For Quick Alerts
  ALLOW NOTIFICATIONS  
  For Daily Alerts

  ಅಂದು ವಿಜಯ್‌ ದೇವರಕೊಂಡ ತಾಯಿಯನ್ನು ಬೈದ ಪಾಪಕ್ಕೆ 'ಲೈಗರ್' ಸೋತಿದೆ ಅಂದ್ರಾ ಅನಸೂಯ?

  |

  ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರಿಗೆ ಭಾರೀ ನಿರಾಸೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ನಟ ವಿಜಯ್ ದೇವರಕೊಂಡ ಇಬ್ಬರನ್ನೂ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ನಟಿ, ನಿರೂಪಕಿ ಅನೂಸೂಯ ಭಾರಧ್ವಜ್ ಮಾಡಿರುವ ಟ್ವೀಟ್ ಒಂದು ವೈರಲ್ ಆಗಿದೆ. 'ಲೈಗರ್' ಸಿನಿಮಾ ಹಿನ್ನಡೆ ಅನುಭವಿಸಿರುವ ಸಮಯದಲ್ಲಿ ಆಕೆ ವಿಜಯ್‌ ದೇವರಕೊಂಡನ ಟಾರ್ಗೆಟ್ ಮಾಡಿ ಈ ರೀತಿ ಬರೆದಿದ್ದಾರೆ ಎಂದು ಚರ್ಚೆ ನಡೀತಿದೆ.

  ಕಿರುತೆರೆಯಲ್ಲಿ ನಿರೂಪಕಿಯಾಗಿ ಭಾರೀ ಜನಪ್ರಿಯತೆ ಗಳಿಸಿರುವ ಅನೂಸೂಯಾ ಇತ್ತೀಚೆಗೆ ಕೆಲ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಅಷ್ಟಕ್ಕೂ ಅನೂಸೂಯ ಮಾಡಿರುವ ಟ್ವೀಟ್‌ನಲ್ಲಿ ಏನ್ ಇದೆ ಅಂದರೆ "ತಾಯಿಯನ್ನು ಬೈದ ಪಾಪ ಸುಮ್ಮನೆ ಹೋಗುವಂತದ್ದಲ್ಲ.. ಕರ್ಮ.. ಕೆಲವೊಮ್ಮೆ ವಾಪಸ್ ಬರುವುದು ತಡವಾಗಬಹುದು ಆದರೆ ಬರುವುದು ಮಾತ್ರ ನಿಶ್ಚಿತ" ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಕಾಮೆಂಟ್ ಬಾಕ್ಸ್‌ನಲ್ಲಿ ಚಿತ್ರ ವಿಚಿತ್ರ ಕಾಮೆಂಟ್‌ಗಳು ಬರ್ತಿವೆ. ಕೆಲವರು ಅನಸೂಯ ಪರ ಮಾತನಾಡಿದ್ದರೆ ಮತ್ತೆ ಕೆಲವರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

  5 ವರ್ಷಗಳ ಹಿಂದೆ ವಿಜಯ್ ದೇವರಕೊಂಡ ನಟನೆಯ 'ಅರ್ಜುನ್ ರೆಡ್ಡಿ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ವಿಜಯ್ ದೇವರಕೊಂಡ ಮ್ಯಾನರಿಸಂ ಹಾಗೂ ಆಟಿಟ್ಯೂಡ್ ಬಹಳ ವಿಭಿನ್ನವಾಗಿ ಇತ್ತು. ಸಿಕ್ಕಾಪಟ್ಟೆ ರಗಡ್ ಆಗಿ ಪಾತ್ರವನ್ನು ಸೃಷ್ಟಿ ಮಾಡಲಾಗಿತ್ತು. ಚಿತ್ರದ ದೃಶ್ಯವೊಂದರಲ್ಲಿ ತಾಯಿಯನ್ನು ಬೈಯುವಂತಹ ಸಂಭಾಷಣೆ ಇತ್ತು. ಸೆನ್ಸಾರ್ ಮಂಡಳಿ ಚಿತ್ರ ಎ ಸರ್ಟಿಫಿಕೇಟ್ ಕೊಟ್ಟು ಕೆಲ ಸಂಭಾಷಣೆಯನ್ನು ಮ್ಯೂಟ್ ಮಾಡುವಂತೆ ಹೇಳಿತ್ತು. ಇದು ವಿಜಯ್ ದೇವರಕೊಂಡ ಬೇಸರಕ್ಕೆ ಕಾರಣವಾಗಿತ್ತು. ಎ ಸರ್ಟಿಫಿಕೇಟ್ ಕೊಟ್ಟ ಮೇಲೆ ಮ್ಯೂಟ್ ಯಾಕೆ ಎಂದು ಕೇಳಿದ್ದರು. ಅಷ್ಟೇ ಅಲ್ಲ ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

