Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
RRR ಪೋಸ್ಟ್‌ಪೋನ್ ಆಗಿದ್ದೇ ಆಗಿದ್ದು, ಸಂಕ್ರಾಂತಿ ಅಖಾಡಕ್ಕಿಳಿದ 8 ತೆಲುಗು ಸಿನಿಮಾಗಳು
ಕೊರೊನಾ ಆರಂಭ ಆದಲ್ಲಿಂದ ಭಾರತೀಯ ಚಿತ್ರರಂಗ ಇಡೀ ನಷ್ಟದಲ್ಲಿ ಮುಳುಗಿ ಹೋಗಿದೆ. ಒಂದೂವರೆ ವರ್ಷ ಸೂಪರ್‌ಸ್ಟಾರ್ ಸಿನಿಮಾಗಳು ಬಿಡುಗಡೆ ಮಾಡುವ ಗೋಜಿಗೆ ಹೋಗಿರಲಿಲ್ಲ. ಆದರೆ, 2021 ಸೆಪ್ಟೆಂಬರ್ ಬಳಿಕ ಚಿತ್ರರಂಗ ಕೊಂಚ ನಿರಾಳವಾಗಿತ್ತು. ಅದರಲ್ಲೂ ತೆಲುಗು ಚಿತ್ರರಂಗ ದೊಡ್ಡ ಧೈರ್ಯ ಮಾಡಿ ಸಿನಿಮಾ ಬಿಡುಗಡೆಗೆ ಮುಂದಾಗಿತ್ತು. ಕಳೆದ ವರ್ಷ 'ಕ್ರ್ಯಾಕ್', 'ಉಪ್ಪೇನಾ', 'ಜಾತಿ ರತ್ನಲು', 'ಅಖಂಡಾ' , 'ಪುಷ್ಪ' ಸಿನಿಮಾಗಳು ತೆಲುಗು ಬಾಕ್ಸಾಪೀಸ್ ಅನ್ನು ಚಿಂದಿ ಉಡಾಯಿಸಿವೆ.
ಇದೇ ಜೋಷ್‌ನಲ್ಲಿ ಟಾಲಿವುಡ್ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಸಜ್ಜಾಗಿ ನಿಂತಿದ್ದವು. ಆದರೆ, ಓಮಿಕ್ರಾನ್ ಹಾವಳಿಯಿಂದ ಮತ್ತೆ ಆತಂಕದ ವಾತಾವರಣ ಎದುರಾಗಿದೆ. ದುಬಾರಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿವೆ. ಇನ್ನೊಂದು ಕಡೆ ದೆಹಲಿಯಲ್ಲಿ ಚಿತ್ರ ಮಂದಿರಗಳು ಬಂದ್ ಆಗಿವೆ. ಮುಂಬೈನಲ್ಲಿ ಚಿತ್ರಮಂದಿರಕ್ಕೆ ಶೇ. 50ರಷ್ಟು ಎಂಟ್ರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಶ್ಚಿಮ ಬಂಗಾಳ ಕೂಡ 50 ಪರ್ಸೆಂಟ್ ಆದೇಶ ಹೊರಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ರಾಜಮೌಳಿ ತಮ್ಮ RRR ಸಿನಿಮಾದ ಬಿಡುಗಡೆಯನ್ನು ಮುಂದೂಡಿದ್ದಾರೆ. ಹೀಗಾಗಿ ಪ್ರಭಾಸ್ 'ರಾಧೆ ಶ್ಯಾಮ್' ಜೊತೆ ಸಣ್ಣ ಬಜೆಟ್ ಹಾಗೂ ಮಧ್ಯಮ ಬಜೆಟ್ 8 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಆ ಸಿನಿಮಾಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.

