For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ್ ಪುತ್ರ ಅಖಿಲ್ ಗೆ ಗಾಯ: ನಡೆದ ಘಟನೆ ಏನು?

  |

  ಅಕ್ಕಿನೇನಿ ನಾಗಾರ್ಜುನ್ ಕಿರಿಯ ಪುತ್ರ ತೆಲುಗು ನಾಯಕ ನಟ ಅಖಿಲ್ ಅಕ್ಕಿನೇನಿ ಅವರಿಗೆ ಶೂಟಿಂಗ್ ಸಮಯ ಅಪಘಾತವಾಗಿದೆ.

  ಅಖಿಲ್ ಅಕ್ಕಿನೇನಿ ಅವರು 'ಮೋಸ್ಟ್ ಎಲಿಜೆಬಲ್ ಬ್ಯಾಚ್ಯುಲರ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಸಮಯ ಅವರ ಬಲಗೈ ಗೆ ಗಾಯವಾಗಿದ್ದು, ಮೂಳೆ ಮುರಿದಿದೆ. ಹಾಗಾಗಿ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.

  ಫೈಟ್ ದೃಶ್ಯದ ಶೂಟಿಂಗ್ ನಡೆಸುವಾಗ ಅಖಿಲ್ ಅಕ್ಕಿನೇನಿ ಆಯತಪ್ಪಿ ಬಿದ್ದ ಕಾರಣ ಅವರ ಕೈಗೆ ತೀವ್ರವಾಗಿಯೇ ಪೆಟ್ಟಾಗಿದೆ. ಚಿಕಿತ್ಸೆ ಬಳಿಕ ಹತ್ತು ದಿನದ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆಂದು ಚಿತ್ರತಂಡ ಹೇಳಿದೆ.

  ಪ್ರಸ್ತುತ ಅಖಿಲ್ ಅಕ್ಕಿನೇನಿ ಅವರು ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದು ಮಾರ್ಚ್ 20 ರ ಬಳಿಕ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

  'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಭಾಸ್ಕರ್ ನಿರ್ದೇಶಿಸಿದ್ದಾರೆ. ಬನ್ನಿ ವಾಸು ಮತ್ತು ವಾಸು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ವೆನ್ನಿಲ ಕಿಶೋರ್, ಆಮನಿ, ಮುರಳಿ ಶರ್ಮಾ ಇದ್ದಾರೆ.

  English summary
  Nagarjuna Akkineni son Akhil Akkineni injured in most eligible bachelor set while doing a fight sequence.
  Thursday, March 5, 2020, 19:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X