  "ಓಟಿಟಿ ₹200 ಕೋಟಿ ಡೀಲ್, ಅವತ್ತೇ 'ಲೈಗರ್' ಸಿನಿಮಾ ಮಾರಿಬಿಟ್ಟಿದ್ದರೆ ಚೆನ್ನಾಗಿತ್ತು": ವಿಜಯ್ ಕಾಳೆಲೆದ ನೆಟ್ಟಿಗರು!

   ಅಭಿಮಾನಿಗಳಿಂದ ಆ ಪದ ಹೇಳಿಸಿದ್ದ ವಿಜಯ್!

  ಅಭಿಮಾನಿಗಳಿಂದ ಆ ಪದ ಹೇಳಿಸಿದ್ದ ವಿಜಯ್!

  ಕಾರ್ಯಕ್ರಮದ ವೇದಿಕೆ ಏರಿದ್ದ ವಿಜಯ್ ದೇವರಕೊಂಡ ಸೆನ್ಸಾರ್‌ ಮಂಡಳಿ ಚಿತ್ರದ ಸಂಭಾಷಣೆಯನ್ನು ಮ್ಯೂಟ್ ಮಾಡುವಂತೆ ಹೇಳಿದ ವಿಚಾರದ ಬಗ್ಗೆ ಮಾತನಾಡಿದ್ದರು. ಆ ಸನ್ನಿವೇಶಕ್ಕೆ ಆ ಡೈಲಾಗ್ ಬೇಕಿತ್ತು. ಅಂತಹ ಸನ್ನಿವೇಶದಲ್ಲಿ ಎಂತಹವರ ಬಾಯಲ್ಲೂ ಅದೇ ಪದ ಬರುತ್ತದೆ. ಹಾಗಿರುವಾಗ ಯಾಕೆ ಅದನ್ನು ಮ್ಯೂಟ್ ಮಾಡಬೇಕು. ಅಭಿಮಾನಿಗಳನ್ನು ಉದ್ದೇಶಿಸಿ ನೀವೆಲ್ಲಾ ಸಿನಿಮಾ ನೋಡುವಾಗ ಮ್ಯೂಟ್ ಮಾಡಿರುವ ಸಂಭಾಷಣೆ ಜಾಗದಲ್ಲಿ ನೀವೇ ಡಬ್ ಮಾಡಿ. ಎಲ್ಲಿ ಒಮ್ಮೆ ಆ ಪದ ಹೇಳಿ ನೋಡೋಣ ಎಂದು ಅಭಿಮಾನಿಗಳಿಂದ ಆ ಪದವನ್ನು ಪದೇ ಪದೆ ಹೇಳಿಸಿದ್ದರು. ಇದು ನಿರೂಪಕಿ ಅನಸೂಯ ಬೇಸರಕ್ಕೆ ಕಾರಣವಾಗಿತ್ತು. ವಿಜಯ್ ದೇವರಕೊಂಡ ವೇದಿಕೆಯಲ್ಲಿ ನಿಂತು ಎಲ್ಲರೂ ಆ ಪದ ಹೇಳುವಂತೆ ಪ್ರೇರೇಪಿಸಿದ್ದು ತಪ್ಪು ಎಂದಿದ್ದರು.

