For Quick Alerts
  ALLOW NOTIFICATIONS  
  For Daily Alerts

  'RRR 2' ಸೆಟ್ಟೇರೋದು ಕನ್ಫರ್ಮ್ ಎಂದ ರಾಜಮೌಳಿ: ಮಹೇಶ್ ಬಾಬು ಸಿನಿಮಾ ಕಥೆಯೇನು?

  |

  RRR ಸಿನಿಮಾ ಗ್ರ್ಯಾಂಡ್ ಸಕಸ್ಸ್ ಆಗಿರೋದು ಗೊತ್ತಿರೋ ವಿಷಯವೇ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಹಾಗೇ ಓಟಿಟಿಯಲ್ಲಿ ತೆರೆಕಂಡ ಬಳಿಕ ಸಿನಿಮಾ ವಿದೇಶಿಗರಿಗೂ ಇಷ್ಟ ಆಗಿತ್ತು. ಹೀಗಾಗಿ RRR ಸೀಕ್ವೆಲ್ ಮಾಡೋಕೆ ರಾಜಮೌಳಿ ನಿರ್ಧರಿಸಿದ್ದಾರೆ.

  ಸದ್ಯ ರಾಜಮೌಳಿ RRR ಸಿನಿಮಾವನ್ನು ದೇಶದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಜೂ.ಎನ್‌ಟಿಆರ್‌, ರಾಮ್‌ ಚರಣ್ ಜೊತೆ ರಾಜಮೌಳಿ RRR ಸಿನಿಮಾವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಿದ್ದರು. ಅದಲ್ಲೂ ಈ ಮೂವರು ಭರ್ಜರಿ ಪ್ರಚಾರ ಮಾಡಿದ್ದಾರೆ.

  ಜಪಾನ್‌ನಲ್ಲಿ RRR ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ದಾಖಲೆ ಅಳಿಸಿ ಹಾಕುತ್ತಾ?ಜಪಾನ್‌ನಲ್ಲಿ RRR ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ದಾಖಲೆ ಅಳಿಸಿ ಹಾಕುತ್ತಾ?

  ಈಗ ರಾಜಮೌಳಿ ಸದ್ಯ ಅಮರಿಕದ ಚಿಕಾಗೋದಲ್ಲಿ ಇದ್ದಾರೆ. RRR ಸಿನಿಮಾಗೆ ಸಂಬಂಧ ಪಟ್ಟ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಇದೇ ವೇಳೆ ರಾಜಮೌಳಿ ಸಿನಿಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್ ಕೊಟ್ಟಿದ್ದು, RRR ಸೀಕ್ವೆಲ್ ಬರುತ್ತೆ ಅನ್ನೋದನ್ನು ಕನ್ಫರ್ಮ್ ಮಾಡಿದ್ದಾರೆ.

  RRR 2 ಸೆಟ್ಟೇರುವುದು ಕನ್ಫರ್ಮ್

  RRR 2 ಸೆಟ್ಟೇರುವುದು ಕನ್ಫರ್ಮ್

  'ಬಾಹುಬಲಿ 2' ಮೆಗಾಬ್ಲಾಕ್‌ ಬಸ್ಟರ್ ಸಿನಿಮಾ ನೀಡಿದ ಬಳಿಕ ರಾಜಮೌಳಿಯ RRR ಸಿನಿಮಾ ಬಗ್ಗೆ ಕುತೂಹಲ ಮೂಡಿತ್ತು. ನಿರೀಕ್ಷೆಯಂತೆ RRR ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 1150 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಮತ್ತೆ ವಿಶ್ವದ ಗಮನ ಸೆಳೆದಿತ್ತು. ಈ ಸಿನಿಮಾ ಕೇವಲ ಭಾರತೀಯರಿಗಷ್ಟೇ ಅಲ್ಲ. ವಿದೇಶಿಗರಿಗೂ ಸಿಕ್ಕಾಪಟ್ಟೆ ಇಷ್ಟ ಆಗುತ್ತಿತ್ತು. ಓಟಿಟಿಯಲ್ಲಿ ತೆರೆಕಂಡ ಬಳಿಕ RRR ಕ್ರೇಜ್ ದುಪ್ಪಟ್ಟಗಾಗಿತ್ತು. ಈ ಬೆನ್ನಲ್ಲೇ 'RRR ಪಾರ್ಟ್ 2' ಬರೋದನ್ನು ಸ್ವತ: ಜಕ್ಕಣ್ಣನೇ ಕನ್ಫರ್ಮ್ ಮಾಡಿದ್ದಾರೆ.

  'RRR 2' ಬಗ್ಗೆ ರಾಜಮೌಳಿ ಹೇಳಿದ್ದೇನು?

  'RRR 2' ಬಗ್ಗೆ ರಾಜಮೌಳಿ ಹೇಳಿದ್ದೇನು?

