Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಕಾಡಲ್ಲಿ ಪ್ರಾಣಿಗಳು 4 ಹೆಜ್ಜೆ ಹಿಂದೆ ಇಟ್ಟಿವೆ ಎಂದರೆ".... ಪುಷ್ಪ- 2 ಡೈಲಾಗ್ ಲೀಕ್!
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' -2 ಶೂಟಿಂಗ್ ಶುರುವಾಗಿದೆ. ಮೊದಲ ಭಾಗ ರಿಲೀಸ್ ಆಗಿ ವರ್ಷದ ನಂತರ ಎರಡನೇ ಭಾಗಕ್ಕೆ ಚಾಲನೆ ಸಿಕ್ಕಿದೆ. ಸುಕುಮಾರ್ ಮತ್ತವರ ತಂಡ ಈ ಬಾರಿ 1000 ಕೋಟಿ ರೂ. ಬಾಕ್ಸಾಫೀಸ್ ಟಾರ್ಗೆಟ್ ಇಟ್ಟುಕೊಂಡು ಸಿನಿಮಾ ಕಟ್ಟಿಕೊಡುತ್ತಿದ್ದಾರೆ.
ಮಾಸ್ ಮಸಾಲಾ ಎಂಟರ್‌ಟ್ರೈನರ್ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ 'ಪುಷ್ಪ'ರಾಜ್ ಅಲ್ಲು ಅರ್ಜುನ್ ಸ್ಟೈಲ್, ಲುಕ್, ಮ್ಯಾನರಿಸಂ, ಡೈಲಾಗ್ಸ್ ಸಖತ್ ಕಿಕ್ ಕೊಟ್ಟಿತ್ತು. ಕಥೆ ಸೀದಾಸಾದಾ ಅನ್ನಿಸಿದರೂ ಟ್ರೀಟ್‌ಮೆಂಟ್ ಮಜವಾಗಿತ್ತು. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಪ್ಲಸ್ ಆಗಿತ್ತು. ಅದರಲ್ಲೂ ಡೈಲಾಗ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 'ಪುಷ್ಪ' ತಗ್ಗೋದೆ ಇಲ್ಲ ಎನ್ನು ಡೈಲಾಗ್ ದೇಶ್ಯಾದ್ಯಂತ ಸದ್ದು ಮಾಡಿದ್ದು ಗೊತ್ತೇಯಿದೆ.
2022ರ
ಟಾಪ್
10
ಹಾಡುಗಳ
ಲಿಸ್ಟ್
ರಿಲೀಸ್
ಮಾಡಿದ
ಯೂಟ್ಯೂಬ್:
'ಪುಷ್ಪ'
ಸಿನಿಮಾದ್ದೇ
ದರ್ಬಾರ್!
'ಪುಷ್ಪ' ಸೀಕ್ವೆಲ್‌ನಲ್ಲೂ ಡೈಲಾಗ್ಸ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಪ್ರೀಕ್ವೆಲ್‌ನಲ್ಲಿ 'ಪುಷ್ಪ'ರಾಜ್ ರಕ್ತಚಂದನದ ಸ್ಮಗ್ಲರ್ ಆಗೋದು, ಆ ಇಡೀ ಸಿಂಡಿಕೇಟ್‌ನ ತನ್ನ ಹತೋಟಿಗೆ ತೆಗೆದುಕೊಳ್ಳುವುದನ್ನು ಮಾತ್ರ ನೋಡಿದ್ದೇವೆ. ಆತನ ಅಸಲಿ ಆಟ ಏನು ಎನ್ನುವುದು ಮುಂದಿನ ಭಾಗದಲ್ಲಿ ನೋಡಬೇಕಿದೆ. ಅದಕ್ಕೆ ತಕ್ಕಂತೆ ಡೈಲಾಗ್ಸ್ ಕೂಡ ಇರಲಿದೆ.

