For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'ರಾಜ್ ಈಸ್ ಬ್ಯಾಕ್: ದೊಡ್ಡ ಸಿಗ್ನಲ್ ಕೊಟ್ಟ ಸುಕುಮಾರ್!

  |

  ಅಂತೂ ಇಂತೂ ಮತ್ತೆ 'ಪುಷ್ಪ'ರಾಜ್ ಅಖಾಡಕ್ಕಿಳಿಯಲು ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಅಭಿಮಾನಿಗಳಿಗೆ ಅಪ್‌ಡೇಟ್ ಸಿಕ್ಕಿದ್ದು, ಸುಕುಮಾರ್ ದೇವರಿಗೆ ಕೈ ಮುಗಿದು ನಲ್ಲಮಾಲಾ ಅರಣ್ಯದ ಕಡೆ ಹೊರಡಲು ಅಣಿಯಾಗಿದ್ದಾರೆ. ಬಹುನಿರೀಕ್ಷಿತ 'ಪುಷ್ಪ-2' ಚಿತ್ರಕ್ಕೆ ನಾಳೆ(ಆಗಸ್ಟ್ 22) ಮುಹೂರ್ತ ನೆರವೇರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

  ಕಳೆದ ವರ್ಷ ಮಾಸ್ ಮಸಾಲಾ ಎಂಟರ್‌ಟೈನರ್ 'ಪುಷ್ಪ' ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದರಲ್ಲೂ ಹಿಂದಿ ಬೆಲ್ಟ್‌ನಲ್ಲಿ 'ಪುಷ್ಪ'ರಾಜ್ ಆರ್ಭಟ ಜೋರಾಗಿತ್ತು. ರಕ್ತಚಂದನ ಸ್ಮಗ್ಲರ್‌ ಆಗಿ ರಗಡ್‌ ಲುಕ್‌ನಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಬ್ಬರಿಸಿ ಗೆದ್ದಿದ್ದರು. 'ಪುಷ್ಪ' ಸ್ಟೈಲ್ ಮ್ಯಾನರಿಸಂ ಹಾಗೂ ಸುಕುಮಾರ್ ಡೈರೆಕ್ಷನ್ ನೋಡುಗರು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ನಾಯಕಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ರೆ, ಸ್ಪೆಷಲ್ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿ ಸಮಂತಾ ಜಾದೂ ಮಾಡಿದ್ದರು. ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಸಿಕ್ಕಾಪಟ್ಟೆ ಕಿಕ್ ಕೊಟ್ಟಿತ್ತು. ಎಲ್ಲಾ ಸೇರಿ 'ಪುಷ್ಪ' ಫಸ್ಟ್ ಪಾರ್ಟ್ ಬ್ಲಾಕ್‌ಬಸ್ಟರ್ ಹಿಟ್‌ ಆಗಿ ಯಾವಾಗ ಸೆಕೆಂಡ್ ಪಾರ್ಟ್‌ ಬರತ್ತೋ ಎಂದು ಕಾಯುವಂತೆ ಮಾಡಿದೆ.

  ಪ್ರೀಕ್ವೆಲ್ ರಿಲೀಸ್ ಆಗಿ 8 ತಿಂಗಳ ನಂತರ ಸೀಕ್ವೆಲ್‌ಗೆ ಚಾಲನೆ ಸಿಕ್ತಿದೆ. ಮೊದಲ ಭಾಗಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ನಿರೀಕ್ಷೆ, ಒತ್ತಡವನ್ನೆಲ್ಲಾ ಹೊತ್ತುಕೊಂಡ ಕಥೆಯನ್ನು ಮುಂದುವರೆಸಲು ನಿರ್ದೇಶಕರು ಮುಂದಾಗಿದ್ದಾರೆ. ಕಥೆಯನ್ನು ತಿದ್ದಿ ತೀಡಿ ಫೈನಲ್ ಮಾಡಿಕೊಂಡಿರುವ ಸುಕುಮಾರ್ ಶೂಟಿಂಗ್‌ಗೆ ಹೋಗಲು ರೆಡಿಯಾಗಿದ್ದಾರೆ. ಈ ಸುದ್ದಿ ಕೇಳಿ 'ಪುಷ್ಪ'ರಾಜ್ ಅಭಿಮಾನಿಗಳು ಖುಷಿಯಾಗಿದ್ದಾರೆ.