  ರಾಜಮೌಳಿ RRR ಸಿನಿಮಾ ಪ್ರಚಾರವನ್ನು ಇನ್ನೂ ನಿಲ್ಲಿಸಿಲ್ಲ. ಕೆಲವೆಡೆ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದರಿಂದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರಾಜಮೌಳಿ ಅಮೆರಿಕಾದ ಚಿಕಾಗೋಗೆ ತೆರಳಿದ್ದರು. ಈ ವೇಳೆ ರಾಜಮೌಳಿ ಅಲ್ಲಿನ ಫ್ಯಾನ್ಸ್ ಹಾಗೂ ಮಾಧ್ಯಮಗಳ ಮುಂದೆ 'RRR 2' ಬರುತ್ತೆ ಅಂತ ಕನ್ಫರ್ಮ್ ಮಾಡಿದ್ದಾರೆ. "ನನ್ನ ತಂದೆ ವಿಜಯೇಂದ್ರ ಪ್ರಸಾದ್ ನನ್ನೆಲ್ಲಾ ಸಿನಿಮಾಗೆ ಕಥೆಗಾರರಾಗಿ ಕೆಲಸ ಮಾಡುತ್ತಾರೆ. ಸದ್ಯ ಅವರು ಕೆಲವು ಐಡಿಯಾಗಳನ್ನು ಇಟ್ಟಿಕೊಂಡು ಕಥೆ ಹೆಣೆಯುತ್ತಿದ್ದಾರೆ. ಹೌದು. ನಾನು ಸೀಕ್ವೆಲ್ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ." ಎಂದು ರಾಜಮೌಳಿ RRR 2 ಬರುವುದು ಖಚಿತವೆಂದಿದ್ದಾರೆ. ಆದ್ರೀಗ ಮಹೇಶ್ ಬಾಬು ಜೊತೆ ಸಿನಿಮಾ ಮಾಡಬೇಕಿದೆ. ಆದಾದ ಬಳಿಕ RRR 2 ಆರಂಭ ಆಗಬಹುದು ಅಲ್ಲಿಗೆ RRR 2 ನೋಡಲು ಇನ್ನೂ ಐದಾರು ವರ್ಷ ಕಾಯಬೇಕಾಗಬಹುದು.

  RRR ವಿದೇಶಿಗರೂ ಮೆಚ್ಚಿದ ಸಿನಿಮಾ

  RRR ವಿದೇಶಿಗರೂ ಮೆಚ್ಚಿದ ಸಿನಿಮಾ

  RRR ಸಿನಿಮಾ ಬಿಡುಗಡೆ ವೇಳೆ ರಾಜಮೌಳಿ ಸೀಕ್ವೆಲ್ ಬಗ್ಗೆ ಚರ್ಚೆ ಮಾಡಿರಲಿಲ್ಲ. RRR ಬಾಕ್ಸಾಫೀಸ್‌ನಲ್ಲಿ 'ಬಾಹುಬಲಿ 2' ರೇಂಜ್‌ನಷ್ಟು ಕಲೆಕ್ಷನ್ ಮಾಡದೆ ಇರೋದ್ರಿಂದ ಸೀಕ್ವೆಲ್ ಬಗ್ಗೆ ಯೋಚಿಸಿರಲಿಲ್ಲ. ಆದರೆ, ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ತೆರೆಕಂಡ ಬಳಿಕ ವಿದೇಶಿಗರು ಮೆಚ್ಚಿಕೊಂಡಾಡಿದ್ದರು. ಹಾಲಿವುಡ್‌ ಸಿನಿಮಾ ಮಂದಿ ಕೂಡ RRR ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ಆಸ್ಕರ್‌ಗೆ ಎಂಟ್ರಿ ಕೊಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ, ಆಸ್ಕರ್‌ಗೆ ಗುಜರಾತಿ ಸಿನಿಮಾ ಭಾರತದ ಅಧಿಕೃತ ಎಂಟ್ರಿಯಾಗಿದೆ. ಹೀಗಿದ್ದರೂ, RRR ಆಸ್ಕರ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದೆ.

  ಜಪಾನ್‌ನಲ್ಲಿ RRR ದರ್ಬಾರ್

  ಜಪಾನ್‌ನಲ್ಲಿ RRR ದರ್ಬಾರ್

  RRR ಸಿನಿಮಾ ಇತ್ತೀಚೆಗೆ ಜಪಾನ್‌ನಲ್ಲಿ ರಿಲೀಸ್ ಮಾಡಲಾಗಿದೆ. ಸಿನಿಮಾ ಬಿಡುಗಡೆಯಾಗಿ ಸುಮಾರು 23 ದಿನಗಳಾಗಿವೆ. ಮೂಲಗಳ ಪ್ರಕಾರ, RRR ಜಪಾನ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 21 ದಿನಗಳಲ್ಲಿ ಸುಮಾರು 11 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದ್ದು, 30 ಕೋಟಿ ರೂ. ಕಲೆ ಹಾಕುವ ನಿರೀಕ್ಷೆಯಿದೆ. 21 ದಿನದ ಗಳಿಕ ಮೊದಲ ದಿನ ಗಳಿಕೆಗಿಂತ ಅಧಿಕ ಎಂದು RRR ತಂಡ ಟ್ವೀಟ್ ಕೂಡ ಮಾಡಿದೆ.

  English summary
  After RRR Success Vijayendra Prasad Writing Story For Sequel Confirms Rajamouli, Know More.
  Sunday, November 13, 2022, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X