For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಸಿನಿಮಾ: ಆಕಾಶ ಮುಟ್ಟಿದ ಅಲ್ಲು ಅರ್ಜುನ್ ಸಂಭಾವನೆ!

  |

  ನಟ ಅಲ್ಲು ಅರ್ಜುನ್ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಅಲ್ಲು ನಟನೆಯ 'ಅಲಾ ವೈಕುಂಟಪುರಂಲೊ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಇದೀಗ 'ಪುಷ್ಪ' ಸಿನಿಮಾ ಸಹ ಭಾರಿ ಹಿಟ್ ಆಗುವ ನಿರೀಕ್ಷೆಯನ್ನು ಈಗಾಗಲೇ ಹುಟ್ಟಿಸಿದೆ.

  ಸುಕುಮಾರ್ ನಿರ್ದೇಶಿಸುತ್ತಿರುವ 'ಪುಷ್ಪ' ಸಿನಿಮಾ ಚಿತ್ರೀಕರಣ ಮುಗಿಯುವ ಮುನ್ನವೇ ಹಲವಾರು ಕೋಟಿ ಬ್ಯುಸಿನೆಸ್ ಮಾಡಿ ಆಗಿದೆ. 'ಪುಷ್ಪ' ಸಿನಿಮಾ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಸಿನಿಮಾ ಸೂಪರ್-ಡೂಪರ್ ಹಿಟ್ ಪಕ್ಕಾ ಎನ್ನಲಾಗುತ್ತಿದೆ.

  'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗುವುದನ್ನು ಚಿತ್ರತಂಡ ಖಾತ್ರಿಪಡಿಸಿದೆ. ಈ ಸುದ್ದಿಯ ಜೊತೆಗೆ 'ಪುಷ್ಪ' ಸಿನಿಮಾಕ್ಕೆ ನಟ ಅಲ್ಲು ಅರ್ಜುನ್ ತೆಗೆದುಕೊಂಡಿರುವ ಸಂಭಾವನೆ ದಕ್ಷಿಣ ಭಾರತ ಸಿನಿಮಾ ರಂಗದ ಹುಬ್ಬೇರುವಂತೆ ಮಾಡಿದೆ.

  ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವ ಅಲ್ಲು ಅರ್ಜುನ್

  ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವ ಅಲ್ಲು ಅರ್ಜುನ್

  'ಪುಷ್ಪ' ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಬರೋಬ್ಬರಿ ಅರ್ಧ ಶತಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ಬರೋಬ್ಬರಿ 50 ಕೋಟಿ ರೂಪಾಯಿ! ಸಂಭಾವನೆ ಜೊತೆಗೆ ಸಿನಿಮಾದ ಒಟ್ಟು ಕಲೆಕ್ಷನ್‌ನ ಒಂದಿಷ್ಟು ಭಾಗವನ್ನು ಅಲ್ಲು ಅರ್ಜುನ್ ತೆಗೆದುಕೊಳ್ಳಲಿದ್ದಾರೆ. ಸಿನಿಮಾದ ಲಾಭದ ನಿರ್ದಿಷ್ಟ ಭಾಗವನ್ನು ಹೀರೋಗೆ ಕೊಡುವುದು ತೆಲುಗು ಸಿನಿರಂಗದಲ್ಲಿ ಸಾಮಾನ್ಯ. ಒಂದು ವೇಳೆ ಸಿನಿಮಾ ಫ್ಲಾಪ್ ಆದರೆ ಹೀರೋ ತನ್ನ ಸಂಭಾವನೆ ಕಡಿತಗೊಳಿಸಿಕೊಳ್ಳುತ್ತಾನೆ.

  35 ಕೋಟಿ ಇದ್ದ ಅಲ್ಲು ಅರ್ಜುನ್ ಸಂಭಾವನೆ

  35 ಕೋಟಿ ಇದ್ದ ಅಲ್ಲು ಅರ್ಜುನ್ ಸಂಭಾವನೆ

  'ಅಲಾ ವೈಕುಂಟಪುರಂಲೋ' ಸಿನಿಮಾಕ್ಕೆ ಅಲ್ಲು ಅರ್ಜುನ್ 35 ಕೋಟಿ ರು ಸಂಭಾವನೆ ಪಡೆದಿದ್ದರು. ಆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಸಹ ತಮ್ಮ ಸಂಭಾವನೆಯನ್ನು ಏರಿಸಿಕೊಂಡರು. ಅಲ್ಲು ಅರ್ಜುನ್ 50 ಕೋಟಿ ಪಡೆಯುತ್ತಿರುವುದು ಒಂದು ಭಾಗಕ್ಕೆ ಮಾತ್ರ. ಪುಷ್ಪ ಸಿನಿಮಾದ ಎರಡೂ ಭಾಗಕ್ಕೆ ಒಟ್ಟು 100 ಕೋಟಿ ಪಡೆಯಲಿದ್ದಾರೆ.

  ಪ್ರಭಾಸ್ ನಂತರ ಹೆಚ್ಚು ಸಂಭಾವನೆ ಪಡೆದ ತೆಲುಗು ನಟ

  ಪ್ರಭಾಸ್ ನಂತರ ಹೆಚ್ಚು ಸಂಭಾವನೆ ಪಡೆದ ತೆಲುಗು ನಟ

  ದೊಡ್ಡ ಮೊತ್ತದ ಸಂಭಾವನೆ ಪಡೆವ ಮೂಲಕ ಪ್ರಭಾಸ್ ನಂತರ ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ತೆಲುಗಿನ ನಾಯಕ ನಟರಾಗಿದ್ದಾರೆ ಅಲ್ಲು ಅರ್ಜುನ್. ಚಿರಂಜೀವಿ, ಜೂ.ಎನ್‌ಟಿಆರ್ ಸಹ ಯಾವ ಸಿನಿಮಾಕ್ಕೂ 50 ಕೋಟಿ ಸಂಭಾವನೆ ಪಡೆದಿಲ್ಲ.

  ಮನೆಬಾಗಿಲಿಗೆ ಆಕ್ಸಿಜನ್ ಬರ್ಬೇಕಾ? ಹಾಗಾದ್ರೆ ಸೋನು ಸೂದ್ ಸಂಪರ್ಕಿಸಿ | Filmibeat Kannada
  ರಶ್ಮಿಕಾ ನಾಯಕಿ, ಫಹಾದ್ ಫಾಸಿಲ್ ವಿಲನ್

  ರಶ್ಮಿಕಾ ನಾಯಕಿ, ಫಹಾದ್ ಫಾಸಿಲ್ ವಿಲನ್

  'ಪುಷ್ಪ' ಸಿನಿಮಾದ ಚಿತ್ರೀಕರಣವು ಅಂತಿಮ ಹಂತದಲ್ಲಿದ್ದು ಕೊರೊನಾ ಕಾರಣದಿಂದ ಚಿತ್ರೀಕರಣ ನಿಂತಿದೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಾಣ ಮಾಡಿದ್ದಾರೆ.

  English summary
  Allu Arjun charging big amount as remuneration for movie Pushpa. He is taking 50 crore rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X