   ಸಿಕ್ಕಾಪಟ್ಟೆ ದೊಡ್ಡ ಸಿನಿಮಾ

  ಸಿಕ್ಕಾಪಟ್ಟೆ ದೊಡ್ಡ ಸಿನಿಮಾ

  ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ಪಾರ್ಟ್‌-2 ಅದಕ್ಕಿಂತ ಹಲವು ಪಟ್ಟು ದೊಡ್ಡ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾ ಸಿನಿಮಾ ಮುಹೂರ್ತ ಮಾಡುವುದಾಗಿ ಘೋಷಿಸಿರುವ ಚಿತ್ರತಂಡ ಅದನ್ನೇ ಸಾರಿ ಸಾರಿ ಹೇಳಿದೆ. ಈ ಹಿಂದೆ 'ಬಾಹುಬಲಿ-2' ಹಾಗೂ 'ಕೆಜಿಎಫ್-2' ಇದೇ ರೀತಿ ಮೊದಲ ಭಾಗಕ್ಕಿಂತ ದೊಡ್ಡಮಟ್ಟದಲ್ಲಿ ಕಟ್ಟಿ ಕೊಟ್ಟು ಗೆದ್ದಿದ್ದರು. 'ಪುಷ್ಪ'-2 ಬಜೆಟ್‌ 300 ಕೋಟಿ ರೂ. ಎನ್ನಲಾಗುತ್ತಿದೆ.

   'ಪುಷ್ಪ' Vs ಭನ್ವರ್ ಸಿಂಗ್

  'ಪುಷ್ಪ' Vs ಭನ್ವರ್ ಸಿಂಗ್

  ಮೊದಲ ಭಾಗದ ಕ್ಲೈಮ್ಯಾಕ್ಸ್‌ ವೇಳೆಗೆ ರಕ್ತಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಹಾಗೂ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಇವರಿಬ್ಬರ ಮುಂದುವರೆದ ಕದನ ಹೇಗಿರಲಿದೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಬಾರಿ 'ಪುಷ್ಪ'ರಾಜ್‌ಗೆ ಪೊಲೀಸರು ಹೇಗೆಲ್ಲಾ ಸವಾಲು ಹಾಕ್ತಾರೆ ? ಅದನ್ನು ಅವನು ಹೇಗೆ ಮೆಟ್ಟಿ ನಿಲ್ಲುತ್ತಾನೆ? ಅನ್ನುವುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

   ಹೊಸ ವಿಲನ್‌ಗಳು ಎಂಟ್ರಿ?

  ಹೊಸ ವಿಲನ್‌ಗಳು ಎಂಟ್ರಿ?

  ಮನಸ್ಸು ಮಾಡಿದ್ದರೆ ಸುಕುಮಾರ್ 'ಪುಷ್ಪ' ಕಥೆಯನ್ನು ಒಂದೇ ಸಿನಿಮಾದಲ್ಲಿ ಹೇಳಿ ಮುಗಿಸಬಹುದಿತ್ತು. ಸದ್ಯ ಇಬ್ಬರು ಮೂವರು ವಿಲನ್‌ಗಳನ್ನು ಅರೆಜೀವ ಮಾಡಿರುವ ನಿರ್ದೇಶಕರು ಭನ್ವರ್ ಸಿಂಗ್‌ನ ಮಾತ್ರ 'ಪುಷ್ಪ'ರಾಜ್‌ಗೆ ದೊಡ್ಡ ಎದುರಾಳಿ ಎಂದು ಬಿಂಬಿಸಿದ್ದಾರೆ. ಆದರೆ ಇಷ್ಟೇ ಜನ ಎದುರಾಳಿಗಳಿದ್ದರೇ ಕಥೆ ಮಜಾ ಇರೋದಿಲ್ಲ. ಹಾಗಾಗಿ ಹೊಸ ಪಾತ್ರಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಬಾಲಿವುಡ್‌ ಕಲಾವಿದರನ್ನು ವಿಲನ್ ಪಾತ್ರಗಳಲ್ಲಿ ಅಖಾಡಕ್ಕೆ ಇಳಿಸುವ ಸುಳಿವು ಸಿಗುತ್ತಿದೆ.

