತಿದ್ದಂತೆ ರಾಜಮೌಳಿ ನೆಟ್ಟಿಗರು ಶುಭಕೋರುತ್ತಿದ್ದಾರೆ. ಇನ್ನೊಂದು ಕಡೆ ರಾಜಮೌಳಿ RRR ಸಿನಿಮಾದ ಬಳಿಕ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಬಜೆಟ್ 800 ಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಈ ಮೋಸ್ಟ್ ಎಕ್ಸ್‌ಪೆಕ್ಟಡ್ ಜೋಡಿಯ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೆ ಎಂದು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

    English summary
    After RRR Blockbuster SS Rajamouli Brought New Car, Model And Cost Details, Know More,
    Saturday, April 23, 2022, 21:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X