twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ಆಂಧ್ರ ಸಿಎಂ ಭೇಟಿ ಯಶಸ್ವಿ ಆಯ್ತಾ? ಕೊಟ್ಟ ಭರವಸೆಗಳೇನು?

    |

    ಸಿನಿಮಾ ಟಿಕೆಟ್ ದರ ಕಡಿತ, ದಿನಕ್ಕೆ ನಾಲ್ಕು ಶೋ ನೀತಿಯನ್ನು ಆಂಧ್ರದ ಜಗನ್ ನೇತೃತ್ವದ ಸರ್ಕಾರ ಜಾರಿಗೆ ತಂದಿತ್ತು. ಸರ್ಕಾರದ ಈ ನಿರ್ಧಾರ ಟಾಲಿವುಡ್ ನಿದ್ದೆ ಕೆಡಿಸಿತ್ತು. ಸೂಪರ್‌ಸ್ಟಾರ್‌ಗಳು ಸಿನಿಮಾ ಬಿಡುಗಡೆ ಮಾಡುವುದನ್ನು ನಿಧಾನಗೊಳಿಸಿದ್ದರು. ಇನ್ನೊಂದು ಕಡೆ ಸರ್ಕಾರದ ಈ ನೀತಿಯ ವಿರುದ್ಧ ಕೆಲವ ತಾರೆಯರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಮೆಗಾಸ್ಟಾರ್ ಚಿರಂಜೀವಿ ತೆಲುಗಿನ ಸ್ಟಾರ್ ನಟರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು.

    ಚಿರಂಜೀವಿ ಕರೆಗೆ ಓಗೊಟ್ಟು ಟಾಲಿವುಡ್ ಸ್ಟಾರ್ ನಟರಾದ ಮಹೇಶ್ ಬಾಬು, ಪ್ರಭಾಸ್, ಹಾಗೂ ನಿರ್ದೇಶಕರಾದ ಎಸ್‌ಎಸ್ ರಾಜಮೌಳಿ, ಕೊರಟಾಲ ಶಿವ ಮತ್ತಿತರರು ಮೆಗಾಸ್ಟಾರ್ ಮುಂದಾಳತ್ವದಲ್ಲಿ ಇಂದು (ಫೆ 10) ಬೆಳಗ್ಗೆ ಹೈದರಾಬಾದ್ ಏರ್‌ಪೋರ್ಟ್‌ನಿಂದ ವಿಜಯವಾಡಕ್ಕೆ ತೆರಳಿದ್ದರು. ಆಂಧ್ರ ಸಿ ಎಂ ಜಗನ್ ಭೇಟಿ ತಮಗಾಗುತ್ತಿರುವ ತೊಂದರೆಯನ್ನು ವಿವರಿಸಿದ್ದರು. ಅದಕ್ಕೆ ಜಗನ್ ಮೋಹನ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

     ಆಂಧ್ರ ಸಿಎಂ ಭೇಟಿ ಮಾಡಲು ತೆರಳಿದ ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ರಾಜಮೌಳಿ: ಯಶಸ್ವಿಯಾಗುತ್ತಾ ಭೇಟಿ? ಆಂಧ್ರ ಸಿಎಂ ಭೇಟಿ ಮಾಡಲು ತೆರಳಿದ ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ರಾಜಮೌಳಿ: ಯಶಸ್ವಿಯಾಗುತ್ತಾ ಭೇಟಿ?

     ಟಿಕೆಟ್ ಬೆಲೆ ಹೆಚ್ಚಿಸಲು ಅವಕಾಶ

    ಟಿಕೆಟ್ ಬೆಲೆ ಹೆಚ್ಚಿಸಲು ಅವಕಾಶ

    ಟಾಲಿವುಡ್ ತಾರೆಯರು ನೀಡಿದ ಸಲಹೆಯನ್ನು ಸಿ ಎಂ ಜಗನ್ ಒಪ್ಪಿಕೊಂಡಿದ್ದು, ಸಿನಿಮಾ ಟಿಕೆಟ್ ದರವನ್ನು ಹೆಚ್ಚಿಸಲು ಅನುಮತಿ ನೀಡಿದ್ದಾರೆ. ಟಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ನಿರ್ಮಾಣ ಆಗುತ್ತವೆ. 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣದ ಸಿನಿಮಾಗಳಿಗೆ ಈಗಾಗಲೇ ನಿಗದಿ ಮಾಡಿರುವ ಸಿನಿಮಾ ಟಿಕೆಟ್ ದರಕ್ಕೆ 100 ರೂಪಾಯಿ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಈ ನೂರು ಕೋಟಿ ಸಿನಿಮಾದಲ್ಲಿ ತಾರೆಯರ ವೆಚ್ಚವನ್ನು ಕೈ ಬಿಡಬೇಕು ಎಂದು ಹೇಳಲಾಗಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.