ರಚಿತಾ ರಾಮ್ 'ಸೂಪರ್ ಮಚ್ಚಿ' ರಿಲೀಸ್
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಮೊದಲ ತೆಲುಗು ಸಿನಿಮಾ 'ಸೂಪರ್ ಮಚ್ಚಿ'. ಲಾಕ್‌ಡೌನ್‌ಗೂ ಮುನ್ನ ಶೂಟಿಂಗ್ ಆರಂಭಿಸಿದ್ದ ಸಿನಿಮಾ ಈಗ ಬಿಡುಗಡೆ ಸಜ್ಜಾಗಿ ನಿಂತಿದೆ. ರಾಜಮೌಳಿ RRR ಮುಂದೂಡಿಕೆ ಹಾಗೂ ಪ್ರಭಾಸ್ 'ರಾಧೆ ಶ್ಯಾಮ್' ರಿಲೀಸ್ ಗೊಂದಲವಿರುವುದರಿಂದ ಈ ಸಿನಿಮಾವನ್ನು ಸಂಕ್ರಾಂತಿಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಟಿಸಿರುವ ಈ ಸಿನಿಮಾ ಜನವರಿ 14ರಂದು ಬಿಡುಗಡೆಯಾಗಲಿದೆ. ಈ ಮೂಲಕ ರಚಿತಾ ರಾಮ್ ತೆಲುಗು ಹೀರೋಗೂ ಲಕ್ಕಿ ಹೀರೊಯಿನ್ ಆಗ್ತಾರಾ? ಅನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಿಗೆ ಎದುರಾಗಿದೆ.
|
ರಾಣಾ '1945' ಎಂಟ್ರಿ
ಗುರು ರಾಜಮೌಳಿ ಸಿನಿಮಾ RRR ಜನವರಿ 7ಕ್ಕೆ ಬಿಡುಗಡೆ ಮಾಡುವುದಿಲ್ಲ ಎಂದು ಅನೌನ್ಸ್ ಮಾಡುತ್ತಿದ್ದಂತೆ ರಾಣಾ ದಗ್ಗುಬಾಟಿ ಆ ದಿನವನ್ನು ಆಕ್ರಮಿಸಿಕೊಂಡಿದ್ದಾರೆ. ಅದೇ ದಿನ ರಾಣಾ ನಟನೆಯ ಸಿನಿಮಾ '1945' ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸತ್ಯ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಜನವರಿ 7ರಂದು ಬಿಡುಗಡೆಯಾಗಿತ್ತಿರುವ ಸಿನಿಮಾಗಳ ಒಟ್ಟಿಗೆ ಸೇರಿಕೊಂಡಿದೆ.

ಜನವರಿ 7ಕ್ಕೆ 'ಅತಿಥಿ ದೇವೋಭವ'
ರಾಣಾ ದಗ್ಗುಬಾಟಿಯ '1945' ಚಿತ್ರದ ಜೊತೆಗೇ ಡೈಲಾಗ್ ಕಿಂಗ್ ಸಾಯಿಕುಮಾರ್ ಪುತ್ರನ 'ಅತಿಥಿ ದೇವೋಭವ' ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಆದಿ ಸಾಯಿಕುಮಾರ್ ನಟನೆಯ ಪೊಲಿಮೆರ ನಾಗೇಶ್ವರ್ ನಿರ್ದೇಶನದ ಈ ಸಿನಿಮಾ ಜನವರಿ 7ನೇ ತಾರೀಕಿನಂದು ಬಿಡುಗಡೆಯಾಗಲಿದೆ. ಶೇಖರ್ ಚಂದ್ರ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ನೇಹಾ ಶೆಟ್ಟಿಯ 'DJ Tillu'ಗೆ ಮುಹೂರ್ತ
ಮತ್ತೊಬ್ಬ ಕನ್ನಡದ ನಟಿ ನೇಹಾ ಶೆಟ್ಟಿ ನಟನೆಯ ತೆಲುಗು ಸಿನಿಮಾ 'DJ Tillu' ಬಿಡುಗಡೆಗೆ ಸಜ್ಜಾಗಿದೆ. ಮಹೇಶ್ ಬಾಬು ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್ಟೈನ್ಮೆಂಟ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸಿದ್ದು ಜೊನ್ನಲಗಡ್ಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಲ್ ಕೃಷ್ಣ ನಿರ್ದೇಶನದ ಈ ಚಿತ್ರ, ಜನವರಿ 14ರಂದು ಬಿಡುಗಡೆಯಾಗಲಿದೆ.

