For Quick Alerts
  ALLOW NOTIFICATIONS  
  For Daily Alerts

  40 ದಿನ ಬ್ಯಾಂಕಾಕ್‌ನಲ್ಲಿ 'ಪುಷ್ಪ 2' ಶೂಟಿಂಗ್: ಡಿಸೆಂಬರ್‌ನಲ್ಲಿ ಸರ್ಪ್ರೈಸ್!

  |

  ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. ನಿರೀಕ್ಷೆಗೂ ಮೀರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾವೇ ದೇಶಾದ್ಯಂತ ಸದ್ದು ಮಾಡಿತ್ತು.

  'ಪುಷ್ಪ' ಸಿನಿಮಾ ಆರಂಭದಿಂದಲೂ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಟಕ್ಕರ್ ಕೊಡುತ್ತಲೇ ಇತ್ತು. ಅದರಂತೆ 'ಕೆಜಿಎಫ್ ಚಾಪ್ಟರ್ 1' ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿನೂ ಆಗಿತ್ತು. ಆದರೆ, 'ಕೆಜಿಎಫ್ ಚಾಪ್ಟರ್ 2' ಇಡೀ ಚಿತ್ರತಂಡಕ್ಕೆ ದೊಡ್ಡ ಶಾಕ್ ಕೊಟ್ಟಿತ್ತು. ಹೀಗಾಗಿ 'ಪುಷ್ಪ 2' ಶೂಟಿಂಗ್ ಅನ್ನು ದಿಢೀರನೇ ಆರಂಭ ಮಾಡಲು ಹೋಗಿರಲಿಲ್ಲ.

  ಅಲ್ಲು ಅರ್ಜುನ್ 'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'? ಕನ್ನಡ, ಹಿಂದಿ, ತೆಲುಗಿನಲ್ಲಿ ಬಂಪರ್ ಕಲೆಕ್ಷನ್!ಅಲ್ಲು ಅರ್ಜುನ್ 'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'? ಕನ್ನಡ, ಹಿಂದಿ, ತೆಲುಗಿನಲ್ಲಿ ಬಂಪರ್ ಕಲೆಕ್ಷನ್!

  ನಿರ್ದೇಶಕ ಸುಕುಮಾರ್ ಮತ್ತೆ 'ಪುಷ್ಪ 2' ಸ್ಕ್ರಿಪ್ಟ್ ಅನ್ನು ತಿದ್ದಿ ತೀಡಿದ್ದಾರೆ. ಅದಕ್ಕೆ ಒಂದಿಷ್ಟು ಸಮಯ ತೆಗೆದುಕೊಂಡಿದ್ದರು. ಕೊನೆಗೂ 'ಪುಷ್ಪ 2' ಶೂಟಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ, ಈ ಬಾರಿ 'ಪುಷ್ಪ 2' ಶೂಟಿಂಗ್ ಭಾರತದಲ್ಲಿ ಅಲ್ಲ ವಿದೇಶದಲ್ಲಿ ನಡೆಯಲಿದೆ. ಹೌದು.. ಟಾಲಿವುಡ್ ಮೂಲಗಳ ಪ್ರಕಾರ, ಬ್ಯಾಂಕಾಕ್‌ನಲ್ಲಿ 'ಪುಷ್ಪ 2' ಶೂಟಿಂಗ್ ನಡೆಯಲಿದೆಯಂತೆ.

  ಈಗಾಗಲೇ ಬ್ಯಾಂಕಾಕ್‌ಗೆ ಹಾರುವುದಕ್ಕೆ ಇಡೀ ತಂಡ ಸಜ್ಜಾಗಿದೆಯಂತೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಸುನೀಲ್ ಸೇರಿದಂತೆ ಚಿತ್ರತಂಡದ ಪ್ರಮುಖರು ಬ್ಯಾಂಕಾಕ್‌ಗೆ ತೆರಳಲಿದ್ದಾರೆ. ಸುಮಾರು 40 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ನಡೆಯಲಿದೆ.

  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!

  ಈ 40 ದಿನಗಳಲ್ಲಿ 'ಪುಷ್ಪ 2' ತಂಡ ದುಬಾರಿ ಬಜೆಟ್‌ನಲ್ಲಿ ಶೂಟಿಂಗ್ ಮಾಡಲಿದೆಯಂತೆ. ಅಲ್ಲದೆ ಡಿಸೆಂಬರ್ 17ಕ್ಕೆ 'ಪುಷ್ಪ' ಬಿಡುಗಡೆಯಾಗಿ ಒಂದು ವರ್ಷ ಪೂರೈಸಲಿರುವುದರಿಂದ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಮುಂದಾಗಿದೆಯಂತೆ. ಇದಕ್ಕಾಗಿ ಚಿತ್ರತಂಡ ವಿಶೇಷವಾದ ಟೀಸರ್ ರಿಲೀಸ್ ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

  Allu Arjun Rashmika Sukumar Movie Pushpa Shooting Starts In Bangkok

  ಕೆಲವು ದಿನಗಳ ಹಿಂದೆ 'ಪುಷ್ಪ 2' ಸ್ಪೆಷಲ್ ಟೀಸರ್ ಅನ್ನು 'ಅವತಾರ್ 2' ಸಿನಿಮಾ ಪ್ರದರ್ಶನದ ವೇಳೆ ಬಿಡುಗಡೆ ಮಾಡಲಿದೆ ಅನ್ನೋ ಮಾತು ಕೇಳಿ ಬಂದಿತ್ತು. ಈಗ ವಿಶೇಷವಾದ ಟೀಸರ್ ಹಾಗೂ 40 ದಿನದ ದುಬಾರಿ ಶೂಟಿಂಗ್‌ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ.

  ಮೂಲಗಳ ಪ್ರಕಾರ, 'ಪುಷ್ಪ 2' ಸಿನಿಮಾ ವರ್ಷವೀಡಿ ಶೂಟಿಂಗ್ ಮಾಡಲಿದ್ದು, 2024ರ ಕ್ರಿಸ್‌ಮಸ್‌ಗೆ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಸಜ್ಜಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಟಾಲಿವುಡ್‌ನ ಪ್ರತಿಷ್ಟಿತ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ.

  English summary
  Allu Arjun Rashmika Sukumar Movie Pushpa Shooting Starts In Bangkok, Know More.
  Monday, November 14, 2022, 6:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X