     ಥಿಯೇಟರ್‌ ಸೌಲಭ್ಯದ ಮೇಲೆ ದರ ಹೆಚ್ಚಳ

    ಥಿಯೇಟರ್‌ ಸೌಲಭ್ಯದ ಮೇಲೆ ದರ ಹೆಚ್ಚಳ

    ಚಿತ್ರಮಂದಿರಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ದರ ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ವಿ ಎಪಿಕ್, ಐನಾಕ್ಸ್ ಹಾಗೂ ಐಮಾಕ್ಸ್ ಅಂತ ಚಿತ್ರಮಂದಿರಗಳಲ್ಲಿ ದರ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಚಿತ್ರಮಂದಿರಗಳು ಜನರಿಗೆ ನೀಡುವ ಸೌಲಭ್ಯದ ಮೇಲೆ ದರ ಹೆಚ್ಚಿಸಬಹುದು ಎಂದು ಹೇಳಿದ್ದು, ಐಶಾರಾಮಿ ಚಿತ್ರಮಂದಿರಗಳಿಗೆ ದರ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಮಲ್ಟಿಪ್ಲೆಕ್ಸ್ ಹಾಗೂ ಎ ಸೆಂಟರ್‌ಗಳಿಗೆ ರಿಲೀಫ್ ಸಿಕ್ಕಂತಾಗಿದೆ.

     ನಷ್ಟದಿಂದ ತಪ್ಪಿಸಿಕೊಂಡ RRR

    ನಷ್ಟದಿಂದ ತಪ್ಪಿಸಿಕೊಂಡ RRR

    ಸಿನಿಮಾ ಟಿಕೆಟ್ ದರ ಇಳಿಕೆ ಮಾಡಿದ್ದರಿಂದ 500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ನಷ್ಟ ಅನುಭವಿಸುವಂತಾಗಿತ್ತು. ಇದರಿಂದ ವಿತರಕರು ಹಣವನ್ನು ವಾಪಾಸ್ ನೀಡುವಂತೆ ಮಾನವಿ ಮಾಡಿಕೊಂಡಿದ್ದರು. ಈ ಮೂಲಕ ಸುಮಾರು 60 ಕೋಟಿಯಷ್ಟು ನಷ್ಟ ಆಗುತ್ತೆ ಎಂದು ಹೇಳಲಾಗಿತ್ತು. ರಾಜಮೌಳಿ ಹಾಗೂ ಟಾಲಿವುಡ್ ಮಂದಿ ಸಿಎಂ ಭೇಟಿಯಿಂದ 60 ಕೋಟಿ ನಷ್ಟದಿಂದ ಪಾರಾದಂತಾಗಿದೆ.

     ರಿಲೀಸ್‌ಗೆ ರೆಡಿ ಬಿಗ್ ಬಜೆಟ್ ಸಿನಿಮಾಗಳು

    ರಿಲೀಸ್‌ಗೆ ರೆಡಿ ಬಿಗ್ ಬಜೆಟ್ ಸಿನಿಮಾಗಳು

    ಟಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಆದರೆ, ಟಿಕೆಟ್ ದರ ಇಳಿಕೆಯಿಂದ ಬಿಡುಗಡೆಗೆ ಮೀನಾಮೇಷ ಎಣಿಸಿದ್ದರು. ರಾಜಮೌಳಿಯ ಪ್ಯಾನ್ ಇಂಡಿಯಾ ಸಿನಿಮಾ RRR, ಕೊರಟಾಲ ಶಿವ ನಿರ್ದೇಶಿಸಿದ ಮೆಗಾಸ್ಟಾರ್ ಚಿರಂಜೀವಿ, ಕಾಜಲ್ ಅಗರ್ವಾಲ್, ರಾಮ್‌ಚರಣ್ ಹಾಗೂ ಪೂಜಾ ಹೆಗ್ಡೆಯ 'ಆಚಾರ್ಯ ತೆರೆಗೆ ರೆಡಿಯಾಗಿದೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ'. ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಸಿನಿಮಾಗಳು ಶೀಘ್ರವೇ ರಿಲೀಸ್ ಆಗಲಿವೆ.

    English summary
    Andra CM Jagan granted what Tollywood expected after Chiranjeevi Mahesh Babu Prabhas met CM. The celebrities met the CM to discuss issues regarding to movie ticket prices hike.
    Friday, February 11, 2022, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X