'ರೌಡಿ ಬಾಯ್ಸ್' ಬಿಡುಗಡೆ
ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನಿಮಾ 'ರೌಡಿ ಬಾಯ್ಸ್' ಜನವರಿ 14ರಂದು ಬಿಡುಗಡೆಯಾಗಲಿದೆ. ನಟ ಆಶಿಶ್ ಹಾಗೂ ಸಹನಟ ಅನುಪಮ ಪರಮೇಶ್ವರನ್ ನಟಿಸಿರುವ ಈ ಸಿನಿಮಾ ಸಂಕ್ರಾಂತಿಗೆ ಥಿಯೇಟರ್‌ಗೆ ಲಗ್ಗೆ ಇಡಲಿದೆ. ಹರ್ಷ ಕೊನುಗಂಟಿ ನಿರ್ದೇಶನದ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಜನವರಿ 14ಕ್ಕೆ '7 ದಿನ 6 ರಾತ್ರಿ'
ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿರುವ ಮತ್ತೊಂದು ಸ್ಮಾಲ್ ಬಜೆಟ್ ತೆಲುಗು ಸಿನಿಮಾ '7 ದಿನ 6 ರಾತ್ರಿ'. ಇಬ್ಬರು ಯುವ ಜೋಡಿ ಗೋವಾ ಟ್ರಿಪ್‌ಗೆ ಹೋಗುತ್ತಾರೆ. ಆ ಟ್ರಿಪ್‌ನಲ್ಲಿ ಏನು ನಡೆಯುತ್ತೆ ಅನ್ನುವುದೇ ಸಿನಿಮಾದ ಕಥೆ. ಈ ಸಿನಿಮಾವನ್ನು ಎಂಎಸ್ ರಾಜು ನಿರ್ದೇಶನ ಮಾಡಿದ್ದು, ಜನವರಿ 14ಕ್ಕೆ ಬಿಡುಗಡೆ ಮಾಡಲಿದ್ದಾರೆ.

ಮಹೇಶ್ ಬಾಬು ಸಂಬಂಧಿ ಹೀರೋ
ಮಹೇಶ್ ಬಾಬು ಸಂಬಂಧಿ ಅಶೋಕ್ ಗಲ್ಲಾ ನಟನೆಯ ಸಿನಿಮಾ 'ಹೀರೊ' ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಇದೊಂದು ಪಕ್ಕಾ ಲವ್ ಸ್ಟೋರಿ ಆಗಿದ್ದು, ಶ್ರೀರಾಮ್ ಆದಿತ್ಯ ನಿರ್ದೇಶನವಿದೆ. ನಿಧಿ ಅಗರ್ವಾಲ್, ಜಗಪತಿ ಬಾಬು, ನರೇಶ್, ವೇನ್ನಿಲಾ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜನವರಿ 15ರಂದು ಬಿಡುಗಡೆಯಾಗಲಿದೆ.

ಪ್ರಭಾಸ್ 'ರಾಧೆ ಶ್ಯಾಮ್' ಅಬ್ಬರ
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟನೆಯ ಸಿನಿಮಾ 'ರಾಧೆ ಶ್ಯಾಮ್' ಜನವರಿ 14ರಂದು ಬಿಡುಗಡೆಯಾಗುತ್ತೆ. ಟಾಲಿವುಡ್‌ನಲ್ಲಿ 'ರಾಧೆ ಶ್ಯಾಮ್' ಬಿಡುಗಡೆಗೆ ಬಗ್ಗೆ ಗೊಂದಲ ಏರ್ಪಟ್ಟಿದ್ದರೂ, ಚಿತ್ರತಂಡ ಮಾತ್ರ ರಿಲೀಸ್ ಆಗುತ್ತೆ ಎಂದು ಹೇಳುತ್ತಲೇ ಬರುತ್ತಿದೆ. ಹೀಗಾಗಿ ಜನವರಿ 14ಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುವುದು ಸದ್ಯಕ್ಕೆ ಪಕ್ಕಾ ಅಂತಾಗಿದೆ.