   ವಿಜಯ್ ನಡೆಗೆ ಅನಸೂಯ ಆಕ್ರೋಶ

  ವಿಜಯ್ ನಡೆಗೆ ಅನಸೂಯ ಆಕ್ರೋಶ

  ಮಾಧ್ಯಮಗಳ ಡಿಬೇಟ್‌ನಲ್ಲಿ ಕೂತು ವಿಜಯ್ ದೇವರಕೊಂಡ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಾನು ಒಬ್ಬ ತಾಯಿಯಾಗಿ, ನಾನು ಕೂಡ ಒಬ್ಬ ತಾಯಿಯ ಮಗಳಾಗಿ ಇಂತಹ ಪದವನ್ನು ಬಹಿರಂಗ ವೇದಿಕೆಯಲ್ಲಿ ನಟನೊಬ್ಬ ಹೇಳುವುದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ನೀವು ಸಿನಿಮಾದಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ಯಾವ ಸಂಭಾಷಣೆ ಬೇಕಾದರೂ ಬಳಸಿ. ಆದರೆ ಅಷ್ಟು ದೊಡ್ಡ ಕಾರ್ಯಕ್ರಮದಲ್ಲಿ ನೂರಾರು ಜನರಿಂದ ತಾಯಿಯನ್ನು ಬೈಯುವ ಅವಾಚ್ಯ ಪದವನ್ನು ಹೇಳಿಸುವುದು ಎಷ್ಟು ಸರಿ ಎಂದು ಕೇಳಿದ್ದರು.

   ವಿಜಯ್‌ನ ಟಾರ್ಗೆಟ್ ಮಾಡಿದ್ರಾ ಅನಸೂಯ?

  ವಿಜಯ್‌ನ ಟಾರ್ಗೆಟ್ ಮಾಡಿದ್ರಾ ಅನಸೂಯ?

  'ಲೈಗರ್' ಸಿನಿಮಾ ಬಗ್ಗೆ ಡಿಸಾಸ್ಟರ್ ಟಾಕ್ ಬರ್ತಿದ್ದಂತೆ ಅನಸೂಯ ಈ ಟ್ವೀಟ್ ಮಾಡಿದ್ದಾರೆ. ವಿಜಯ್‌ ದೇವರಕೊಂಡನ ಉದ್ದೇಶಿಸಿ ಆಕೆ ಈಗ ಟ್ವೀಟ್ ಮಾಡಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ. ಅಂದು ತಾಯಿಯನ್ನು ಬೈದಿದ್ದರ ಪ್ರತಿಫಲವಾಗಿ ಇವತ್ತು ವಿಜಯ್‌ ದೇವರಕೊಂಡ ಸಿನಿಮಾ ಸೋತಿದೆ ಅನ್ನುವ ಅರ್ಥದಲ್ಲಿ ಆಕೆ ಟ್ವೀಟ್ ಮಾಡಿದ್ದಾರೆ ಎನ್ನುವುದು ಕೆಲವರ ವಾದ.

   ಟ್ರೋಲ್ ಆಗುತ್ತಿದ್ದಾರೆ ನಿರೂಪಕಿ ಅನಸೂಯ!

  ಟ್ರೋಲ್ ಆಗುತ್ತಿದ್ದಾರೆ ನಿರೂಪಕಿ ಅನಸೂಯ!

  ವಿಜಯ್ ದೇವರಕೊಂಡ ಅಭಿಮಾನಿಗಳು ನಿರೂಪಕಿ ಅನಸೂಯನ ಟ್ರೋಲ್ ಮಾಡುತ್ತಿದ್ದಾರೆ. ನಿನ್ನ ಕೆಲಸ ನೀನು ಮೊದಲು ನೀನು ನೋಡಿಕೊ. ನೀನೇ ಇಷ್ಟು ದಿನ ಡಬಲ್ ಮೀನಿಂಗ್ ಕಾಮಿಡಿ ಶೋನಲ್ಲಿ ನಿರೂಪಕಿಯಾಗಿ ಇದ್ದೆ. ಹಾಟ್ ಹಾಟಾಗಿ ಕಾಣಿಸಿಕೊಂಡು ಡಬಲ್ ಮೀನಿಂಗ್ ಡೈಲಾಗ್ ಪಂಚ್ ಹಾಕುತ್ತಿದ್ದೆ. ಅಂಥಾದ್ದರಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತನಾಡುತ್ತೀಯಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

  English summary
  Anasuya Bharadwaj cryptic Tweet Goes Viral About Liger Movie Actor vijay devarakonda. Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X