Don't Miss!
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Alia Bhatt: ಇನ್‌ಸ್ಟಾಗ್ರಾಂನಲ್ಲಿ ರಾಜಮೌಳಿ ಅನ್‌ಫಾಲೋ ಮಾಡಿದ್ದ ಆಲಿಯಾ ಮತ್ತೆ ಫಾಲೋ ಮಾಡಿದ್ದೇಕೆ?
RRR ರಾಜಮೌಳಿಯ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ. 'ಬಾಹುಬಲಿ' ಬಳಿಕ ರಾಜಮೌಳಿ ಮತ್ತೊಮ್ಮೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ರಾಜಮೌಳಿ ಸಿನಿಮಾ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಇತ್ತ ಬಾಕ್ಸಾಫೀಸ್‌ನಲ್ಲೂ RRR ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ. ಎಲ್ಲೆಡೆ ಬಿಡುವು ಕೊಡದೆ ಮುನ್ನುಗ್ಗುತ್ತಿದೆ.
RRR ಸಿನಿಮಾ ಅದ್ಭುತ ಯಶಸ್ಸು ಕಾಣುತ್ತಿರೋದ್ರಿಂದ ಇಡೀ ಚಿತ್ರತಂಡ ಗೆಲುವಿನ ಅಲೆಯಲ್ಲಿ ತೇಲಾಡುತ್ತಿದೆ. ಆದರೆ, ಆಲಿಯಾ ಭಟ್ ಮಾತ್ರ ತಮ್ಮ ದೃಶ್ಯಕ್ಕೆ ಕತ್ತರಿ ಹಾಕಿದ್ದಕ್ಕೆ ನಿರ್ದೇಶಕ ರಾಜಮೌಳಿ ವಿರುದ್ದ ಮುನಿಸಿಕೊಂಡಿದ್ದರು. ಕಳೆದೆರಡು ದಿನಗಳಿಂದ ಇದೇ ವಿಚಾರವಾಗಿ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ.
RRR
ಹುಟ್ಟಿದ್ದು
ಹೇಗೆ:
ಕಥೆಗಾರ
ಬಿಚ್ಚಿಟ್ಟ
'RRR'
ಕತೆಯ
ಕತೆ!
ಆಲಿಯಾ ಭಟ್ ಅಂತ ಜನಪ್ರಿಯ ನಟಿ ಪಾತ್ರವನ್ನು ರಾಜಮೌಳಿ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಆರೋಪ ಸಿನಿಮಾ ಬಿಡುಗಡೆಯಾದಾಗಲೇ ಕೇಳಿಬಂದಿತ್ತು. ಅದಕ್ಕೀಗ ರಾಜಮೌಳಿ ವಿರುದ್ಧ ಆಲಿಯಾ ಭಟ್ ಮುನಿಸಿಕೊಂಡಿದ್ದಾರೆ ಎಂದು ಗುಲ್ಲೆದ್ದಿತ್ತು. ಅದಕ್ಕೆ ತಕ್ಕಂತೆ ರಾಜಮೌಳಿಯನ್ನು ಇನ್‌ಸ್ಟಾಗ್ರಾಂನಲ್ಲೂ ಅನ್‌ಫಾಲೋ ಮಾಡಿದ್ದರು. ಆದ್ರೀಗ ಆಲಿಯಾ ಕೋಪಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ.
RRR
Hindi
Box
Office
collection
:
ಹಿಂದಿ
ಪ್ರದೇಶದಲ್ಲಿ
ಹಿಂದಿ
ಸಿನಿಮಾಗಳನ್ನೇ
ಹಿಂದಿಕ್ಕಿದ
RRR

ರಾಜಮೌಳಿ ವಿರುದ್ಧ ಆಲಿಯಾ ಕಿಡಿ
ಆಲಿಯಾ ಭಟ್ ಬಾಲಿವುಡ್‌ನ ಬ್ಯುಸಿ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. RRR ಸಿನಿಮಾ ಮಾಡುವಾಗಲೂ ಆಲಿಯಾ ಭಟ್ ತುಂಬಾನೇ ಬ್ಯುಸಿಯಾಗಿದ್ದರು. 'ಗಂಗೂಬಾಯಿ ಕಾಠಿಯಾವಾಡಿ', 'ಬ್ರಹ್ಮಾಸ್ತ್ರ' ಹಾಗೂ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಅಂತಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೂ, RRR ಸಿನಿಮಾಗೆ ರಾಜಮೌಳಿ ಎನ್ನುವ ಏಕೈಕ ಕಾರಣಕ್ಕೆ ಆಲಿಯಾ ಭಟ್ ಡೇಟ್ ಕೊಟ್ಟಿದ್ದರು. ಆದ್ರೀಗ ಆಕೆಯ ಸೀನ್‌ಗಳನ್ನೇ ಆಲಿಯಾ ಕಟ್ ಮಾಡಿದ್ದರು. ಈ ಕಾರಣಕ್ಕೆ ಆಲಿಯಾಗೆ ರಾಜಮೌಳಿ ಮೇಲೆ ಬೇಸರ ಆಗಿತ್ತು.

