For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಡುವೆಯೂ ಗಗನಕ್ಕೇರಿತು ಅಲ್ಲು ಅರ್ಜುನ್ ಸಂಭಾವನೆ

  By Avani Malnad
  |

  ತೆಲುಗು ನಟ ಅಲ್ಲು ಅರ್ಜುನ್ ತಮ್ಮ ವೃತ್ತಿ ಬದುಕಿನ ಯಶಸ್ಸಿನ ಉತ್ತುಂಗದಲ್ಲಿ ಸಾಗುತ್ತಿದ್ದಾರೆ. 'ಅಲಾ ವೈಕುಂಠಪುರಮುಲೂ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಅವರಿಗೆ ಬೇಡಿಕೆಯೂ ಹೆಚ್ಚಿದೆ. ಹಾಗೆಯೇ ಅಲ್ಲು ಅರ್ಜುನ್ ತಮ್ಮ ಸಂಭಾವನೆಯನ್ನು ಸುಮಾರು ಎರಡು ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಹೊಸ ಪ್ರತಿಭೆಗಳು ಅಂದ್ರೆ ಪುನೀತ್ ರಾಜಕುಮಾರ್ ಹೇಗೆ ಸಪೋರ್ಟ್ ಮಾಡ್ತಾರೆ ನೋಡಿ

  ಲಾಕ್ ಡೌನ್ ಅವಧಿಯ ಬಳಿಕ ನಿರ್ಮಾಪಕರು ಸಂಕಷ್ಟದಲ್ಲಿರುವುದರಿಂದ ಸ್ಟಾರ್‌ಗಳ ಸಂಭಾವನೆಯಲ್ಲಿ ಕಡಿತ ಮಾಡುವ ಬಗ್ಗೆ ವಿವಿಧ ಚಿತ್ರರಂಗಗಳಲ್ಲಿ ಚರ್ಚೆ ನಡೆದಿದೆ. ಹಾಗೆಯೇ ತಮ್ಮ ಮುಂದಿನ ಚಿತ್ರ 'ಪುಷ್ಪ'ಕ್ಕಾಗಿ ಅಲ್ಲು ಅರ್ಜುನ್ ಸಂಭಾವನೆ ಕಡಿತಗೊಳಿಸಲಿದ್ದಾರೆ ಎನ್ನಲಾಗಿತ್ತು. ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವ ನಿರ್ಧಾರಕ್ಕೆ ತಡೆ ಒಡ್ಡಲಾಗಿತ್ತು. ಆದರೆ ಅಲ್ಲು ಅರ್ಜುನ್ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

  ಅಲ್ಲು ಅರ್ಜುನ್ 'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್ ನಲ್ಲಿ ಬಾಲಿವುಡ್ ಸ್ಟಾರ್ ನಟಅಲ್ಲು ಅರ್ಜುನ್ 'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ

  ಸಂಭಾವನೆ ಏರಿಕೆ

  ಸಂಭಾವನೆ ಏರಿಕೆ

  ಅಲಾ ವೈಕುಂಠಪುರಮುಲೂ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಗದೆ ಹೋದರೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಈ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರ ಮಾರುಕಟ್ಟೆ ಮತ್ತಷ್ಟು ವಿಸ್ತರಣೆಯಾಗಿದೆ. ತಮ್ಮ ಸಿನಿಮಾಗಳು ಮಿನಿಮಮ್ ಗ್ಯಾರಂಟಿ ಲಾಭ ತಂದುಕೊಡಲಿದೆ ಎನ್ನುವುದು ಅವರಿಗೆ ಖಚಿತವಾಗಿದೆ. ಇದರಿಂದಾಗಿ 'ಪುಷ್ಪ' ಚಿತ್ರಕ್ಕೆ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

