For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು

  |

  ನಟ-ರಾಜಕಾರಣಿ ಪವನ್ ಕಲ್ಯಾಣ್ ಆಂಧ್ರ-ತೆಲಂಗಾಣದಲ್ಲಿ ಸಿನಿರಂಗ ಹಾಗೂ ರಾಜಕೀಯ ಎರಡರಲ್ಲೂ ದೊಡ್ಡ ಪ್ರಭಾವವುಳ್ಳ ವ್ಯಕ್ತಿ.

  ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಪವನ್ ಕಲ್ಯಾಣ್, ವಿರೋಧಿಗಳನ್ನೂ ಹೊಂದಿದ್ದಾರೆ. ವಿರೋಧಿಗಳು ಪವನ್ ಕಲ್ಯಾಣ್‌ ಅನ್ನು ಟೀಕಿಸುವುದು ಅವರ ಮದುವೆ ವಿಚಾರಕ್ಕೆ. 'ಪವನ್ ಕಲ್ಯಾಣ್ ಮೂರು ಮದುವೆ ಆದವರು' ಎಂದು ಪವನ್ ವಿರೋಧಿಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜರಿಯುತ್ತಲೇ ಇರುತ್ತಾರೆ. ಪವನ್ ಕಲ್ಯಾಣ್ ಕೌಟುಂಬಿಕ ಮೌಲ್ಯಗಳಿಲ್ಲದ ವ್ಯಕ್ತಿ ಎಂಬುದು ವಿರೋಧಿಗಳ ಆರೋಪ.

  'ವಕೀಲ್ ಸಾಬ್' ಸಿನಿಮಾದಲ್ಲಿ ಪವನ್ ಕಲ್ಯಾಣ್‌ ಸಹ ನಟಿ ಅನನ್ಯಾ ನಾಗಲ್ಲ, ಪವನ್ ಕಲ್ಯಾಣ್ ಅವರ ಮಗಳ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಪವನ್ ಕಲ್ಯಾಣ್ ತಮ್ಮ ಕುಟುಂಬಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಅಭಿಮಾನಿಗಳಿಗೆ ಮನಗಾಣಿಸುವ ಯತ್ನ ಮಾಡಿದ್ದಾರೆ.

  ಪವನ್ ಮಗಳ ಬಗ್ಗೆ ಅನನ್ಯಾ ನಾಗಲ್ಲ ಮಾತು

  ಪವನ್ ಮಗಳ ಬಗ್ಗೆ ಅನನ್ಯಾ ನಾಗಲ್ಲ ಮಾತು

  'ವಕೀಲ್ ಸಾಬ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿರುವ ಅನನ್ಯಾ ನಾಗಲ್ಲ, ''ಪವನ್ ಕಲ್ಯಾಣ್ ಅವರು ತಮ್ಮ ಮಗಳ ಜೊತೆಗೆ ಹೊಂದಿರುವ ಬಾಂಧವ್ಯ ಕಂಡು ಬೆರಗಾದೆ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸೆಟ್‌ಗೆ ಮಗಳು ಬಂದರೆ ಆಕೆಯನ್ನು ಬಿಟ್ಟಿರುವುದೇ ಇಲ್ಲ, ಹೊರಡಬೇಕಾದರೂ ತಬ್ಬಿ, ಹಣೆಗೆ ಮುತ್ತಿಟ್ಟು ಭಾರವಾದ ಹೃದಯದಿಂದ ಮಗಳನ್ನು ಬೀಳ್ಕೊಡುತ್ತಾರೆ ಎಂದಿದ್ದಾರೆ ಅನನ್ಯಾ.