ರಾಜಮೌಳಿ ಅನ್‌ಫಾಲೋ ಮಾಡಿದ್ದ ಆಲಿಯಾ?
ಆರಂಭದಲ್ಲಿ ಆಲಿಯಾ ಭಟ್ ಕಮ್ಮಿ ಅಂದರೂ ನಿಮಿಷ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆಲಿಯಾ ಭಟ್ ಕೂಡ ನಾಲ್ಕೈದು ಬಾರಿ ರಾಜಮೌಳಿಗೆ ಡೇಟ್ ಕೊಟ್ಟಿದ್ದರು. ಆದರೆ, ಕೂಡ ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಶೂಟ್ ಮಾಡಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ನಟಿಸಿದ ಸಿನಿಮಾದಲ್ಲಿ ಆಲಿಯಾ ಭಟ್ ಸೀನ್‌ಗಳಿಗೆ ಕತ್ತರಿ ಬಿದ್ದಿದ್ದಕ್ಕೆ ಸಹಜವಾಗಿಯೇ ಆಲಿಯಾಗೆ ಬೇಸರ ಆಗಿತ್ತು. ಹೀಗಾಗಿ ರಾಜಮೌಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಇನ್‌ಸ್ಟಾಗ್ರಾಂನಿಂದ ರಾಜಮೌಳಿಯನ್ನು ಅನ್‌ಫಾಲೋ ಮಾಡಿದ್ದರು.

ಮತ್ತೆ ಫಾಲೋ ಮಾಡುತ್ತಿರುವ ಆಲಿಯಾ
ರಾಜಮೌಳಿಯನ್ನು ಆಲಿಯಾ ಭಟ್ ಅನ್‌ಫಾಲೋ ಮಾಡಿದ್ದು ನಿಜ. ಅದಕ್ಕೆ ಸಾಕ್ಷಿ ಕೂಡ ಇದೆ. ಇದು ಆಲಿಯಾ ಬೇಸರ ಆಗಿದೆ ಅನ್ನುವುದನ್ನು ಹೇಳುತ್ತಿದೆ. ಆದರೆ, ಅನ್‌ಫಾಲೋ ಮಾಡಿದ ಕೆಲವೇ ಕ್ಷಣಗಳಲ್ಲಿ ಮತ್ತೆ ರಾಜಮೌಳಿಯನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣವೇನು? ಅನ್ನೋನೋದು ತಿಳಿದುಬಂದಿಲ್ಲ. ಬಹುಶ: ರಾಜಮೌಳಿ ಅವರ ದೃಶ್ಯಗಳಿಗೆ ಕತ್ತರಿ ಹಾಕಿದ್ದು ಯಾಕೆ ಅನ್ನೋದನ್ನು ಅರ್ಥ ಮಾಡಿಸಿರುವ ಸಾಧ್ಯವಿದೆ. ಈ ಕಾರಣಕ್ಕೆ ರಾಜಮೌಳಿ ವಿರುದ್ಧ ಬ್ರಹ್ಮಾಸ್ತ್ರ ಬಿಡಲು ಆಲಿಯಾ ಮತ್ತೆ ರಾಜಮೌಳಿಯನ್ನು ಫಾಲೋ ಮಾಡುತ್ತಿರುವ ಸಾಧ್ಯತೆಯಿದೆ.

ಆಲಿಯಾ ಭಟ್ 'ಬ್ರಹ್ಮಾಸ್ತ್ರ'
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಬ್ರಹ್ಮಾಸ್ತ್ರ'. ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಟಾಲಿವುಡ್‌ನಲ್ಲಿ ರಿಲೀಸ್ ಮಾಡಲು ಆಲಿಯಾ ರಾಜಮೌಳಿಯ ಮೊರೆ ಹೋಗಬಹುದು. ಈ ಕಾರಣಕ್ಕೆ ಮುನಿಸು ಮರೆತು, ರಾಜಮೌಳಿಯನ್ನು ಮತ್ತೆ ಫಾಲೋ ಮಾಡಿರು ಸಾಧ್ಯತೆಯಿದೆ.