Don't Miss!
- Sports
Ind vs NZ 2nd T20I: 2ನೇ ಪಂದ್ಯದ ಸಂಭಾವ್ಯ ಆಡುವ ಬಳಗ, ಸಮಯ, ನೇರಪ್ರಸಾರದ ಮಾಹಿತಿ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ- 2' ಚಿತ್ರೀಕರಣ ಆರಂಭ.. ಮೇಕಿಂಗ್ ಸ್ಟಿಲ್ ಲೀಕ್: ಸರ್‌ಪ್ರೈಸ್ ಟೀಸರ್ ರಿಲೀಸ್ ಪ್ಲ್ಯಾನ್
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪ'- 2 ಸಿನಿಮಾ ಶೂಟಿಂಗ್ ಕೊನೆಗೂ ಶುರುವಾಗಿದೆ. ಮೊದಲ ಭಾಗ ತೆರೆಕಂಡು ಒಂದು ವರ್ಷದ ನಂತರ ಎರಡನೇ ಭಾಗದ ಚಿತ್ರೀಕರಣ ಆರಂಭಿಸಿದೆ ಚಿತ್ರತಂಡ. ಹೈದರಾಬಾದ್‌ನ ಪಂಜಾಗುಡ್ಡಾದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್ ಕೂಡ ಭಾಗವಹಿಸಿದ್ದಾರೆ.
ಕಳೆದ ವರ್ಷ ತೆರೆಕಂಡಿದ್ದ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಐಕಾನ್ ಸ್ಟಾರ್ ರಕ್ತಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಆಗಿ ಅಬ್ಬರಿಸಿದರೆ ಆತನ ಮನದನ್ನೆ ಶ್ರೀವಲ್ಲಿ ಆಗಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಈ ಮಾಸ್ ಮಸಾಲಾ ಎಂಟರ್‌ಟೈನರ್ ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಿಂದಿ ಬೆಲ್ಟ್‌ನಲ್ಲೂ ಸಖತ್ ಸದ್ದು ಮಾಡಿತ್ತು. ಬಾಲಿವುಡ್ ಮಂದಿ ಕೂಡ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ.
"ಕಾಡಲ್ಲಿ
ಪ್ರಾಣಿಗಳು
4
ಹೆಜ್ಜೆ
ಹಿಂದೆ
ಇಟ್ಟಿವೆ
ಎಂದರೆ"....
ಪುಷ್ಪ-
2
ಡೈಲಾಗ್
ಲೀಕ್!
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಸುಕುಮಾರ್ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೀಕ್ವೆಲ್‌ನಲ್ಲಿ ನಟಿಸಿದ್ದ ಬಹುತೇಕಲ ಕಲಾವಿದರು ಸೀಕ್ವೆಲ್‌ನಲ್ಲೂ ಬಣ್ಣ ಹಚ್ಚಲಿದ್ದಾರೆ. ಈ ಬಾರಿ ಪುಷ್ಪರಾಜ್ ವರ್ಸಸ್ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ನಡುವಿನ ಕಾದಾಟ ಸಿನಿರಸಿಕರಿಗೆ ಕಿಕ್ ಕೊಡಲಿದೆ.

ಅಲ್ಲು ಸ್ಟುಡಿಯೋದಲ್ಲಿ ಚಿತ್ರೀಕರಣ
ಹೈದರಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ 'ಪುಷ್ಪ'- 2 ಚಿತ್ರೀಕರಣ ಶುರುವಾಗಿದೆ. ಕೆಲ ದಿನಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಅಲ್ಲು ಅರವಿಂದ್ ಒಡೆತನದ ಈ ಸ್ಟುಡಿಯೋವನ್ನು ಉದ್ಘಾಟಿಸಿದ್ದರು. ತಮ್ಮದೇ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ನಡೀತಿದ್ದು. ಅಲ್ಲು ಅರ್ಜುನ್ ಕೂಡ 'ಪುಷ್ಪ'ರಾಜ್ ಗೆಟಪ್‌ನಲ್ಲಿ ಅಖಾಡಕ್ಕೆ ಇಳಿದಿದ್ದಾರೆ. 2 ದಿನಗಳ ನಂತರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮುಂದುವೆರೆಯುತ್ತೆ ಎನ್ನಲಾಗ್ತಿದೆ.