  ಆಧ್ಯ ಕೋನಿಡೇಲ ಬಗ್ಗೆ ವಿಪರೀತ ಪ್ರೇಮ

  ಆಧ್ಯ ಕೋನಿಡೇಲ ಬಗ್ಗೆ ವಿಪರೀತ ಪ್ರೇಮ

  'ವಕೀಲ್ ಸಾಬ್' ಚಿತ್ರೀಕರಣದ ವೇಳೆ ಮೆಗಾಸ್ಟಾರ್ ಕುಟುಂಬದಿಂದ ಸಾಕಷ್ಟು ಮಂದಿ ಚಿತ್ರೀಕರಣ ಸ್ಥಳಕ್ಕೆ ಬರುತ್ತಿದ್ದರು. ವಿಶೇಷವಾಗಿ ಪವನ್ ಕಲ್ಯಾಣ್ ಮಕ್ಕಳಾದ ಆಧ್ಯ ಕೋನಿಡೇಲ ಮತ್ತು ಅಕಿರಾ ನಂದನ್ ಅವರುಗಳು ಸಹ ಚಿತ್ರೀಕರಣಕ್ಕೆ ಬರುತ್ತಿದ್ದರಂತೆ. ಮಗನಿಗಿಂತಲೂ ಮಗಳು ಆಧ್ಯ ಕೋನಿಡೇಲ ಮೇಲೆ ಪವನ್‌ಗೆ ವಿಪರೀತ ಪ್ರೀತಿ ಎಂದಿದ್ದಾರೆ ನಟಿ ಅನನ್ಯಾ.

  ಪವನ್‌ಗೆ ನಾಲ್ಕು ಮಂದಿ ಮಕ್ಕಳು

  ಪವನ್‌ಗೆ ನಾಲ್ಕು ಮಂದಿ ಮಕ್ಕಳು

  ಪವನ್ ಕಲ್ಯಾಣ್‌ ನಂದಿನಿ, ರೇಣು ದೇಸಾಯಿ ಹಾಗೂ ರಷ್ಯಾದ ಅನ್ನಾ ಲೆಜ್ನೇವಾ ಮೂವರನ್ನು ಮದುವೆಯಾಗಿದ್ದರು. ಪ್ರಸ್ತುತ ಅನ್ನಾ ಲೆಜ್ನೇವಾ ಜೊತೆ ದಾಂಪತ್ಯ ನಡೆಸುತ್ತಿದ್ದಾರೆ. ಪವನ್‌ಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪವನ್ ಎರಡನೇ ಹೆಂಡತಿ ರೇಣು ದೇಸಾಯಿ ಅವರೊಟ್ಟಿಗೆ ಆಧ್ಯ ಕೋನಿಡೇಲ ಹಾಗೂ ಅಖಿರ ನಂದನ್ ಹಾಗೂ ಅನ್ನಾ ಜೊತೆಗೆ ಪೊಲೇನಾ ಅಂಜನಾ ಪಾವನೋವಾ ಹಾಗೂ ಮಾರ್ಕ್ ಶಂಕರ್ ಪೋವನಿಚ್ ಹೆಸರಿನ ಮಕ್ಕಳನ್ನು ಹೊಂದಿದ್ದಾರೆ ಪವನ್.

  ತೆಲುಗಿನಲ್ಲಿ ಯುವರತ್ನ ಹವಾ ನೋಡಿ ಶಾಕ್ ಆದ ಮಹೇಶ್ ಬಾಬು!! | Filmibeat Kannada
  ಉತ್ತಮ ಪ್ರದರ್ಶನ ಕಾಣುತ್ತಿರುವ 'ವಕೀಲ್ ಸಾಬ್'

  ಉತ್ತಮ ಪ್ರದರ್ಶನ ಕಾಣುತ್ತಿರುವ 'ವಕೀಲ್ ಸಾಬ್'

  ಪವನ್ ಕಲ್ಯಾಣ್ ನಟಿಸಿರುವ 'ವಕೀಲ್ ಸಾಬ್' ಸಿನಿಮಾ ಏಪ್ರಿಲ್‌ 9 ರಂದು ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿನ ಕೋರ್ಟ್‌ ರೂಂ ದೃಶ್ಯಗಳಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಪವನ್ ಕಲ್ಯಾಣ್-ಪ್ರಕಾಶ್ ರೈ ನಟನಾ ಜುಗಲ್‌ಬಂಧಿ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಅನ್ಯಾಯಕ್ಕೆ ಒಳಗಾದ ಯುವತಿಯರ ಪಾತ್ರದಲ್ಲಿ ನಟಿಸಿರುವ ಅಂಜಲಿ, ನಿವೇತಾ ಥಾಮಸ್, ಅನನ್ಯಾ ನಟನೆ ಕುರಿತಾಗಿಯೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲಿಯೂ ಕಿರಿಯ ನಟಿ ಅನನ್ಯಾ ನಟನೆ ಬಗ್ಗೆ ತುಸು ಹೆಚ್ಚಿಗೆ ಪ್ರಶಂಸೆ ಕೇಳಿಬರುತ್ತಿದೆ.

  English summary
  Actress Ananya Nagalla talks about Pawan Kalyan bonding with his daughter Adhay Konidela.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X