  35 ಕೋಟಿ ರೂ.ಗೆ ಹೆಚ್ಚಳ

  35 ಕೋಟಿ ರೂ.ಗೆ ಹೆಚ್ಚಳ

  ಕಳೆದ ಐದು ವರ್ಷಗಳಿಂದ ಅಲ್ಲು ಅರ್ಜುನ್ ಚಿತ್ರವೊಂದಕ್ಕೆ 14-17 ಕೋಟಿ ರೂ ಸಂಭಾವನೆ ಪಡೆದುಕೊಳ್ಳುತ್ತಿದ್ದರು. 'ಪುಷ್ಪ' ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ಅವರು ಏಕಾಏಕಿ 35 ಕೋಟಿ ರೂ.ಗೆ ಏರಿಸಿದ್ದಾರೆ ಎನ್ನಲಾಗಿದೆ. ಇದರ ಮೂಲಕ ಅಲ್ಲು, ಜೂ.ಎನ್‌ಟಿಆರ್ ಮತ್ತು ಮಹೇಶ್ ಬಾಬು ಸಾಲಿಗೆ ಸೇರಿಕೊಂಡಿದ್ದಾರೆ.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ

  ನಿರ್ದೇಶಕರ ಸಂಭಾವನೆಯೂ ಹೆಚ್ಚಳ

  ನಿರ್ದೇಶಕರ ಸಂಭಾವನೆಯೂ ಹೆಚ್ಚಳ

  ಅಲಾ ವೈಕುಂಠಪುರಮುಲೋ ಚಿತ್ರ ಅಲ್ಲು ಅರ್ಜುನ್ ಅವರದೇ ಬ್ಯಾನರ್‌ನಲ್ಲಿ ಸಿದ್ಧವಾದ ಚಿತ್ರ. ಇದು 200 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಭಾವನೆಯನ್ನು 25 ಕೋಟಿ ರೂ ಎಂದು ಮೀಸಲಿರಿಸಲಾಗಿತ್ತು. ಅಲ್ಲು ಅರ್ಜುನ್‌ಗೆ ಸಿನಿಮಾ ಮಾಡುವಂತೆ ಕೊರತಲಾ ಶಿವ ಅವರಿಗೆ 13 ಕೋಟಿ ಆಫರ್ ನೀಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.

  ದುಬಾರಿ ಬಜೆಟ್ ಚಿತ್ರ

  ದುಬಾರಿ ಬಜೆಟ್ ಚಿತ್ರ

  ಲಾಕ್ ಡೌನ್ ಮುನ್ನವೇ ಚಿತ್ರ ಆರಂಭವಾಗಬೇಕಿತ್ತು. ಸ್ಲ್ಮಗ್ಲಿಂಗ್ ಕಥೆಯನ್ನು ಹೊಂದಿರುವ ಚಿತ್ರ ದುಬಾರಿ ಬಜೆಟ್ ಆಗಿರುವುದರಿಂದ ಸಿದ್ಧತೆ ಕೊಂಚ ತಡವಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಆರ್ಥಿಕ ಸಂಕಷ್ಟ ಎಲ್ಲೆಡೆ ಇರುವುದರಿಂದ ಅಲ್ಲು ಅರ್ಜುನ್ ಸಂಭಾವನೆ ಇಳಿಸಬೇಕು ಎಂದು ನಿರ್ಮಾಣ ಸಂಸ್ಥೆ ಮನವಿ ಮಾಡುವ ಸಾಧ್ಯತೆ ಇದೆ.

  ಅಲ್ಲು ಅರ್ಜುನ್ ಗೆ ನಿರ್ದೇಶನ ಮಾಡಿ ಎಂದು ಸ್ಟಾರ್ ನಿರ್ದೇಶಕನಿಗೆ 13 ಕೋಟಿ ಆಫರ್ಅಲ್ಲು ಅರ್ಜುನ್ ಗೆ ನಿರ್ದೇಶನ ಮಾಡಿ ಎಂದು ಸ್ಟಾರ್ ನಿರ್ದೇಶಕನಿಗೆ 13 ಕೋಟಿ ಆಫರ್

  English summary
  Tollywood actor Allu Arjun reportedly hiked his remuneration for Pushpa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X