'ಪುಷ್ಪ - 2' ಡೈಲಾಗ್ಸ್ ಲೀಕ್
ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಜೋಡಿ 'ಪುಷ್ಪ - 2' ಮತ್ತಷ್ಟು ರೋಚಕವಾಗಿ ಕಟ್ಟಿಕೊಡುವ ಲೆಕ್ಕಾಚಾರದಲ್ಲಿದೆ. ಅದೇ ಕಾರಣಕ್ಕೆ ಸಿನಿಮಾ ಶೂಟಿಂಗ್ ಬಹಳ ತಡವಾಗಿದೆ. ಇದೆಲ್ಲದರ ನಡುವೆ ಚಿತ್ರದ ಡೈಲಾಗ್‌ವೊಂದು ಲೀಕ್ ಆಗಿದೆ ಎನ್ನಲಾಗುತ್ತಿದೆ. "ಕಾಡಲ್ಲಿ ಪ್ರಾಣಿಗಳು ನಾಲ್ಕು ಹೆಜ್ಜೆ ಹಿಂದೆ ಇಟ್ಟಿವೆ ಅಂದರೆ ಹುಲಿ ಬಂತು ಎಂದು ಅರ್ಥ.. ಅದೇ ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ ಅಂದರೆ 'ಪುಷ್ಪ'ರಾಜ್ ಬಂದ ಎಂದು ಅರ್ಥ". ಈ ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಈ ಡೈಲಾಗ್ ಚಿತ್ರದಲ್ಲಿ ಇರುತ್ತಾ?
ಈ ಡೈಲಾಗ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಖತ್ ಮಜವಾಗಿದೆ ಡೈಲಾಗ್ ಎಂದು ಹೇಳುತ್ತಿದ್ದಾರೆ. ಆದರೆ ನಿಜಕ್ಕೂ ಇದು 'ಪುಷ್ಪ - 2' ಡೈಲಾಗಾ ಅಥವಾ ಅಭಿಮಾನಿಗಳು ಸುಮ್ಮನೆ ತೇಲಿಬಿಟ್ಟಿದ್ದಾರಾ? ಎನ್ನುವ ಚರ್ಚೆ ನಡೀತಿದೆ. ಇಂತಾದೊಂದು ಜಬರ್ದಸ್ತ್ ಡೈಲಾಗ್ ಚಿತ್ರದಲ್ಲಿ ಇದ್ದಿದ್ದರೆ ಚೆನ್ನಾಗಿತ್ತು. ಈಗಲೇ ಲೀಕ್ ಆಗಿರುವುದರಿಂದ ಇದು ಸಿನಿಮಾದಲ್ಲಿ ಇರುತ್ತಾ, ಇಲ್ವಾ? ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

350 ಕೋಟಿ ಬಾಚಿದ್ದ 'ಪುಷ್ಪ'
ಕಳೆದ ವರ್ಷ ಡಿಸೆಂಬರ್ 17ಕ್ಕೆ ತೆರೆಗಪ್ಪಳಿಸಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾ 350 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಉತ್ತರ ಭಾರತದಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 'ಜುಕೆಗಾ ನಹೀ' ಎಂದು ಬಾಲಿವುಡ್ ಪ್ರೇಕ್ಷಕರು 'ಪುಷ್ಪ'ರಾಜ್ ಮೋಡಿಗೆ ಫಿದಾ ಆಗಿದ್ದರು.

'ತಗ್ಗೋದೆ ಇಲ್ಲ' ಡೈಲಾಗ್ ಅಪ್‌ಗ್ರೇಡ್
ಇನ್ನು 'ತಗ್ಗೋದೆ ಇಲ್ಲ' ಡೈಲಾಗ್ 'ಪುಷ್ಪ' ಚಿತ್ರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೀಕ್ವೆಲ್‌ನಲ್ಲಿ ಇದನ್ನು ಅಪ್‌ಗ್ರೇಡ್ ಮಾಡಿದ್ದು, 'ಅಸಲು ತಗ್ಗೋದೇ ಇಲ್ಲ' ಎಂದು ಬದಲಿಸಿದ್ದಾರೆ ಎನ್ನಲಾಗ್ತಿದೆ. ಅದೆಲ್ಲಾ ಏನೇ ಇದ್ದರೂ 'ಪುಷ್ಪ'- 2 ತಡವಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಬನ್ನಿ ಸಿನಿಮಾ ಬಂದು ವರ್ಷ ಆಯ್ತು. ಈಗ ಮತ್ತೆ ಸುಕುಮಾರ್ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. 'ಪುಷ್ಪ'- 2 ಬಿಟ್ಟು ಬೇರೆ ಸಿನಿಮಾದಲ್ಲಿ ನಟಿಸುತ್ತಿಲ್ಲ. ಹಾಗಾದರೆ ಮತ್ತೆ ಸ್ಟೈಲಿಶ್ ಸ್ಟಾರ್‌ನ ನಾವು ತೆರೆಮೇಲೆ ನೋಡೊದು ಯಾವಾಗ ಎಂದು? ತಲೆ ಕೆಡಿಸಿಕೊಂಡಿದ್ದಾರೆ.