   'ಪುಷ್ಪ'-2ಗಾಗಿ ಕಾಯ್ತಿದ್ದಾರೆ ಬಾಲಿವುಡ್ ಮಂದಿ

  'ಪುಷ್ಪ'-2ಗಾಗಿ ಕಾಯ್ತಿದ್ದಾರೆ ಬಾಲಿವುಡ್ ಮಂದಿ

  ಹೌದು 'ಪುಷ್ಪ'-2 ಚಿತ್ರಕ್ಕಾಗಿ ಬರೀ ತೆಲುಗು ಪ್ರೇಕ್ಷಕರಷ್ಟೇ ಅಲ್ಲ. ಬಾಲಿವುಡ್ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಫಸ್ಟ್ ಪಾರ್ಟ್ ಸಖತ್ ಕಲೆಕ್ಷನ್ ಮಾಡಿತ್ತು. ಪ್ರೀಕ್ವೆಲ್‌ನ ಓಟಿಟಿ, ಟಿವಿಯಲ್ಲಿ ನೋಡಿದವರು ಕೂಡ ಥಿಯೇಟರ್‌ನಲ್ಲಿ ಸೀಕ್ವೆಲ್‌ ನೋಡಲು ಉತ್ಸುಕರಾಗಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲೇ ಚಿತ್ರಕ್ಕೆ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲಾನ್ ನಡೀತಿದೆ.

   2023ರ ಕೊನೆಗೆ 'ಪುಷ್ಪ'-2 ಹವಾ

  2023ರ ಕೊನೆಗೆ 'ಪುಷ್ಪ'-2 ಹವಾ

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಚಿತ್ರೀಕರಣ ಮುಗಿಯಬೇಕಿತ್ತು. ಈ ವರ್ಷ ಕೊನೆಗೆ ಸಿನಿಮಾ ರಿಲೀಸ್ ಮಾಡುವುದಾಗಿ ಮಾತುಗಳು ಕೇಳಿಬಂದಿತ್ತು. ಆದರೆ ಮೊದಲ ಸಿನಿಮಾ ಸಕ್ಸಸ್ ನಂತರ ನಿರೀಕ್ಷೆ ಹೆಚ್ಚಿದ್ದಂತೆ ಕಥೆಯನ್ನು ಮತ್ತಷ್ಟು ರೋಚಕವಾಗಿ ಕಟ್ಟಲು ನಿರ್ದೇಶಕರು ತೀರ್ಮಾನಿಸಿದ್ದರು. ತಡವಾದರೂ ಪರವಾಗಿಲ್ಲ ಈ ಬಾರಿಯೂ ಪ್ರೇಕ್ಷಕರು ಸಿನಿಮಾ ನೋಡಿ ಹುಚ್ಚೆದ್ದು ಕುಣಿಯಬೇಕು ಎಂದು ಸಾಕಷ್ಟು ಸಮಯ ವ್ಯಯಿಸಿ ಕಥೆ ಮಾಡಿಕೊಂಡಿದ್ದಾರೆ. ನಾಳೆ ಮುಹೂರ್ತ ನೆರವೇರಿಸಿ ಶೂಟಿಂಗ್ ಆರಂಭಿಸಿದ್ದರೆ ಏಳೆಂಟು ತಿಂಗಳು ಚಿತ್ರೀಕರಣ, ನಂತರ ಪ್ರೀ ಪ್ರೊಡಕ್ಷನ್ ಎಲ್ಲಾ ಮುಗಿಸಿ ಸಿನಿಮಾ ರಿಲೀಸ್ ಮುಂದಿನ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆಯಿದೆ.

  English summary
  Allu Arjun Rashmika Mandanna Starrer Pushpa-2 Movie to be Officially Launch Tomorrow. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X