Don't Miss!
- News
ತ್ರಿಪುರಾ ವಿಧಾನಸಭೆ ಚುನಾವಣೆ: 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆಲುಗಿಗೆ ಅರ್ಜುನ್ ಸರ್ಜಾ ಪುತ್ರಿ ಎಂಟ್ರಿ: ಪವನ್ ಕಲ್ಯಾಣ್ ಸಾಥ್!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ಆಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗೆಷ್ಟೇ ತೆಲುಗಿಗೆ ಸಿನಿಮಾ ಪುತ್ರಿ ಐಶ್ವರ್ಯಾ ಪರಿಚಯಿಸಲು ಅರ್ಜುನ್ ಸರ್ಜಾ ಸಜ್ಜಾಗಿರುವ ಸುದ್ದಿ ಸಂಚಲನ ಸೃಷ್ಟಿಸಿತ್ತು. ಈಗ ಆ ಸಿನಿಮಾ ಮುಹೂರ್ತ ಕಂಡಿದೆ.
ಅರ್ಜುನ್ ಸರ್ಜಾ ಅವರೇ ಪುತ್ರಿ ಐಶ್ವರ್ಯಾರನ್ನು ತೆಲುಗಿಗೆ ಪರಿಚಯಿಸುತ್ತಿದ್ದಾರೆ. ಎರಡನೇ ಬಾರಿ ಪುತ್ರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಸರ್ಜಾ ಪುತ್ರಿಯ ಮೊದಲ ಟಾಲಿವುಡ್ ಸಿನಿಮಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಾಥ್ ನೀಡಿದ್ದಾರೆ. ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದಾರೆ.
ಮಗಳ
ಯಶಸ್ಸಿಗಾಗಿ
ಅರ್ಜುನ್
ಸರ್ಜಾ
ಪಣ:
ತೆಲುಗಿನಲ್ಲಿ
ನಿರ್ದೇಶನಕ್ಕಿಳಿದ
ನಟ!
ಐಶ್ವರ್ಯಾ ಸರ್ಜಾ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಶತಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡದ ಬಳಿಕ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತ್ತೆ ತಂದೆಯೇ ನಿರ್ಮಾಣ ಹಾಗೂ ನಿರ್ದೇಶನ ಎರಡೂ ಮಾಡುತ್ತಿರುವುದರಿಂದ ಸರ್ಜಾ ಅಭಿಮಾನಿಗಳಿ ಸಹಜವಾಗಿಯೇ ಕುತೂಹಲವಿದೆ.

ಕನ್ನಡದಲ್ಲಿ 'ಪ್ರೇಮ ಬರಹ' ಬರೆದಿದ್ದ ನಟಿ
ಅರ್ಜುನ್ ಸರ್ಜಾ ಮೊದಲ ಕನ್ನಡ ಚಿತ್ರರಂಗಕ್ಕೆ ಪುತ್ರಿ ಐಶ್ವರ್ಯಾರನ್ನು ಪರಿಚಯಿಸಿದ್ದರು. ಚೇತನ್ ಕುಮಾರ್ ಹಾಗೂ ಐಶ್ವರ್ಯಾ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಅರ್ಜುನ್ ಸರ್ಜಾ ಅವರೇ ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಿದ್ದರು. ಆದರೆ, ಸಿನಿಮಾ ಗೆಲ್ಲಲಿಲ್ಲ. ಹೀಗಾಗಿ ಈ ಬಾರಿ ತೆಲುಗಿನಲ್ಲಿ ಪುತ್ರಿಯನ್ನು ಪರಿಚಯ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ಕಂಡಿತ್ತು. ಕೆಲವು ದಿನಗಳಲ್ಲಿ ಶೂಟಿಂಗ್ ಆರಂಭ ಆಗಲಿದೆ.
ಪುನೀತ್
ಮನೆಗೆ
ಅರ್ಜುನ್
ಸರ್ಜಾ
ಹಾಗೂ
ಪತ್ನಿ
ಭೇಟಿ:
'ಅಪ್ಪು
ಅಗಲಿದ
ಮೇಲೆ
ಲೈಫೇ
ಒಂಥರಾ
ಡಿಪ್ರೆಸ್
ಆಗಿತ್ತು'

ರೋಡ್ ಟ್ರಿಪ್ ಸ್ಟೋರಿ!
ಅಂದ್ಹಾಗೆ ಇದೊಂದು ರೋಡ್ ಟ್ರಿಪ್ ಮೇಲೆ ಹೆಣೆದ ಕಥೆ. ಹೀಗಾಗಿ ಇಲ್ಲೂ ಕೂಡ ಜರ್ನಿ ಇರಲಿದೆ. ಸದ್ಯ ಐಶ್ವರ್ಯಾ ಅರ್ಜುನ್ ಸರ್ಜಾ ಜೊತೆ ತೆಲುಗಿನ ಯಂಗ್ ಹೀರೊ ವಿಶ್ವವ್ ಸೇನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಖಳನಾಯಕನಾಗಿ ಜಗಪತಿ ಬಾಬು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಉಳಿದ ಪಾತ್ರಗಳ ಆಯ್ಕೆ ಆಗಬೇಕಿದ್ದು, ಶೀಘ್ರದಲ್ಲಿಯೇ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ.

ವಿಶ್ವಕ್ ಸೇನ್ ಯಾರು?
ವಿಶ್ವಕ್ ಸೇನ್ ತೆಲುಗು ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿರುವ ನಟ. ಈಗಾಗಲೇ ಈತ ನಟಿಸಿದ ಸಿನಿಮಾಗಳು ತೆಲುಗು ಬಾಕ್ಸಾಫೀಸ್‌ನಲ್ಲಿ ಹಿಟ್ ಲಿಸ್ಟ್ ಸೇರಿವೆ. ಇತ್ತೀಚೆಗೆ ಬಿಡುಗಡೆಯಾದ 'ಅಶೋಕ ವನಂಲೋ ಅರ್ಜುನ ಕಲ್ಯಾಣಂ' ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ವಿಶ್ವಕ್ ಸೇನ್ ನಿರ್ದೇಶನ 'ಫಲಕ್ನುಮಾ ದಾಸ್' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. 'ದಾಸ್ ಕಾ ಧಮ್ಕಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಈಗ ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರಕ್ಕೂ ಜೈ ಎಂದಿದ್ದಾರೆ.
ಚಿತ್ರರಂಗದಲ್ಲಿ
ಯಾರೂ
ಗೆಳೆಯರಿಲ್ಲ,
ಇರುವುದು
ಒಬ್ಬನೇ
ಗೆಳೆಯ:
ಜಗಪತಿ
ಬಾಬು

ಅರ್ಜುನ್ ನಿರ್ಮಾಣದ 15ನೇ ಸಿನಿಮಾ
ಅರ್ಜುನ್ ಸರ್ಜಾ ಶ್ರೀರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ಮಗಳಿಗಾಗಿ ನಿರ್ಮಿಸುತ್ತಿರುವ ತೆಲುಗು ಸಿನಿಮಾ 15ನೇ ಸಿನಿಮಾ. ಹೀಗಾಗಿ ತೆಲುಗು ಸಿನಿಮಾ ಬಗ್ಗೆ ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.