twitter
    For Quick Alerts
    ALLOW NOTIFICATIONS  
    For Daily Alerts

    ಬಾಲಕೃಷ್ಣ'ಅಖಂಡ' ಸಿನಿಮಾ ನೋಡಿದವರಿಗೆ ಆಂಧ್ರ ಸರ್ಕಾರದಿಂದ ಕೇಸ್?: ಯಾಕೀ ಕಾನೂನು ಸಮರ?

    |

    ಲೆಜೆಂಡ್ ಬಾಲಕೃಷ್ಣ ಅಭಿನಯದ ಸಿನಿಮಾ 'ಅಖಂಡ' ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತೆ. ಕಳೆದ ಬಾಲಕೃಷ್ಣ ವೃತ್ತಿ ಬದುಕಿನಲ್ಲಿ ಈ ಸಿನಿಮಾ ಹೊಸ ಅಧ್ಯಾಯ ಬರೆದಿತ್ತು. ಬಾಕ್ಸಾಫೀಸ್‌ನಲ್ಲಿ ಬೇರೆ ಎಲ್ಲಾ ಸಿನಿಮಾಗಳನ್ನೂ ಚಮ್ಕಾಯಿಸಿ ಮುನ್ನುಗಿತ್ತು. ಬಾಲಕೃಷ್ಣ ಹಾಗೂ ಬೊಯಾಪಟ್ಟಿ ಶ್ರೀನು ಜೋಡಿ ಮತ್ತೆ ಟಾಲಿವುಡ್‌ನಲ್ಲಿ ಜಾದು ಮಾಡಿತ್ತು. ಸದ್ಯಕ್ಕೆ ಈ ಸಿನಿಮಾವೀಗ ಒಟಿಟಿಯಲ್ಲೂ ಬಿಡುಗಡೆಯಾಗಿದ್ದು, ಅಲ್ಲೂ ಯಶಸ್ವಿ ಕಾಣುತ್ತಿದೆ.

    ಬಾಲಕೃಷ್ಣ ಅಭಿನಯದ ಈ ಮಾಸ್ ಎಂಟರ್‌ಟೈನರ್ ಈಗ ಮತ್ತೆ ಸುದ್ದಿಯಲ್ಲಿದೆ. ಥಿಯೇಟರ್‌ ಹಾಗೂ ಒಟಿಟಿ ಎರಡರಲ್ಲೂ ಮೋಡಿ ಮಾಡಿದ ಈ ಸಿನಿಮಾ ಬೇಡದ ವಿಷಯಕ್ಕೆ ಸೌಂಡು ಮಾಡುತ್ತಿದ್ದೆ. 'ಅಖಂಡ' ಸಿನಿಮಾ ನೋಡಿದ ಇಡೀ ಆಂಧ್ರ ಪ್ರದೇಶದ ಒಂದು ಗ್ರಾಮದ ಗ್ರಾಮಸ್ಥರ ವಿರುದ್ಧ ಸರ್ಕಾರ ತಿರುಗಿಬೀಳುವ ಎಲ್ಲಾ ಸಾಧ್ಯತೆಗಳಿವೆ. ಇಡೀ ಗ್ರಾಮದಲ್ಲಿರುವ ಜನರ ವಿರುದ್ಧ ಕೇಸ್ ದಾಖಲಿಸುವ ಸಾಧ್ಯತೆಗಳಿವೆ.

     'ಅಖಂಡ' ನೋಡಿದವರಿಗೆ ಕಂಟಕ?

    'ಅಖಂಡ' ನೋಡಿದವರಿಗೆ ಕಂಟಕ?

    'ಅಖಂಡ' ಬಿಡುಗಡೆ ಆದಲ್ಲಿಂದ ಈ ಸಿನಿಮಾಗೆ ಕ್ರೇಜ್ ಕಮ್ಮಿನೇ ಆಗಿಲ್ಲ. ಥಿಯೇಟರ್‌ನಿಂದ ಒಟಿಟಿಗೆ ಶಿಫ್ಟ್ ಆದರೂ ಜನರು ಮಾತ್ರ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. 'ಅಖಂಡ' ಕ್ರೇಜ್ ಹೇಗಿದೆ ಅಂದರೆ, ಆಂಧ್ರದ ಹಳ್ಳಿಯೊಂದರಲ್ಲಿ ಜನರು ತಾವೇ ಬೆಳ್ಳಿ ಪರದೆಯೊಂದನ್ನು ಸೃಷ್ಟಿಕೊಂಡು ಅದರ ಮೂಲಕ ಸಿನಿಮಾ ನೋಡಿದ್ದಾರೆ. ಈ ವಿಡಿಯೋಗಳನ್ನು ಬಾಲಕೃಷ್ಣ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಅದ್ಯಾವಾಗ ಈ ವಿಡಿಯೋ ವೈರಲ್ ಆಯ್ತೋ, ಅಲ್ಲಿಂದ 'ಅಖಂಡ' ಸಿನಿಮಾ ನೋಡಿದ ಗ್ರಾಮಸ್ಥರಿಗೆ ನಡುಕ ಶುರುವಾಗಿದೆ.