ಮೇಕಿಂಗ್ ಸ್ಟಿಲ್ ಲೀಕ್
ಚಿತ್ರಕ್ಕೆ ಸಂಬಂಧಿಸಿದ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಇದು ಹೊಸ ಶೆಡ್ಯೂಲ್ ಮೇಕಿಂಗ್ ಸ್ಟಿಲ್ ಎನ್ನಲಾಗ್ತಿದೆ. ಆದರೆ 'ಪುಷ್ಪ'ರಾಜ್ ಹಳೇ ಗೆಟಪ್‌ನಲ್ಲೇ ಬೈಕ್ ಮೇಲೆ ಕೂತಿರುವುದು ನೋಡಿದರೆ ಇದು ಮೊದಲ ಭಾಗದ ಅನ್‌ಸೀನ್ ಪಿಕ್ ಎನ್ನಿಸ್ತಿದೆ. ಕಳೆದ ವರ್ಷ ಡಿಸೆಂಬರ್ 17ಕ್ಕೆ ಪ್ರೀಕ್ವೆಲ್ ರಿಲೀಸ್ ಆಗಿತ್ತು. ಸರಿಯಾಗಿ ಒಂದು ವರ್ಷಕ್ಕೆ ಅಂದರೆ ಈ ಶನಿವಾರ ಸೀಕ್ವೆಲ್‌ನ ಸಣ್ಣ ಝಲಕ್ ರಿಲೀಸ್ ಮಾಡ್ತಾರೆ ಎನ್ನಲಾಗ್ತಿದೆ. ಅದನ್ನು 'ಅವತಾರ್- 2' ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶನ ಮಾಡುವ ಬಗ್ಗೆ ಚರ್ಚೆ ನಡೀತಿದೆ.

1000 ಕೋಟಿ ಕಲೆಕ್ಷನ್ ಟಾರ್ಗೆಟ್
ಪ್ರೀಕ್ವೆಲ್ 350 ಕೋಟಿ ಕಲೆಕ್ಷನ್ ಮಾಡಿತ್ತು. ಸೀಕ್ವೆಲ್‌ಗಿರೋ ಕ್ರೇಜ್‌ನ ಎನ್‌ಕ್ಯಾಶ್ ಮಾಡಿಕೊಂಡು 1000 ಕೋಟಿ ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಸೀಕ್ವೆಲ್‌ನ ತೆರೆಗೆ ತರುವ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಕಥೆಯನ್ನು ತಿದ್ದಿತೀಡಿ ಒಂದು ಶೇಪ್‌ಗೆ ತಂದಿದ್ದಾರೆ ಸುಕುಮಾರ್. ಸದ್ಯ ಶೂಟಿಂಗ್ ಆರಂಭಿಸಿದ್ದು 2024ರಲ್ಲಿ ಚಿತ್ರವನ್ನು ತೆರೆಗೆ ತರುವ ಸಾಧ್ಯತೆಯಿದೆ. KGF ಮೊದಲ ಭಾಗ 250 ಕೋಟಿ ಗಳಿಸಿದ್ರೆ, ಎರಡನೇ ಭಾಗ 1250 ಕೋಟಿ ಗಳಿಸಿ ದಾಖಲೆ ಬರೆದಿದ್ದು ಗೊತ್ತೇಯಿದೆ.

'ಪುಷ್ಪ'- 2 ಡೈಲಾಗ್ ಕೂಡ ಲೀಕ್
"ಕಾಡಲ್ಲಿ ಪ್ರಾಣಿಗಳು ನಾಲ್ಕು ಹೆಜ್ಜೆ ಹಿಂದೆ ಇಟ್ಟಿವೆ ಅಂದರೆ ಹುಲಿ ಬಂತು ಎಂದು ಅರ್ಥ.. ಅದೇ ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ ಅಂದರೆ 'ಪುಷ್ಪ'ರಾಜ್ ಬಂದ ಎಂದು ಅರ್ಥ" ಇದು 'ಪುಷ್ಪ'- 2 ಚಿತ್ರದ ಡೈಲಾಗ್ ಎನ್ನಲಾಗ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಆದರೆ ಇದು ನಿಜಕ್ಕೂ ಸಿನಿಮಾ ಡೈಲಾಗ್ ಹೌದೋ ಅಲ್ವೋ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.