     ಗ್ರಾಮಸ್ಥರ ವಿರುದ್ಧ ಸರ್ಕಾರದ ಕೆಂಗಣ್ಣು

    ಗ್ರಾಮಸ್ಥರ ವಿರುದ್ಧ ಸರ್ಕಾರದ ಕೆಂಗಣ್ಣು

    ಆಂಧ್ರದ ಹಳ್ಳಿಯ ಜನರು ಕಾನೂನು ಬಾಹಿರವಾಗಿ 'ಅಖಂಡ' ಸಿನಿಮಾ ನೋಡಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಬೇಕು ಎಂದು ವೈಎಸ್‌ಆರ್ ಪಕ್ಷದ ಮುಖಂಡರು ಆಗ್ರಹಿಸುತ್ತಿದ್ದಾರೆ. ಒಂದು ಸಿನಿಮಾವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಲು ವಿತರಕರು, ಪ್ರದರ್ಶಕರು, ನಿರ್ಮಾಪಕರು ಇಲ್ಲವೇ ಸರ್ಕಾರದ ಅನುಮತಿ ಇರಬೇಕು. ಆದರೆ, ಆಂಧ್ರದ ಗ್ರಾಮಸ್ಥರು ಅನುಮತಿಯನ್ನು ಪಡೆಯದೆ 'ಅಖಂಡ' ಸಿನಿಮಾ ಪ್ರದರ್ಶನ ಮಾಡಿದ್ದು, ರಾಜ್ಯ ಸರ್ಕಾರದಿಂದ ಈ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

     ಹಾಟ್‌ಸ್ಟಾರ್ ಮೂಲಕ ಸಿನಿಮಾ ವೀಕ್ಷಣೆ

    ಹಾಟ್‌ಸ್ಟಾರ್ ಮೂಲಕ ಸಿನಿಮಾ ವೀಕ್ಷಣೆ

    ಆಂಧ್ರದ ಹಳ್ಳಿಯ ಜನರು ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ 'ಅಖಂಡ' ನೋಡಲು ಸಜ್ಜಾಗಿದ್ದರು. ಡಿಸ್ನಿ ಹಾಟ್‌ಸ್ಟಾರ್ ಮೂಲಕ ಪ್ರೊಜೆಕ್ಟರ್‌ಗೆ ಸಿನಿಮಾವನ್ನು ಬಿಗ್ ಸ್ಕ್ರೀನ್‌ಗೆ ಅಳವಡಿಸಿದ್ದರು. ಸೌಂಡ್ ಸಿಸ್ಟಿಮ್ ಹಾಕಿದ್ದರು. ಇದು ಸಿನಿಮಾಟೊಗ್ರಫಿ ಕಾಯ್ದೆ ಪ್ರಕಾರ ಕಾನೂನು ಬಾಹಿರ ಎನ್ನಲಾಗಿದೆ. ಅಲ್ಲದೆ ಯಾವುದೇ ಒಟಿಟಿಯ ಸಿನಿಮಾ, ಇಲ್ಲವೆ ವೆಬ್ ಸಿರೀಸ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಅಪರಾಧ. ಹೀಗಾಗಿ ಹಾಟ್‌ಸ್ಟಾರ್ ಕೂಡ ಕಾನೂನು ಸಮರಕ್ಕೆ ಮುಂದಾದರೆ, ಗಾಮಸ್ಥರಿಗೆ ಸಂಕಷ್ಟಕ್ಕೆ ಸಿಲುಕುವುದು ಪಕ್ಕಾ.

     'ಅಖಂಡ' ಮೂಲಕ ಗೆದ್ದು ಬೀಗಿದ ಬಾಲಕೃಷ್ಣ

    'ಅಖಂಡ' ಮೂಲಕ ಗೆದ್ದು ಬೀಗಿದ ಬಾಲಕೃಷ್ಣ

    ಇತ್ತೀಚೆಗಿನ ದಿನಗಳಲ್ಲಿ ಬಾಲಕೃಷ್ಣ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದವು. ನಿರ್ದೇಶಕ ಬೊಯಪಟ್ಟಿ ಶ್ರೀನು ಸಿನಿಮಾ ಕೂಡ ಹೀನಾಯವಾಗಿ ಸೋತಿತ್ತು. 'ಅಖಂಡ' ಇಬ್ಬರಿಗೂ ಸೂಪರ್ ಸಕ್ಸಸ್ ಕೊಟ್ಟಿದೆ. ಈ ಸಿನಿಮಾ ಮೂಲಕ ಇಬ್ಬರೂ ಟಾಲಿವುಡ್‌ನಲ್ಲಿ ಮತ್ತೆ ಚಾಲ್ತಿಗೆ ಬಂದಿದ್ದು, ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಬರುತ್ತಿವೆ. ಬಾಲಕೃಷ್ಣ ಗೋಪಿಚಂದ್ ನಿರ್ದೇಶನದ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದು, ಈ ಸಿನಿಮಾದಲ್ಲಿ ದುನಿಯಾ ವಿಜಯ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

    English summary
    Andra Pradesh village viewers will face a legal action for watching Akhanda Movie. A small village in Andhra Pradesh state enjoyed Balakrishna Starrer Akhanda on a big project screen now in trouble for facing legal action.
    Tuesday, January 25, 2022, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X